ಮದುವೆ ಆಗಿದ್ದಾರೆ ಅಂದಿದ್ದಕ್ಕೆ ಬೆಂಡೆತ್ತಿ ಬ್ರೇಕ್ ಹಾಕಿದ ಪೂನಂ ಬಾಜ್ವಾ

By Suneetha

ದಕ್ಷಿಣ ಭಾರತದ ಖ್ಯಾತ ನಟಿ ಪೂನಂ ಬಾಜ್ವಾ ಗೊತ್ತಲ್ವಾ?. ಅದೇ ಇತ್ತೀಚೆಗೆ ತೆರೆಕಂಡ ಲವ್ಲಿ ಸ್ಟಾರ್ ಪ್ರೇಮ್ ಅವರ 'ಮಸ್ತ್ ಮೊಹಬ್ಬತ್' ಎಂಬ ಕನ್ನಡ ಸಿನಿಮಾದಲ್ಲಿ ಮುದ್ದು-ಮುದ್ದಾಗಿ ಮಿಂಚಿದ್ರಲ್ವಾ?. ಅವರೆ.

ಇದೀಗ ನಟಿ ಪೂನಂ ಬಾಜ್ವಾ ಅವರಿಗೆ ತೆಲುಗು ನಿರ್ದೇಶಕ ಸುನೀಲ್ ರೆಡ್ಡಿ ಅವರ ಜೊತೆ ಸದ್ದಿಲ್ಲದೇ ಮದುವೆಯಾಗಿದೆ, ಇಬ್ಬರೂ ರಿಜಿಸ್ಟ್ರಾರ್ ಆಫೀಸ್ ನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ದಂಪತಿಗಳಾಗಿದ್ದಾರೆ ಎಂದು ಯಾರೋ ಸುದ್ದಿ ಹಬ್ಬಿಸಿದ್ದಾರೆ.[ಲವ್ಲಿ ಸ್ಟಾರ್ 'ಮಸ್ತ್ ಮೊಹಬ್ಬತ್' ಗೆ ವಿಮರ್ಶಕರು ಏನಂದ್ರು]

Southern Actress Poonam Bajwa quashes Marriage rumours

ಪೂನಂ ಅವರ ಆಪ್ತರು ಮತ್ತು ಹಿತೈಷಿಗಳು ನವ ದಂಪತಿಗಳಿಗೆ ಶುಭ ಹಾರೈಸಲು ಕರೆ ಮಾಡಿದಾಗ ಈ ಸುದ್ದಿ ಶುದ್ದ ಸುಳ್ಳು ಅನ್ನೋದು ಗೊತ್ತಾಗಿದೆ. ಮಾತ್ರವಲ್ಲದೇ ಇದೀಗ ಈ ವದಂತಿಯನ್ನು ನಟಿ ಪೂನಂ ಬಾಜ್ವಾ ಅವರು ಕೂಡ ತಳ್ಳಿ ಹಾಕಿದ್ದಾರೆ.

"ನಾನು ಯಾರನ್ನೂ ಮದ್ವೆ ಅಗಿಲ್ಲ, ಕೆಲವು ದಿನಗಳ ಹಿಂದೆ ನನ್ನ ಸಹೋದರಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾಳೆ. ಬಹುಶಃ ಇದು ವದಂತಿಗೆ ಕಾರಣವಾಗಿರಬಹುದು, ಸುನೀಲ್ ರೆಡ್ಡಿ ನನ್ನ ಕ್ಲೋಸ್ ಫ್ರೆಂಡ್ ಅಷ್ಟೇ.

ಈಗ ಅನಗತ್ಯವಾಗಿ ಇಲ್ಲ-ಸಲ್ಲದ ಸುದ್ದಿ ಹಬ್ಬಿಸಿ ಅವರ ಹೆಸರನ್ನು ನನ್ನ ಹೆಸರಲ್ಲಿ ಥಳುಕು ಹಾಕಲಾಗಿದೆ. ಸದ್ಯಕ್ಕೆ ನನಗೆ ಮದುವೆಯಾಗುವ ಯಾವುದೇ ಯೋಚನೆ ಇಲ್ಲ. ಮದುವೆ ಆಗುವ ಸಂದರ್ಭದಲ್ಲಿ ನಾನು ಎಲ್ಲರಿಗೆ ತಿಳಿಸಿಯೇ ಮದುವೆ ಆಗುತ್ತೇನೆಯೇ ಹೊರತು, ಕದ್ದು ಮುಚ್ಚಿ ಆಗೋದಿಲ್ಲ' ಎಂದು ಪೂನಂ ಬಾಜ್ವಾ ಅವರು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.

ಸದ್ಯಕ್ಕೆ ನಟಿ ಪೂನಂ ಬಾಜ್ವಾ ಅವರು ತಮಿಳು ನಟ ಸುಂದರ್ ಸಿ. ನಟನಾಗಿ ಕಾಣಿಸಿಕೊಳ್ಳುತ್ತಿರುವ ತಮಿಳು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

-

-

-

-

-

-

More from Filmibeat

English summary
'Mast Mohabbat' fame Actress Poonam Bajwa dismissed rumours that she is planning to get married and said she is currently busy with her professional life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X