»   » ಮದುವೆ ಗಾಸಿಪ್ ಹಬ್ಬಿಸಿದವರಿಗೆ ಬೆಂಡೆತ್ತಿದ 'ಮಿಲ್ಕಿ' ಬ್ಯೂಟಿ ತಮನ್ನಾ

ಮದುವೆ ಗಾಸಿಪ್ ಹಬ್ಬಿಸಿದವರಿಗೆ ಬೆಂಡೆತ್ತಿದ 'ಮಿಲ್ಕಿ' ಬ್ಯೂಟಿ ತಮನ್ನಾ

Posted By:
Subscribe to Filmibeat Kannada

ದಕ್ಷಿಣ ಭಾರತದ 'ಮಿಲ್ಕಿ' ಬ್ಯೂಟಿ ನಟಿ ತಮನ್ನಾ ಭಾಟಿಯಾ ಅವರು ಮದುವೆಯಾಗುತ್ತಿದ್ದಾರೆ. ತದನಂತರ ತಮ್ಮ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ನಿನ್ನೆ ತಾನೆ ಎಲ್ಲಾ ಕಡೆ ಗುಲ್ಲೆದ್ದಿತ್ತು.

ಇದೀಗ ಈ ಗಾಸಿಪ್ ಅನ್ನು ನಟಿ ತಮನ್ನಾ ಭಾಟಿಯಾ ಅವರು ತಳ್ಳಿ ಹಾಕಿದ್ದಾರೆ. 'ಇದೊಂದು ಸುಳ್ಳು ಸುದ್ದಿ, ನಾನು ಮದುವೆಯಾಗುತ್ತಿಲ್ಲ. ನಾನು ದಾಂಪತ್ಯ ಜೀವನಕ್ಕೆ ಕಾಲಿಡುವ ದಿನ ಬಂದಾಗ ಅದನ್ನು ಮೊದಲು ನಾನೇ ಇಡೀ ಪ್ರಪಂಚಕ್ಕೆ ತಿಳಿಸುತ್ತೇನೆ' ಎಂದು ತಮನ್ನಾ ಅವರು ಕೊಂಚ ಗರಂ ಆಗಿಯೇ ಸ್ಪಷ್ಟನೆ ನೀಡಿದ್ದಾರೆ.[ಬಾಹುಬಲಿಯಲ್ಲಿ ದಂಗುಬಡಿಸುವ ತಮನ್ನಾಳ ಸೌಂದರ್ಯ]

Southern Actress Tamanna Bhatia quashes Marriage rumours

ಸದ್ಯಕ್ಕೆ ನಾನೀಗ ಪ್ರಭುದೇವ್ ಅವರ ಮುಂದಿನ ಚಿತ್ರ ಹಾಗೂ ಇತರ ಕೆಲವು ತಮಿಳು-ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಖಡಕ್ ಆಗಿ ಹೇಳಿಕೆ ನೀಡುವ ಮೂಲಕ ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ್ದಾರೆ.

'ಬಾಹುಬಲಿ' ಖ್ಯಾತಿಯ ನಟಿ ತಮನ್ನಾ ಅವರು ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದು, ಕಳೆದ ಕೆಲವು ದಿನಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.[ತಮನ್ನಾ ಭಾಟಿಯಾಗೆ ರಾಜಮೌಳಿ ಸ್ಪೆಷಲ್ ಗಿಫ್ಟ್]

ಮಾತ್ರವಲ್ಲದೇ 'ಬಾಹುಬಲಿ 2' ಸಿನಿಮಾ ಆದ ಕೂಡಲೇ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಗಾಳಿಸುದ್ದಿ ಟಾಲಿವುಡ್-ಕಾಲಿವುಡ್ ಅಂಗಳದಲ್ಲಿ ಹಬ್ಬಿತ್ತು.[ವಿಮರ್ಶೆ: ಹಿಮ್ಮತ್ ವಾಲಾ ಅಸಲಿ ಮಜಾ ಹಾಳ್ಮಾಡ್ಬಿಟ್ಟ]

ತಮಿಳು-ತೆಲುಗು ಹಿಂದಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪಂಜಾಬಿ ಬೆಡಗಿ ತಮ್ಮ ಮಿಲ್ಕಿ ಬ್ಯೂಟಿಯಿಂದ ಹಾಗೂ ಬಬ್ಲಿ ಬಬ್ಲಿ ನಟನೆಯಿಂದ ಸಾಕಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ.

-
-
-
-
-
-
-
-
-
-
-
-
-
ಮದುವೆ ಗಾಸಿಪ್ ಹಬ್ಬಿಸಿದವರಿಗೆ ಬೆಂಡೆತ್ತಿದ 'ಮಿಲ್ಕಿ' ಬ್ಯೂಟಿ ತಮನ್ನಾ

ಮದುವೆ ಗಾಸಿಪ್ ಹಬ್ಬಿಸಿದವರಿಗೆ ಬೆಂಡೆತ್ತಿದ 'ಮಿಲ್ಕಿ' ಬ್ಯೂಟಿ ತಮನ್ನಾ

-
-
English summary
'Baahubali' actress Tamannaah Bhatia on Tuesday (19th April) dismissed rumours that she is planning to get married and said she is currently busy with her professional life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada