Sowjanya Case: ಆತನನ್ನು ಜಾಡಿಸಿದರೆ ಪ್ರಕರಣದ ಸತ್ಯ ಹೊರಬರುತ್ತೆ ಎಂದ ಪ್ರಥಮ್!

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ‌. ಹೌದು, 2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಪ್ರಕರಣ ಇನ್ನೂ ಸಹ ಮುಕ್ತಾಯಗೊಂಡಿಲ್ಲ. ಅತ್ಯಾಚರ ಎಸಗಿದವ ಯಾರೆಂಬ ಸತ್ಯ ಇನ್ನೂ ಹೊರಬಂದಿಲ್ಲ.

ಈ ಪ್ರಕರಣದ ಬಗ್ಗೆ ಸುಮಾರು 11 ವರ್ಷಗಳಿಂದ ಚರ್ಚೆಯಾಗುತ್ತಿದ್ದರೂ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ, ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಪ್ರಮುಖ ಆರೋಪಿ ಎಂದು ಬಂಧಿಸಲಾಗಿದ್ದ ಸಂತೋಷ್ ರಾವ್ ಅನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿದೆ.

olle-hudga-pratham-slams-police

ಈ ಬೆಳವಣಿಗೆ ಬಳಿಕ ಮತ್ತೆ ಸೌಜನ್ಯ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಆರಂಭಿಸಿದೆ. ಫೇಸ್‌ಬುಕ್‌, ಟ್ವಿಟರ್ ಅಪ್ಲಿಕೇಶನ್‌ಗಳಲ್ಲಿ 'ಜಸ್ಟಿಸ್ ಫಾರ್ ಸೌಜನ್ಯ' ಅಭಿಯಾನ ಆರಂಭ ಆಗಿದೆ. ನೆಟ್ಟಿಗರು ಈ ಕುರಿತು ಸಾಕಷ್ಟು ಟ್ವೀಟ್ ಮಾಡಿ ತಮ್ಮ ಕೋಪವನ್ನು ಹೊರಹಾಕುತ್ತಿದ್ದು, ಸೆಲೆಬ್ರಿಟಿಗಳೂ ಸಹ ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.‌ ಮೊನ್ನೆಯಷ್ಟೇ ನಟ ದುನಿಯಾ ವಿಜಯ್ ಈ ಕುರಿತು ತಮ್ಮ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಈ ಬಳಿಕ‌ ಇದೀಗ ಒಳ್ಳೆ ಹುಡ್ಗ ಪ್ರಥಮ್ ಸೌಜನ್ಯ ಪ್ರಕರಣದ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಸೌಜನ್ಯ ಕುಟುಂಬದ ಬಗ್ಗೆ ನೋವಿದೆ, ಮಧ್ಯರಾತ್ರಿಯಾದ್ರೂ ನಿದ್ರೆ ಬರ್ತಿಲ್ಲ. ತನಿಖೆಯಿಂದ ನೋ ಯೂಸ್. 2012ರಲ್ಲಿ ಅತ್ಯಾಚಾರ ಆದಾಗ ಇದ್ದ ಪೊಲೀಸನ್ನು ಜಾಡಿಸಿದರೆ ಮಾತ್ರ ಸತ್ಯ ತಿಳಿಯಲಿದೆ.

ನನ್ನ ಬೇಸರ ಸಂತೋಷ್ ರಾವ್ ಗೆ ಅನ್ಯಾಯವಾಗಿರೋ ಬಗ್ಗೆ. ಮುಂದೆ ನಾನು ಭಾಗವಹಿಸುವ 2 ಕಾರ್ಯಕ್ರಮದ ದುಡ್ಡನ್ನು ಸಂತೋಷ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ. ತುಂಬಾ ಸಾಲವಾಗಿದೆ,ದುಡ್ಡಿಲ್ಲ" ಎಂದು ಪ್ರಥಮ್ ಬರೆದುಕೊಂಡಿದ್ದಾರೆ‌.

ಈ ಮೂಲಕ‌ ಪ್ರಥಮ್ ಇಷ್ಟು ದಿನಗಳ ಕಾಲ ಅಪರಾಧಿ ಎಂಬ ಪಟ್ಟ ಹೊತ್ತುಕೊಂಡಿದ್ದ ಸಂತೋಷ್ ರಾವ್ ಕುರಿತು ಬೇಸರ ಹೊರಹಾಕಿ ಅವರಿಗೆ ಸಹಾಯ ಮಾಡಲು ಚಿಂತಿಸಿದ್ದು, ಈ ಘಟನೆ ನಡೆದ ಸಂದರ್ಭದಲ್ಲಿ ತನಿಖೆ ನಡೆಸಿದ್ದ ಪೊಲೀಸರನ್ನು ಸರಿಯಾಗಿ ವಿಚಾರಿಸಿದರೆ ಸತ್ಯ ಹೊರಬೀಳಲಿದೆ ಎಂದು ಅನುಮಾನ ಹೊರಹಾಕಿದ್ದಾರೆ‌.

ದುನಿಯಾ ವಿಜಯ್ ಟ್ವೀಟ್ ವೈರಲ್:

ದುನಿಯಾ ವಿಜಯ್ ಇಂದು (ಆಗಸ್ಟ್ 1) ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ "ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ, ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು -ಬುದ್ಧ" ಎಂದು ಬರೆದು ಫೋಸ್ಟ್ ಮಾಡಿದ್ದರು. ಈ ಮೂಲಕ ಸೌಜನ್ಯ ಕುಟುಂಬಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

More from Filmibeat

English summary
Sowjanya Case: Olle Hudga Pratham slams police who investigated the Sowjanya Case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X