Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಆಕ್ಟ್-1978' ಸಿನಿಮಾ ವೀಕ್ಷಿಸಲಿರುವ ಶಾಸಕಿ ಸೌಮ್ಯ ರೆಡ್ಡಿ; ನಿರ್ದೇಶಕರು ಹೇಳಿದ್ದೇನು?
ಕೊರೊನಾ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಆಕ್ಟ್-1978 ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರೇಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಉತ್ತಮ ಸಿನಿಮಾ ವೀಕ್ಷಿಸಿ ಸಂತಸ ಪಡುತ್ತಿದ್ದಾರೆ. ಆಕ್ಟ್-1978 ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಚಿತ್ರಪ್ರಿಯರು ಮಾತ್ರವಲ್ಲದೆ ಸಿನಿಮಾರಂಗದ ಗಣ್ಯರು, ರಾಜಕೀಯ ವ್ಯಕ್ತಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಹ ಆಕ್ಟ-1978 ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಆಕ್ಟ್-1978 ಸಿನಿಮಾವನ್ನು ವೀಕ್ಷಿಸುವುದಾಗಿ ಶಾಸಕಿ ಸೌಮ್ಯ ರೆಡ್ಡಿ ಹೇಳಿದ್ದಾರೆ.
'ಆಕ್ಟ್-1978' ಸಿನಿಮಾದ ಬೆಂಜಮಿನ್ ಪಾತ್ರಕ್ಕೆ ನಟನನ್ನು ಹುಡುಕಿದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಗುರುವಾರ ಮಧ್ಯಾಹ್ನ ಜೆ.ಪಿ ನಗರದ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಆಕ್ಟ್-1978 ಸಿನಿಮಾ ನೋಡುತ್ತಿದ್ದಾರೆ. ವಿಶೇಷ ಎಂದರೆ ಸೌಮ್ಯ ರೆಡ್ಡಿ, ತಮ್ಮ ಕ್ಷೇತ್ರದ ಪಾಲಿಕೆ ಸಿಬ್ಬಂದಿ ಮತ್ತು ಕೊರೊನಾ ವಾರಿಯರ್ಸ್ ಜೊತೆ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಈ ಬಗ್ಗೆ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಚಲನಚಿತ್ರ ನಿರ್ದೇಶಕರಾದ ಚೈತನ್ಯ ಕೆ.ಎಂ ಸರ್ ಅವರಿಂದ ಒಂದು ಫೋನ್ ಕಾಲ್ ಬಂತು. ಅವರು ಫೋನ್ ಹಸ್ತಾಂತರಿಸಿದ್ದು ಸೌಮ್ಯ ರೆಡ್ಡಿ ಅವರಿಗೆ. 'ನಿಮ್ಮ ಸಿನಿಮಾ ಬಗ್ಗೆ ತುಂಬಾ ಕೇಳಿದಿನಿ, ನಾನು ಮತ್ತು ನಮ್ಮ ಕ್ಷೇತ್ರದ ಪಾಲಿಕೆ ಸಿಬ್ಬಂದಿ ಹಾಗು ಕೋವಿಡ್ ವಾರಿಯರ್ಸ್ ಸಿನಿಮಾ ನೋಡಬೇಕು, ಹತ್ತಿರದಲ್ಲಿ ಎಲ್ಲಿದೆ?" ಎಂದು ಕೇಳಿದರು. "ಮೇಡಂ, ನೀವ್ ಎಲ್ಲಿ ನೋಡ್ತೀರೋ ಅಲ್ಲಿ ಶೋ ಅರೇಂಜ್ ಮಾಡ್ತೀವಿ" ಅಂದಾಗ. "ಬೇಡಿ, ನಾವೇ ಬುಕ್ ಮಾಡಿಕೊಂಡು ನೋಡ್ತೀವಿ, ಥಿಯೇಟರ್ ಹೇಳಿ ಸಾಕು" ಅಂದ್ರು ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಬೆಂಗಳೂರು ಕಮಿಷನರ್ ಕಚೇರಿ ಸಿಬ್ಬಂದಿ ಸಿನಿಮಾವನ್ನು ವೀಕ್ಷಿಸಿದ್ದರು. ಆಕ್ಟ್-1978 ಸಿನಿಮಾ ಮೆಚ್ಚಿಕೊಂಡ ಪೊಲೀಸ್ ಅಧಿಕಾರಿಗಳು, ನಿರ್ದೇಶಕ ಮಂಸೋರೆ, ಸಂಚಾರಿ ವಿಜಯ್ ಸೇರಿದಂತೆ ಇಡೀ ತಂಡವನ್ನು ಕಮಿಷನರ್ ಆಫೀಸಿಗೆ ಕರೆದು ಅಭಿನಂದನೆ ಸಲ್ಲಿಸಿದ್ದರು. ಎಲ್ಲಾ ಕಡೆಯಿಂದನೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾತಂಡ ಸಂತದಲ್ಲಿದೆ.