For Quick Alerts
  ALLOW NOTIFICATIONS  
  For Daily Alerts

  ಸಾಧು ಕೋಕಿಲ ಕೂಡ ನನ್ನ ಗುರು ಎಂದರು ಎಸ್ ಪಿ ಬಿ

  |

  ''ಸಾಧು ಕೋಕಿಲ ಕೂಡ ನನ್ನ ಗುರು'' ಎಂದು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹೇಳಿದಾಗ ಅಲ್ಲಿದ್ದ ಕೆಲವರಿಗೆ ಅಚ್ಚರಿ ಆಯ್ತು.

  ಅಂದಹಾಗೆ, ಎಸ್ ಪಿ ಬಿ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲ ಅವರ ಹೊಸ ಸ್ಟೂಡಿಯೊವನ್ನು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಎಸ್ ಪಿ ಬಿ ಸಾಧು ಕೋಕಿಲ ರನ್ನು ಗುರು ಎಂದರು.

  ಸಾಧುಗಿಂತ ಮ್ಯೂಸಿಕ್ ನಲ್ಲಿ ದೊಡ್ಡ ಪ್ರತಿಭೆ, ಅನುಭವ ಹೊಂದಿರುವ ಎಸ್ ಪಿ ಬಿ ಗುರು ಎಂದು ಹೇಳಿದ್ದಕ್ಕೂ ಕಾರಣ ಇದೆ. ಎಸ್ ಪಿ ಬಿ ದೃಷ್ಟಿಯಲ್ಲಿ ಅವರ ಜೊತೆಗೆ ಕೆಲಸ ಮಾಡಿದ ಪ್ರತಿ ಸಂಗೀತ ನಿರ್ದೇಶಕರು ಕೂಡ ಗುರುಗಳಂತೆ. ಮ್ಯೂಸಿಕ್ ಡೈರೆಕ್ಟರ್ ಗಳು ನಮಗೆ ಹಾಡುವ ಅವಕಾಶ ನೀಡಿ, ಹೇಗೆ ಹಾಡಬೇಕು ಎಂದೂ ಹೇಳಿಕೊಡುತ್ತಾರೆ ಹಾಗಾಗಿ ನನಗೆ ಅವರೆಲ್ಲ ಗುರುಗಳು ಎಂದಿದ್ದಾರೆ.

  ಎಸ್ ಪಿ ಬಿ ಅವರು ಸಾಧುಕೋಕಿಲ ಸಂಗೀತ ನಿರ್ದೇಶನದ ಅನೇಕ ಸಿನಿಮಾಗಳಿಗೆ ಹಾಡಿದ್ದಾರೆ. ಎಸ್ ಪಿ ಬಿ ಸಾಧು ಅವ್ರ ಮೆಚ್ಚಿನ ಗಾಯಕರಾಗಿದ್ದು, ಅವರ ಕೈನಲ್ಲಿಯೇ ತಮ್ಮ ಸ್ಟೂಡಿಯೊವನ್ನು ಲಾಂಚ್ ಮಾಡಿಸಿದ್ದಾರೆ.

  ಡಬ್ಬಿಂಗ್, ಗ್ರಾಪಿಕ್ಸ್, ರೆಕಾರ್ಡಿಂಗ್ ಸೇರಿದಂತೆ ಅನೇಕ ಕೆಲಸಗಳು ಇಲ್ಲಿ ನಡೆಯಲಿದೆ. ತಮ್ಮ ಹೊಸ ಸ್ಟೂಡಿಯೊಗೆ ಸುರಾಗ್ ಎಂದು ಮಗನ ಹೆಸರನ್ನು ಇಟ್ಟಿದ್ದಾರೆ.

  English summary
  Popular indian singers SP Balasubrahmanyam inaugurated Sadhu Kokila's new music studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X