ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಮೊದಲ ಹಾಗೂ ಕೊನೆಯ ಕನ್ನಡ ಹಾಡುಗಳು ಇವು

ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್‌ಪಿಬಿ ಗೆ ದೇಶದಾದ್ಯಂತ ಅಸಂಖ್ಯ ಅಭಿಮಾನಿಗಳಿದ್ದಾರೆ. ಆದರೆ ಎಸ್‌ಪಿಬಿ ಗೆ ಕನ್ನಡದ ಅಭಿಮಾನಿಗಳ ಮೇಲೆ ವಿಶೇಷ ಪ್ರೀತಿ ಇತ್ತು.

ಎಸ್‌ಪಿಬಿ ತಮ್ಮ ಜೀವನದ ಮೊದಲ ಸಿನಿಮಾ ಹಾಡು ಹಾಡಿದ ಕೆಲವೇ ದಿನಗಳಲ್ಲಿ ತಮ್ಮ ಮೊದಲ ಕನ್ನಡ ಸಿನಿಮಾ ಹಾಡು ಹಾಡಿದ್ದರು. ಅವರು ಹಾಡುಗಾರಿಕೆಯ ಅತ್ಯಾರಂಭದಲ್ಲೇ ಕನ್ನಡದ ಹಾಡು ಹಾಡಿದ್ದರು ಎಸ್‌ಪಿಬಿ. ವಿಶೇಷವೆಂದರೆ ಅವರು ಹಾಡಿದ ಮೊದಲ ತೆಲುಗು ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಅವರ ಹೆಸರು ಇರಲಿಲ್ಲ, ಆದರೆ ಕನ್ನಡ ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಅವರ ಹೆಸರು ಹಾಕಲಾಗಿತ್ತು.

1966 ಡಿಸೆಂಬರ್ ಅಂತ್ಯದಲ್ಲಿ ಎಸ್‌ಪಿಬಿ ಅವರು ತಮ್ಮ ಜೀವನದ ಮೊದಲ ತೆಲುಗು ಹಾಡನ್ನು ಸಹ ಗಾಯಕರಾಗಿ ಹಾಡಿದರು. ಅದಾದ ಕೆಲವೇ ದಿನಗಳಲ್ಲಿ ಕನ್ನಡದ ಮೊದಲ ಹಾಡನ್ನು ತಾವೇ ಮುಖ್ಯಗಾಯಕರಾಗಿ ಹಾಡಿದರು. ಎಸ್‌ಪಿಬಿ ಮೊದಲು ಹಾಡಿದ ಕನ್ನಡ ಸಿನಿಮಾ 'ನಕ್ಕರೆ ಅದೇ ಸ್ವರ್ಗ'.

ನಕ್ಕರೆ ಅದೇ ಸ್ವರ್ಗ ಸಿನಿಮಾದ ಹಾಡು ಹಾಡಿದ್ದರು ಎಸ್‌ಪಿಬಿ

ನಕ್ಕರೆ ಅದೇ ಸ್ವರ್ಗ ಸಿನಿಮಾದ ಹಾಡು ಹಾಡಿದ್ದರು ಎಸ್‌ಪಿಬಿ

ಅರುಣ್ ಕುಮಾರ್, ಜಯಂತಿ ನಟಿಸಿದ್ದ 'ನಕ್ಕರೆ ಅದೇ ಸ್ವರ್ಗ' ಸಿನಿಮಾದ 'ಕನಸಿದೋ ನನಸಿದೋ ಮುಗುದ ಮನಸಿನ ಬಿಸಿ ಬಯಕೆಯೋ' ಹಾಡು, ಎಸ್‌ಪಿಬಿ ಕನ್ನಡದಲ್ಲಿ ಹಾಡಿದ ಮೊದಲ ಹಾಡು, ಅವರ ಜೀವನದಲ್ಲಿ ಮುಖ್ಯ ಗಾಯಕನಾಗಿ ಹಾಡಿದ ಮೊದಲ ಹಾಡೂ ಸಹ ಇದೆ. ಈ ಸಿನಿಮಾದಲ್ಲಿ ನರಸಿಂಹರಾಜು ಮುಖ್ಯಪಾತ್ರಧಾರಿಯಾಗಿದ್ದರು.

ಎಂ ರಂಗರಾವ್ ಮೊದಲ ಕನ್ನಡ ಹಾಡು ಹಾಡಿಸಿದ್ದರು

ಎಂ ರಂಗರಾವ್ ಮೊದಲ ಕನ್ನಡ ಹಾಡು ಹಾಡಿಸಿದ್ದರು

ಮೊದಲ ಕನ್ನಡ ಹಾಡನ್ನು ಎಸ್‌ಪಿಬಿ ಕೈಯಲ್ಲಿ ಹಾಡಿಸಿದ್ದು ಎಂ ರಂಗಾರಾವ್ ಎಂಬ ಸಂಗೀತ ನಿರ್ದೇಶಕರು. ಎಸ್‌ಪಿಬಿ ಹಾಡಿದ ತೆಲುಗು ಹಾಡಿಗೆ ವೀಣೆ ನುಡಿಸಿದ್ದ ರಂಗಾರಾವ್, ಎಸ್‌ಪಿಬಿ ಪ್ರತಿಭೆ ಗುರುತಿಸಿ ಅವರಿಗೆ ಕನ್ನಡದಲ್ಲಿ ಅವಕಾಶ ಕೊಟ್ಟರು. ಆಮೇಲಿನದ್ದು ಇತಿಹಾಸ.

Recommended Video

SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Filmibeat
ಕೊನೆಯ ಹಾಡು ಹಾಡಿದ್ದು ಪುನೀತ್‌ ರಾಜ್‌ಕುಮಾರ್ ಗೆ

ಕೊನೆಯ ಹಾಡು ಹಾಡಿದ್ದು ಪುನೀತ್‌ ರಾಜ್‌ಕುಮಾರ್ ಗೆ

ಕನ್ನಡದಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಕನ್ನಡದಲ್ಲಿ ಹಾಡಿದ ಕೊನೆಯ ಹಾಡು, ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಮಾಯಾಬಜಾರ್ 2016' ಸಿನಿಮಾದ 'ಲೋಕ ಮಯಾ ಬಜಾರು' ಹಾಡು. ಆ ಹಾಡಿಗೆ ಪುನೀತ್ ರಾಜ್‌ಕುಮಾರ್ ನರ್ತಿಸಿದ್ದಾರೆ.

More from Filmibeat

English summary
SP Balasubrahmanyam's first Kannada song was 'Nakkare Ade Swarga' movie song and last song was 'Loka Maya Bazaru' for Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X