ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಪುತ್ರ ಚರಣ್

ಕೊರೊನಾ ಪಾಸಿಟಿವ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿದೆಯೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಎಸ್ ಪಿ ಬಿ ಸದ್ಯ ಚೆನ್ನೈನ ಎಂಜಿಎಂ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Recommended Video

Superstar : Priyanka Upendra ಅವರು Niranjan Sudhindra ಬಗ್ಗೆ ಹೇಳಿದ್ದೇನು | Filmibeat Kannada

ನಿನ್ನೆ ( ಆಗಸ್ಟ್ 14) ಎಸ್ ಬಿ ಪಿ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಆಸ್ಪತ್ರೆ, ಆರೋಗ್ಯ ಗಂಭೀರವಾಗಿದ್ದು ತುರ್ತು ನಿಗಾಘಟಕ್ಕಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದರು. ಹೆಲ್ತ್ ಬುಲೆಟಿನ್ ಬಿಡುಗೆಯಾಗುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಆಂತಕಕ್ಕೊಳಲಾಗಿದ್ದಾರೆ. ಎಸ್ ಪಿ ಬಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಈ ನಡುವೆ ಲೆಜೆಂಡರಿ ಗಾಯಕನ ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡುತ್ತಿವೆ.

ಈ ಬಗ್ಗೆ ಎಸ್ ಪಿ ಬಿ ಪುತ್ರ, ನಿರ್ಮಾಪಕ ಎಸ್ ಪಿ ಚರಣ್ ಅಪ್ಪನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚರಣ್ "ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ನಿಜ. ಆದರೆ ಅವರು ಎಂಜಿಎಂ ಆಸ್ಪತ್ರೆ ವೈದ್ಯರ ರಕ್ಷಣೆಯಲ್ಲಿ ಸುರಕ್ಷಿತರಾಗಿದ್ದಾರೆ. ಎಸ್ ಪಿ ಬಿ ಶೀಘ್ರದಲ್ಲಿಯೇ ಗುಣಮುಖರಾಗಿ ಹಿಂತಿರುಗಲಿದ್ದಾರೆ ಎಂದು ವಿಶ್ವಾಸವಿದೆ. ನಿಮ್ಮ ಕಾಳಜಿ ಮತ್ತು ಪ್ರಾರ್ಥನೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

SP Balasubrahmanyam Son SP Charan Reaction About His Father Health Condition

ಇನ್ನೂ ಎಸ್ ಪಿ ಬಿ ಅವರ ಸಹೋದರಿ ಎಸ್ ಪಿ ವಸಂತ ಸಹ ಪ್ರತಿಕ್ರಿಯೆ ನೀಡಿದ್ದಾರೆ. "ಸಹೋದರನ ಮನಸ್ಥೈರ್ಯ ಬಲವಾಗಿದೆ. ಮತ್ತು ಅವರ ಹಿತೈಶಿಗಳ ಪ್ರಾರ್ಥನೆ ಮತ್ತು ದೇವರ ಅನುಗ್ರಹದಿಂದ ಅವರು ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಸುರಕ್ಷಿತವಾಗಿ ಮನೆಗೆ ಮರಳುತ್ತಾರೆ" ಎಂದು ಹೇಳಿದ್ದಾರೆ.

ಇನ್ನೂ ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ 'ಬಾಲು..ಬೇಗ ಹುಷಾರಾಗಿ ಬಾ..' ಎಂದು ಭಾವುಕ ಸಂದೇಶ ರವಾನಿಸಿದ್ದಾರೆ. ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಈ ನಡುವೆ ಎಸ್ ಪಿ ಬಿ ತೀವ್ರ ನಿಗಾಘಟಕದಿಂದನೇ ಥಮ್ಸ್ ಅಪ್ ಮಾಡಿ ಆರೋಗ್ಯ ವಾಗಿದ್ದೀನಿ ಎಂದು ಹೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

More from Filmibeat

English summary
S P Balasubrahmanyam's Son SP Charan reaction about his Father Health condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X