ತೂಕ ಇಳಿಸಿಕೊಂಡಿದ್ದೇ ಎಸ್ ಪಿ ಬಿ ಆರೋಗ್ಯಕ್ಕೆ ಮುಳುವಾಯ್ತಾ?

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಹ್ಮಣ್ಯಂ ಅವರು ಇನ್ನು ನೆನಪು ಮಾತ್ರ. ಶುಕ್ರವಾರ ಮಧ್ಯಾಹ್ನ 1.04ರ ಸುಮಾರಿಗೆ ಎಸ್ ಪಿ ಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಸ್ ಪಿ ಬಿ ಇನ್ನಿಲ್ಲ ಎನ್ನುವ ಮಾತನ್ನು ಅವರ ಅಭಿಮಾನಿಗಳು, ಸ್ನೇಹಿತರು ಹೆಚ್ಚಾಗಿ ಅವರ ಅಪಾರ ಶಿಷ್ಯ ವೃಂದಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಳೆದ ಒಂದು ತಿಂಗಳಿಂದ ಎಸ್ ಪಿ ಬಿ ತೀವ್ರ ನಿಗಾ ಘಟಕದಲ್ಲಿ, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಕೊರೊನಾ ನೆಗೆಟಿವ್ ಬಂದರೂ ಎಸ್ ಪಿ ಬಿ ಆರೋಗ್ಯ ಸುಧಾರಿಸಿರಲಿಲ್ಲ. ಆದರೂ ಬೇಗ ಗುಣಮುಖರಾಗಿ ಮತ್ತೆ ಬರ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ಎಸ್ ಪಿ ಬಿ ಅವರಿಗೆ ಇಮ್ಯುನಿಟಿ ಶಕ್ತಿ ಕಡಿಮೆ ಆಗಲು ಕಾರಣ ತೂಕ ಇಳಿಸಿಕೊಂಡಿರುವುದು ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

135 ಕೆಜಿ ಯಿಂದ 96 ಕೆಜಿ ತೂಕ ಇಳಿಸಿಕೊಂಡಿದ್ದ ಎಸ್ ಪಿ ಬಿ

135 ಕೆಜಿ ಯಿಂದ 96 ಕೆಜಿ ತೂಕ ಇಳಿಸಿಕೊಂಡಿದ್ದ ಎಸ್ ಪಿ ಬಿ

2012ರಲ್ಲಿ ಎಸ್ ಪಿ ಬಿ ಬಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಒಳಗಾಗಿದ್ದರು. ಈ ಚಿಕಿತ್ಸೆಯ ಬಳಿಕ ಎಸ್ ಪಿ ಬಿ ಇಮ್ಯೂನಿಟಿ ಶಕ್ತಿ ಕಡಿಮೆಯಾಗಿತ್ತು ಎಂದು ಹೇಳಲಾಗುತ್ತಿದೆ. ಸರ್ಜರಿ ಮಾಡಿಸಿಕೊಳ್ಳುವ ಮೊದಲು ಎಸ್ ಪಿ ಬಿ 135 ಕೆಜಿ ತೂಕ ಹೊಂದಿದ್ದರು. ಸರ್ಜರಿ ಬಳಿಕ 96 ಕೆಜೆ ತೂಕಕ್ಕೆ ಇಳಿಸಿಕೊಂಡಿದ್ದರು.

ತೂಕ ಇಳಿಸಿಕೊಂಡ ಬಗ್ಗೆ ಎಸ್ ಪಿ ಬಿ ಹೇಳಿದ್ದೇನು?

ತೂಕ ಇಳಿಸಿಕೊಂಡ ಬಗ್ಗೆ ಎಸ್ ಪಿ ಬಿ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ್ದ ಎಸ್ ಪಿ ಬಿ "ತೂಕ ಇಳಿಸಿಕೊಳ್ಳುವ ಚಿಕಿತ್ಸೆಗೆ ಒಳಗಾಗುವುದನ್ನು ಅನೇಕರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ಇದನ್ನ ಒಪ್ಪಲ್ಲ. ನಾನು 35ಕ್ಕು ಹೆಚ್ಚು ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಶಸ್ತ್ರಚಿಕಿತ್ಸೆ ಮತ್ತು ಅದು ನನ್ನನ್ನು ಉತ್ತಮ ಗಾಯಕನನ್ನಾಗಿ ಮಾಡಿದೆ, ನನಗೆ ಉತ್ತಮ ಜೀವನ ಮಟ್ಟವನ್ನು ನೀಡಿದೆ" ಎಂದು ಹೇಳಿದ್ದರು.

ಇಮ್ಯುನಿಟಿ ಶಕ್ತಿ ಕಡಿಮೆ ಆಗಿತ್ತು- ಅರ್ಚನಾ ಉಡುಪ

ಇಮ್ಯುನಿಟಿ ಶಕ್ತಿ ಕಡಿಮೆ ಆಗಿತ್ತು- ಅರ್ಚನಾ ಉಡುಪ

ತೂಕ ಇಳಿಸಿಕೊಂಡ ಬಳಿಕ ಎಸ್ ಪಿ ಬಿ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು, ಇಮ್ಯುನಿಟಿ ಶಕ್ತಿ ಕಡಿಮೆ ಆಗಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗಾಯಕಿ ಅರ್ಚನಾ ಉಡುಪ ಸಹ ಮಾತನಾಡಿದ್ದಾರೆ. ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅರ್ಚನಾ ಉಡುಪ, ಎಸ್ ಪಿ ಬಿ ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾಕಿದರು. ಈ ಸಮಯದಲ್ಲಿ ತೂಕ ಇಳಿಸಿಕೊಂಡ ಬಳಿಕ ಇಮ್ಯುನಿಟಿ ಶಕ್ತಿ ಕಡಿಮೆ ಆಗಿತ್ತು ಎನ್ನುವ ಮಾತನ್ನು ಹೇಳಿದ್ದಾರೆ.

Recommended Video

ಕೊನೆಯ ಬಾರಿಗೆ ಫೇಸ್ಬುಕ್ ಲೈವ್ ಬಂದ SPB ಹೇಳಿದ್ದೇನು ಗೊತ್ತಾ..? | SPB Last Social media LIVE | Filmibeat
ಗಣ್ಯರ ಸಂತಾಪ

ಗಣ್ಯರ ಸಂತಾಪ

ಎಸ್ ಪಿ ಬಿ ಇನ್ನಿಲ್ಲ ಎನ್ನುವ ಸುದ್ದಿ ಭಾರತೀಯ ಸಂಗೀತ ಲೋಕಕ್ಕೆ ಆಘಾತವುಂಟು ಮಾಡಿದೆ. ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಸೇರಿದಂತೆ ಎಲ್ಲರೂ ಎಸ್ ಪಿ ಬಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಪಾರ ಶಿಷ್ಯವೃಂದ ದುಃಖ ಸಾಗರದಲ್ಲಿ ಮುಳುಗಿದ್ದಾರೆ.

More from Filmibeat

English summary
SP balasubrahmanyam undergoing weight loss surgery on 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X