ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಎಸ್ ಪಿ ಬಿ ಗರಂ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಎಸ್.ಜಾನಕಿ ನಿಧನದ ವದಂತಿ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಎಸ್. ಜಾನಕಿ ಆರೋಗ್ಯವಾಗಿದ್ದಾರೆ, ದಯವಿಟ್ಟು ಗಾಳಿಸುದ್ದಿ ಹಬ್ಬಿಸಬೇಡಿ ಎಂದು ಪುತ್ರ ಮುರಳಿ ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
Recommended Video
ಭಾನುವಾರ ಬೆಳಗ್ಗೆಯಿಂದ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡುತ್ತಿದ್ದಾರೆ. ಎಸ್.ಜಾನಕಿ ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುತ್ರ ಮುರಳಿ ಕೃಷ್ಣ ಸ್ಪಷ್ಟಪಡಿಸುವ ಮೂಲಕ ಹರಿದಾಡುತ್ತಿದ್ದ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈ ಸುದ್ದಿ ಕೇಳಿ ಖ್ಯಾತ ಲೆಜಂಡರಿ ಗಾಯಕ ಎಸ್ ಪಿ ಬಾಲಸುಭ್ರಮಣ್ಯಂ ಗರಂ ಆಗಿದ್ದಾರೆ. ಮುಂದೆ ಓದಿ..

ಅಸಮಾಧಾನ ವ್ಯಕ್ತಪಡಿಸಿದ ಎಸ್ ಪಿ ಬಿ
ಎಸ್. ಜಾನಕಿ ಇನ್ನಿಲ್ಲ ಎನ್ನುವ ವದಂತಿ ಕೇಳಿ ಖ್ಯಾತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಭ್ರಮಣ್ಯಂ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ಮೂಲಕ ಗಾಳಿ ಸುದ್ದಿ ಹಬ್ಬಿಸುವವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ದಯವಿಟ್ಟು ಸಾಮಾಜಿಕ ಜಾಲತಾಣವನ್ನು ಹೀಗೆಲ್ಲ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಾನಕಿ ಅಮ್ಮ ಆರೋಗ್ಯವಾಗಿದ್ದಾರೆ
"ಇಂದು ಬೆಳಗ್ಗೆ ನನಗೆ 20ಕ್ಕು ಹೆಚ್ಚು ಕರೆಗಳು ಬಂದಿದೆ. ಜಾನಕಿಯಮ್ಮ ಅವರ ಆರೋಗ್ಯದ ವಿಚಾರವಾಗಿ. ಕೆಲವರು, ಸಾಮಾಜಿಕ ಜಾಲತಾಣದಲ್ಲಿ ಅವರು ಇನ್ನಿಲ್ಲ ಎನ್ನುವ ಸುದ್ದಿ ಹಬ್ಬಿಸಿದ್ದಾರೆ. ಏನ್ ನಾನ್ ಸೆನ್ಸ್ ಇದು. ನಾನು ಅವರ ಜೊತೆ ಮಾತನಾಡಿದ್ದೀನಿ. ಅವರು ಆರಾಮಾಗಿ, ಆರೋಗ್ಯವಾಗಿದ್ದಾರೆ" ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸ ಬೇಡಿ
"ಅನೇಕ ಜನ ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರಿಗೆ ಇಂತಹ ಸುದ್ದಿ ಕೇಳಿ ಹೃದಯಘಾತವಾಗುತ್ತೆ. ದಯವಿಟ್ಟು ಇಂತಹ ಸುದ್ದಿಗಳನ್ನು ಹಬ್ಬಿಸ ಬೇಡಿ. ಇಂತಹ ಸುದ್ದಿಗಳನ್ನು ಹಬ್ಬಿಸಿ ಫನ್ ಮಾಡಬೇಡಿ. ಸಾಮಾಜಿಕ ಜಾಲತಾಣವನ್ನು ಹೀಗೆಲ್ಲ ಬಳಸಿಕೊಳ್ಳಬೇಡಿ. ಜಾನಕಿ ಅಮ್ಮ ತುಂಬಾ ಆರೋಗ್ಯವಾಗಿ ಸೇಫ್ ಆಗಿ ಇದ್ದಾರೆ. ಯಾಕೆ ಹೀಗೆಲ್ಲ ಮಾಡುತ್ತಿರಾ? "

ಈ ಹಿಂದೆಯೂ ಹೀಗೆ ಆಗಿತ್ತು
ಖ್ಯಾತ ಗಾಯಕಿಯ ಆರೋಗ್ಯದ ಬಗ್ಗೆ ವದಂತಿ ಹಬ್ಬುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅಂದರೆ 2016 ಮತ್ತು 2017ರಲ್ಲಿಯೂ ಇದೆ ರೀತಿಯ ವದಂತಿ ಹಬ್ಬಿತ್ತು. ಎಸ್.ಜಾನಕಿ ಅವರ ಆರೋಗ್ಯಕ್ಕೆ ಸಂಬಂಧಿಸಿದಂದೆ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತೆ. ಕುಟುಂಬದವರು ಸ್ಪಷ್ಟನೆ ನೀಡುವ ಮೂಲಕ ರೂಮರ್ ಗೆ ತೆರೆ ಎಳೆಯುತ್ತಿರುತ್ತಾರೆ. ಎಸ್. ಜಾನಕಿ ಅವರಿಗೀಗ 82 ವರ್ಷ. ಎಸ್. ಜಾನಕಿ ಸುಮಾರು 17 ಭಾಷೆಯಲ್ಲಿ 48 ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











