Spandana Death: ವಿದೇಶದಿಂದ ಸ್ಪಂದನಾ ಮೃತದೇಹ ತರಲು ಇರುವ ಕಾನೂನು ಪ್ರಕ್ರಿಯೆಗಳು

ಚಂದನ ವನವನ್ನು ಶೋಕಕ್ಕೆ ನೂಕಿರುವುದು ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಕಾಲಿನ ಮರಣ. ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಯ ಪತಿ, ಮಗ ಮತ್ತು ಅಪಾರ ಬಂಧುಬಳಗವನ್ನು ಬಿಟ್ಟು ಹೋಗಿರುವ ಸ್ಪಂದನಾ ನಿಧನಕ್ಕೆ ಇಡೀ ಚಿತ್ರರಂಗ, ರಜಕೀಯ ನಾಯಕರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ವಿದೇಶ ಪ್ರವಾಸದಲ್ಲಿದ್ದ ವೇಳೆಯೇ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿರುವ ಅವರ ಮೃತದೇಹವನ್ನು ಬೆಂಗಳೂರಿಗೆ ತರಲು ಪ್ರಕ್ರಿಯೆ ಆರಂಭವಾಗಿದೆ.

ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಅಲ್ಲಿಯೇ ಕಿಂಗ್ ಚುಲಾಂಗ್‌ಕಾರ್ನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ ಮೃತದೇಹವನ್ನು ಬೆಂಗಳೂರಿಗೆ ತರಲು ಹಲವು ಕಾನೂನು ಪ್ರಕ್ರಿಯೆಗಳು ನಡೆಯಬೇಕಿದೆ. ಇದೇ ಕಾರಣಕ್ಕೆ ಮಂಗಳವಾರ ರಾತ್ರಿಯ ಹೊತ್ತಿಗೆ ಇಲ್ಲಿಗೆ ಪಾರ್ಥಿವ ಶರೀರ ತಲುಪುವ ಸಾಧ್ಯತೆಯಿದೆ.

legal-procedure-to-bring-spandana-dead-body

ಆಗಸ್ಟ್ ಎಂಟರ ಬೆಳಗ್ಗೆ ಮರಣೋತ್ತರ ಪರೀಕ್ಷೆ ಮುಗಿದಿದ್ದು, ವರದಿಯನ್ನು ರಾಯಭಾರ ಕಚೇರಿಗೆ ತಲುಪಿಸಲಾಗಿದೆ. ಇದಾದ ನಂತರವೂ ಕೆಲವು ಪ್ರಕ್ರಿಯೆಗಳನ್ನು ಕುಟುಂಬಸ್ಥರು ಮುಗಿಸಬೇಕಿದ್ದು, ಆ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ ಸ್ಪಂದನಾ ಅವರ ಪಾರ್ಥಿವ ಶರೀರ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ರವಾನೆಯಾಗುವ ಸಾಧ್ಯತೆಯಿದೆ.

ಮೃತದೇಹ ತರುವ ಪ್ರಕ್ರಿಯೆ ಹೇಗಿರಲಿದೆ?

* ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ

* ಮರಣೋತ್ತರ ಪರೀಕ್ಷೆಯ ವರದಿ ಪಡೆಯಲಿರುವ ಸ್ಥಳೀಯ ಪೊಲೀಸರು

*ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ ಇರಬೇಕು

* ಸಹಜಸಾವು ಎಂದಿದ್ದರೇ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ

* ಮರಣ ಪ್ರಮಾಣ ಪತ್ರದ ಜೊತೆಗೆ ಪರಿಪೂರ್ಣವಾಗಿ ಪೊಲೀಸ್ ರಿಪೋರ್ಟ್ ಪಡೆದುಕೊಳ್ಳಬೇಕು

legal-procedure-to-bring-spandana-dead-body

* ಮರಣೋತ್ತರ ಪರೀಕ್ಷೆಯ ವರದಿ ಬೇರೆ ಭಾಷೆಯಲ್ಲಿದ್ದರೇ ಇಂಗ್ಲೀಷ್​ಗೆ ಬದಲಾಯಿಸಬೇಕು

* ಮೃತರ ಪಾಸ್​ಪೋರ್ಟ್​, ವೀಸಾದ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು

* ದಾಖಲೆಗಳನ್ನು ಥಾಯ್ಲೆಂಡ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಬೇಕು

* ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು

* ಈ ವರದಿಗಳನ್ನು ವಿಮಾನ ನಿಲ್ದಾಣದಲ್ಲಿ ಸಲ್ಲಿಸಬೇಕು

* ಇಷ್ಟು ಪ್ರಕ್ರಿಯೆಗಳ ಬಳಿಕ ಬ್ಯಾಂಕಾಕ್‌ನಿಂದ ಮೃತದೇಹ ಬೆಂಗಳೂರಿಗೆ ಬರಲಿದೆ

ಸ್ಪಂದನಾ ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ?

ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿರುವ ಅವರ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್, "ಬ್ಯಾಂಕಾಕ್​ನಲ್ಲಿ ಪೋಸ್ಟ್ ಮಾರ್ಟಂ ಮುಗಿದಿದೆ. ರಾತ್ರಿ 11ರ ವೇಳೆಗೆ ಸ್ಪಂದನಾ ಮೃತದೇಹ ಬೆಂಗಳೂರಿಗೆ ಬರಲಿದೆ. ರಾತ್ರಿಯಿಂದ ನಾಳೆ (ಆಗಸ್ಟ್ 9) ಮಧ್ಯಾಹ್ನದವರೆಗೂ ಮಲ್ಲೇಶ್ವರಂನ ಬಿ.ಕೆ. ಶಿವರಾಂ (ಸ್ಪಂದನಾ ತಂದೆ) ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ಬಳಿಕ ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ" ಎಂದಿದ್ದಾರೆ.

More from Filmibeat

English summary
Spandana Death updates: Here are the legal proceedings to bring the dead body of Vijay Raghavendra's wife Spandana from Bangkok. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X