ಕಾಫಿಡೇಯಲ್ಲಿ ವಿಜಯ್- ಸ್ಪಂದನಾ ಮಧ್ಯೆ ಕಿರಿಕ್.. ನಂತರ ಲವ್, ಮದುವೆ ಆಗಿದ್ದೇಗೆ?
ಸೋಮವಾರ ಬೆಳ್ಳಂಬೆಳಗ್ಗೆ ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಂದೆರಗಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ಧಾರೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಅಭಿಮಾನಿಗಳು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಬಿ. ಕೆ ಶಿವರಾಂ ಪುತ್ರಿಯಾದ ಸ್ಪಂದನಾ 2007ರಲ್ಲಿ ವಿಜಯ ರಾಘವೇಂದ್ರ ಕೈ ಹಿಡಿದಿದ್ದರು.
ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ತಮ್ಮ ಹಾಗೂ ಸ್ಪಂದನಾ ಲವ್ ಸ್ಟೋರಿ ಬಿಚ್ಚಿಟ್ಟಿದ್ದರು. "ನಾನು ಬಹಳ ಸಂಕೋಚದ ವ್ಯಕ್ತಿತ್ವದವನು. ಆಕೆಯನ್ನು ಮಾತನಾಡಿಸಲು 3 ವರ್ಷ ತೆಗೆದುಕೊಂಡಿದ್ದೆ. 2004ರಲ್ಲಿ ಒಂದು ಹುಡುಗಿಯನ್ನು ನೋಡುತ್ತೇನೆ. ಮಲ್ಲೇಶ್ವರಂ ಕಾಫಿ ಡೇಯಲ್ಲಿ. ಮತ್ತೆ 2006ರಲ್ಲಿ ಮತ್ತೆ ಅದೇ ಹುಡುಗಿಯನ್ನು ನೋಡ್ತೀನಿ ಶೇಷಾದ್ರಿಪುರಂ ಕಾಫಿಡೇಯಲ್ಲಿ. ಅಲ್ಲಿಂದ ಮುಂದೆ ಲವ್ ಸ್ಟೋರಿ ಶುರುವಾಯಿತು.

ಮೊದಲ ಬಾರಿಗೆ ಸ್ನೇಹಿತರ ಬಳಿ ರಾಘು ತಾವು ಸ್ಪಂದನಾ ಅವರನ್ನು ಇಷ್ಟಪಟ್ಟಿರುವ ಸಂಗತಿ ಬಿಚ್ಚಿಟ್ಟಿದ್ದರು. ಹುಡುಗಿ ಬಿ. ಕೆ ಶಿವರಾಂ ಮಗಳು ಎನ್ನುತ್ತಿದ್ದಂತೆ ಸ್ನೇಹಿತರು ಶಾಕ್ ಆಗಿದ್ದರು. ವಿಜಯ ರಾಘವೇಂದ್ರ ತುಂಬಾ ಒಳ್ಳೆ ಹುಡುಗ ಎಂದು ಎಲ್ಲರೂ ಹೆಣ್ಣು ಕೊಡಲು ಬರುತ್ತಿದ್ದರು. ಯಾವ ಹುಡುಗಿಯನ್ನು ಕೇಳಿದರು ಬೇಡ ಎನ್ನುತ್ತಿದ್ದ, ಯಾವುದಾದರೂ ಹುಡುಗಿ ನೋಡಿಕೊಂಡಿದ್ದೀಯಾ ಎಂದಾಗ ಸ್ಪಂದನಾ ಬಗ್ಗೆ ವಿಜಿ ಹೇಳಿದ್ದ ಎಂದು ತಂದೆ ಚಿನ್ನೇಗೌಡರು ನೆನಪಿಸಿಕೊಂಡಿದ್ದರು.
ಶೇಷಾದ್ರಿಪುರಂ ಕಾಫಿಡೇಯಲ್ಲಿ ಮೊದಲಿಗೆ ಇಬ್ಬರು ಭೇಟಿ ಆಗಿದ್ದರು. ಅವತ್ತು ಸ್ಪಂದನಾಗೆ ಮ್ಯೂಸಿಕ್ ಜೋರಾಗಿ ಬೇಕಿತ್ತು. ವಿಜಯ್ ಯಾರೊಟ್ಟಿಗೋ ಏನೋ ಡಿಸ್ಕಸ್ ಮಾಡುತ್ತಿದ್ದರು. ಹಾಗಾಗಿ ಅವರಿಗೆ ಸೌಂಡ್ ಕಮ್ಮಿ ಮಾಡುವಂತೆ ಹೇಳಿದ್ದರು. ಅಲ್ಲಿ ಸಣ್ಣದಾಗಿ ಕ್ಲ್ಯಾಶ್ ಆಗಿತ್ತು. ನಂತರ 3 ವರ್ಷಗಳ ಬಳಿಕ ಮತ್ತೆ ಕಾಫಿ ಡೇಯಲ್ಲಿ ನೋಡಿದ್ದು. ಆ ದಿನ ಸ್ನೇಹಿತರ ಜೊತೆ ಕುಳಿತಿದ್ದ ಸ್ಪಂದನಾ ಬಳಿ ಹೋಗಿ ವಿಜಯ್ ರಾಘವೇಂದ್ರ ಪರಿಚಯ ಮಾಡಿಕೊಂಡಿದ್ದರು. ಆಗ ಏನು ಹೇಳಬೇಕು ಎಂದು ಗೊತ್ತಾಗದೇ ಸ್ಪಂದನಾ ಮೌನವಾಗಿದ್ದರಂತೆ.
ಬಳಿಕ ವಿಜಯ್ ರಾಘವೇಂದ್ರ ಕಸೀನ್ ಮೂಲಕ ಬಿ. ಕೆ ಶಿವರಾಂ ಹಾಗೂ ಚಿನ್ನೇಗೌಡರು ಮಾತನಾಡಿ ಮದುವೆ ನಿಶ್ಚಯವಾಯಿತು. ತಂದೆ ಸ್ಪಂದನಾ ಬಳಿ ನಿನಗೆ ಇಷ್ಟ ಇದ್ದರೆ ವಿಜಯ್ ರಾಘವೇಂದ್ರ ಜೊತೆ ಮದುವೆ ಮಾಡಿಸುತ್ತೇನೆ ಎಂದರಂತೆ. ಕಂಡಿತ ಇಷ್ಟ ಎಂದು ಸ್ಪಂದನಾ ಹೇಳಿದ್ದ ಮೇಲೆ ತಿಂಗಳೊಳಗೆ ಮದುವೆ ಫಿಕ್ಸ್ ಆಗಿತ್ತು.

ವಿಜಯ್ ರಾಘವೇಂದ್ರ ಮಾತನಾಡಿ ಮೊದಲಿಗೆ ಕಾಫಿಡೇಯಲ್ಲಿ ನೋಡಿದೆ. ಮತ್ತೆ 3 ವರ್ಷಗಳ ಬಳಿಕ ಕಾಫಿಡೇನಲ್ಲಿ ನೋಡಿ ಬಹಳ ಮುದ್ದಾಗಿದ್ದಾಳೆ, ಇವತ್ತು ಮಾತನಾಡಿಸಲೇಬೇಕು. ಇವತ್ತು ಮಿಸ್ ಆದರೆ ಮತ್ತೆ ಮಾತನಾಡಿಸಲು ಸಾಧ್ಯವಿಲ್ಲ ಎಂದು ಹೇಳಿ ಧೈರ್ಯ ಮಾಡಿ ಮಾತನಾಡಿಸಿದ್ದೆ. ನಂತರ ಜಿಮ್‌ನಲ್ಲಿ ಮದುವೆ ಮನೆಯಲ್ಲಿ ನೋಡಿದ್ದೆ. ಅಷ್ಟರಲ್ಲಿ ಮನೆಯಲ್ಲಿ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಬಳಿಕರ ತಂದೆ ಬಳಿ ಹೇಳಿ ಸ್ಪಂದನಾ ಜೊತೆ ಮದುವೆಗೆ ಒಪ್ಪಿಸಿದ್ದರಂತೆ.


Click it and Unblock the Notifications











