Spandana: ಪಂಚಭೂತಗಳಲ್ಲಿ ಲೀನರಾದ ಸ್ಪಂದನಾ, ವಿಧಿವಿಧಾನ ನೆರವೇರಿಸಿದ ರಾಘು, ಆರ್ಯ

ಸೋಮವಾರ ಬ್ಯಾಂಕಾಕ್‌ನಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇನ್ನು ನೆನಪಷ್ಟೆ. ಬೆಂಗಳೂರಿನ ಹರಿಶ್ಚಂದ್ರ ಘಾಟ್‌ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಈಡಿಗ ಸಂಪ್ರದಾಯದಂತೆ ಸ್ಪಂದನಾ ಅಂತ್ಯಕ್ರಿಯೆ ನಡೆದಿದ್ದು, ವಿಜಯ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಈ ವೇಳೆ ರಾಘು ಭಾವುಕರಾಗಿದ್ದಾರೆ.

ಸ್ಪಂದನಾ ಪಾರ್ಥಿವ ಶರೀರಕ್ಕೆ ಮದುವೆಯಲ್ಲಿ ಧರಿಸಿದ್ದ ಸೀರೆಯನ್ನು ಉಡಿಸಲಾಗಿತ್ತು ಎನ್ನಲಾಗಿದೆ. ಮಧ್ಯಾಹ್ನ 3ರ ಬಳಿಕ ಮಲ್ಲೇಶ್ವರಂ ನಿವಾಸದಿಂದ ಹರಿಶ್ಚಂದ್ರ ಘಾಟ್‌ವರೆಗೂ ವಿಶೇಷ ವಾಹನದಲ್ಲಿ ಸ್ಪಂದನಾರ ಅಂತಿಮ ಯಾತ್ರೆ ನಡೆಸಲಾಯಿತು. ದಾರಿಯುದ್ದಕ್ಕೂ ಜನಸಾಗರ ತುಂಬಿತ್ತು. ಅಭಿಮಾನಿಗಳು, ಕುಟುಂಬಸ್ಥರು, ಚಿತ್ರರಂಗದ ತಾರೆಯರು ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದರು.

Spandana funeral: Spandana Vijay raghavendra funeral performed at harishchandra ghat

ಹರಿಶ್ಚಂದ್ರ ಘಾಟ್‌ನ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಮುದ್ದಿನ ಮಡದಿಯನ್ನು ಕಳಿಸಿಕೊಡುವಾಗ ವಿಜಯ ರಾಘವೇಂದ್ರ ಮತ್ತು ಅವರ ಮಗ ಶೌರ್ಯ ಭಾವುಕರಾಗಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅಪ್ಪು ಮಕ್ಕಳು ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನಟ ಶಿವರಾಜ್ ಕುಮಾರ್, ಪತ್ನಿ ಗೀತಾ, ಸ್ಪಂದನಾ ತಂದೆ ಬಿಕೆ ಶಿವರಾಂ ಸೇರಿದಂತೆ ಚಿತ್ರರಂಗದ ಗಣ್ಯರು ಅಂತ್ಯಕ್ತಿಯೆಯಲ್ಲಿ ಭಾಗಿಯಾಗಿದ್ದರು. ಮೈದುನ ಮುರುಳಿ ಅಣ್ಣ ಮತ್ತು ಆರ್ಯನನ್ನು ಸಂತೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಮಧ್ಯಾಹ್ನ ಮಲ್ಲೇಶ್ವರಂನ ಬಿಕೆ ಶಿವರಾಂ ಮನೆಯಲ್ಲಿ ಸ್ಪಂದನಾ ಅಂತಿಮ ದರ್ಶನಕ್ಕೆ ನಟ ಯಶ್, ರಮೇಶ್ ಅರವಿಂದ್, ಮೇಘನಾ ರಾಜ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ನೆನಪಿರಲಿ ಪ್ರೇಮ್, ಅನಿರುದ್ಧ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ಸಾಧುಕೋಕಿಲ, ಉಮಾಶ್ರೀ, ವಿನೋದ್ ರಾಜ್, ಪ್ರಿಯಾಂಕಾ ಉಪೇಂದ್ರ, ಜಯರಾಮ್ ಕಾರ್ತಿಕ್, ಪ್ರಣಮ್ ದೇವರಾಜ್, ಸುಂದರ್ ರಾಜ್, ಅಮೂಲ್ಯಾ, ಸೃಜನ್ ಲೋಕೇಶ್, ಧನ್ಯಾ ರಾಮ್‌ಕುಮಾರ್, ದೊಡ್ಡಣ್ಣ, ನಿರೂಪಕಿ ಅನುಶ್ರೀ ಸೇರಿದಂತೆ ಚಂದನವನದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿದ್ದರು.

ಪ್ರೀತಿಯ ಮಡದಿಯನ್ನು ಕಳೆದುಕೊಂಡ ರಾಘುಗೆ ದೇವರೆ ಗತಿ. ಆತನ ನೋವನ್ನು ದೇವರೆ ಕಡಿಮೆ ಮಾಡಬೇಕು ಎನ್ನುತ್ತಿದೆ ಚಿತ್ರರಂಗ.

More from Filmibeat

English summary
Spandana funeral: actor Vijay raghavendra wife Spandana Vijay Raghavendra funeral performed at harishchandra ghat . know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X