Spandana Vijay Death: ಸ್ಪಂದನಾ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಪಾರ್ಥೀವ ಶರೀರ ಎದುರು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಜಯ್

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ಹೃದಯಾಘಾತದಿಂದ ಬ್ಯಾಂಕಾಕ್‌ನಲ್ಲಿ ಕೊನೆಯುಸಿರೆಳೆದಿದ್ದರು. ಅದೇ ದಿನ ವಿಜಯ ರಾಘವೇಂದ್ರ ಬ್ಯಾಂಕಾಕ್‌ಗೆ ತೆರಳಿಸಿದ್ದರು. ಥಾಯ್ಲೆಂಡ್‌ನಲ್ಲಿ ಪೋಸ್ಟ್‌ಮಾರ್ಟಂ ಬಳಿಕ ವಿದೇಶಾಂಗ ಇಲಾಖೆ ಪ್ರಕ್ರಿಯೆ ಮುಗಿದ ನಂತರ ಸ್ಪಂದನಾ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲಾಗಿದೆ. ನಿನ್ನೆ (ಆಗಸ್ಟ್ 8) ರಾತ್ರಿ 11:30ರ ಸುಮಾರಿಗೆ ವಿಜಯ ರಾಘವೇಂದ್ರ ಬಂದಿಳಿದ್ದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್ ರಾಘವೇಂದ್ರ ಬರುವಿಕೆಗಾಗಿ ಕುಟುಂಬ ಸದಸ್ಯರು ಹಾಗೂ ಸ್ಪಂದನಾ ಕುಟುಂಬ ಸದಸ್ಯರು ಕಾಯುತ್ತಿದ್ದರು. ಶ್ರೀಮುರಳಿ, ಯೋಗಿ ಜಿ ಗೌಡ, ಸ್ಪಂದನಾರ ಚಿಕ್ಕಪ್ಪ ರಾಜಕೀಯ ಮುಖಂಡ ಬಿ. ಕೆ ಹರಿಪ್ರಸಾದ್, ಮಾಜಿ ಸಚಿವ ಮುನಿರತ್ನ ಈ ವೇಳೆ ಹಾಜರಿದ್ದರು. ಸಹ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇನ್ನು ಈಡಿಗ ಸಮುದಾಯದಂತೆ ಸ್ಪಂದನಾ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೀತಿದೆ.

Spandana Vijay Ragahavendras mortal remains reach Bengaluru, kept for last darshan

ಇಂದು(ಆಗಸ್ಟ್ 9) ಬೆಳಗ್ಗೆ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತವರು ಮನೆಯಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನ ಅಂತಿಮ ದರ್ಶನಕ್ಕೆ ಬರಲಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಸಾಲುಗಟ್ಟಿ ಸ್ಪಂದನಾ ವಿಜಯ್ ರಾಘವೇಂದ್ರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಬಿ. ಕೆ ಶಿವರಾಂ ಮನೆಯಲ್ಲಿ ನೀರವ ಮೌನ ಆವರಿಸಿದೆ. ಇನ್ನು ವಿಜಯ್ ರಾಘವೇಂದ್ರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ರಾತ್ರಿಯಿಂದಲೂ ನಟ ಕೋಮಲ್, ವಿಜಯ್ ರಾಘವೇಂದ್ರ ಮಾವ ರಾಘವೇಂದ್ರ ರಾಜಕುಮಾರ್, ಶಿವರಾಜ್‌ಕುಮಾರ್, ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ ಸುಧಾರಾಣಿ, ಗಾಯಕ ವಿಜಯ್‌ಪ್ರಕಾಶ್, ಹಿರಿಯ ನಟ ಶ್ರೀನಾಥ್ ಸೇರಿದಂತೆ ಆಪ್ತರು, ಸ್ನೇಹಿತರು ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ನಟ ವಿಜಯ್ ರಾಘವೇಂದ್ರ ಪ್ರಯಾಣಿಸಿದ ಬಂದ ಥಾಯ್ ಏರ್‌ವೇಸ್ ವಿಮಾನದಲ್ಲಿಯೇ ಕಾರ್ಗೊ ವಿಭಾಗದಲ್ಲಿ ಪತ್ನಿ ಸ್ಪಂದನಾ ಕೂಡ ತರಲಾಯಿತು. ಇನ್ನು ಸ್ಪಂದನಾ ಮೃತದೇಹ ರವಾನೆಗೆ ವಿಮಾನ ನಿಲ್ದಾಣದಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಆಗಿತ್ತು. ವಿಜಯ್ ರಾಘವೇಂದ್ರ, ಸಹೋದರ ಶ್ರೀಮುರಳಿ ಜೊತೆ ಮನೆಯತ್ತ ಬಂದರು. ವಿಮಾನ ನಿಲ್ದಾಣದಲ್ಲಿ ಕೆಲವು ನಿಯಮ ಹಾಗೂ ಪರಿಶೀಲನೆ ಮುಗಿದ ಬಳಿಕ ಸ್ಪಂದನಾರ ಮೃತದೇವಹವನ್ನು ಸಿಬ್ಬಂದಿ ಸ್ಪಂದನಾರ ಕುಟುಂಬಕ್ಕೆ ಹಸ್ತಾಂತರಿಸಿದರು.

ತಮ್ಮ ಸ್ನೇಹಿತರು ಹಾಗೂ ಕಸೀನ್ ಜೊತೆ ಸ್ಪಂದನಾ ಕಳೆದ ವಾರ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದರು. ಹೃದಯಾಘಾತವಾಗಿ 37 ವರ್ಷ ವಯಸ್ಸಿನ ಸ್ಪಂದನಾ ಮಲಗಿದ್ದ ಸ್ಥಿತಿಯಲ್ಲಿಯೇ ಕೊನೆಯುಸಿರೆಳೆದಿದ್ದಾಗಿ ವರದಿಯಾಗಿದೆ. ವಿಜಯ್ ಹಾಗೂ ಸ್ಪಂದನಾ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು 2007ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಸ್ಪಂದನಾ 'ಕಿಸ್ಮತ್' ಸಿನಿಮಾ ನಿರ್ಮಿಸಿದ್ದರು. ರವಿಚಂದ್ರನ್ ನಿರ್ದೇಶಿಸಿ ನಟಿಸಿದ 'ಅಪೂರ್ವ' ಚಿತ್ರದಲ್ಲಿ ನಟಿಸಿದ್ದರು.

ರಾಘವೇಂದ್ರ ರಾಜಕುಮಾರ್ ಮಾತನಾಡಿ, "ಇದಕ್ಕೆ ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಹೋದವರು ಹೊರಟು ಹೋಗ್ತಾರೆ. ಇರುವವರ ಕಷ್ಟ ನೋಡಿ. ಅವರ ತಂದೆಗೆ, ರಾಘುಗೆ ಏನ್ ಹೇಳೋಣ. ಆಗಿದ್ದೆಲ್ಲಾ ಮರೆತುಬಿಡಿ ಅನ್ಬೇಕಾ? ಅಪ್ಪ ರಾಘು ನಮ್ಮ ಜೊತೆ ಬೆಳೆದವರು. ಭಗವಂತ ಅವರಿಗೆ ದುಖ: ಭರಿಸುವ ಶಕ್ತಿ ಕೊಡಲಿ. ವಿಜಯರಾಘವೇಂದ್ರ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಪ್ರಪಂಚದಲ್ಲಿ ಎಲ್ಲಾ ಕಡೆ ಆಗುತ್ತದೆ. ಆದರೆ ನಮ್ಮ ಆಪ್ತರಿಗೆ ಆದಾಗ ಆಗುವ ನೋವು ದೊಡ್ಡದು" ಎಂದಿದ್ದಾರೆ.

More from Filmibeat

English summary
Spandana Vijay Ragahavendra's mortal remains reach Bengaluru, kept for last darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X