'ಬಾಳಿ ಬದುಕಬೇಕಿದ್ದ ಮಗು ಕಾಲವಾಯಿತು': ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಚಿತ್ರರಂಗದ ಸಂತಾಪ

ಬೆಂಗಳೂರು, ಆಗಸ್ಟ್. 07: ಚಂದನವನದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೂರು ದಿನಗಳ ಹಿಂದೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದು, ಕಳೆದ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಾಗಿ ನಿಧನರಾಗಿದ್ದಾರೆ. ಸ್ಪಂದನಾ ಅವರ ನಿಧನಕ್ಕೆ ಕುಟುಂಬ ವರ್ಗದ ಜೊತೆಗೆ ಇಡೀ ಚಿತ್ರರಂಗ ಮತ್ತು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್ ನವರಸ ನಾಯಕ ಜಗ್ಗೇಶ್, ನಟಿ ಪಾರುಲ್ ಯಾದವ್, ನಿರ್ದೇಶಕ ಶಶಾಂಕ್ ಸೇರಿಸಂತೆ ಹಲವು ಮಂದಿ ಕಂಬನಿ ಮಿಡಿದಿದ್ದಾರೆ. "ಬಾಳಿ ಬದುಕಬೇಕಿದ್ದ ಮಗು ಕಾಲವಾಯಿತು ಎಂದು ಟಿವಿ ಯಲ್ಲಿ ನೋಡಿ ಭಾವುಕನಾದೆ.. ನಶ್ವರ ಜಗತ್ತು" ಎಂದು ನಟ, ರಾಜಕಾರಣಿ ಜಗ್ಗೇಶ್ ನೋವು ತೋಡಿಕೊಂಡಿದ್ದಾರೆ.

Spandana Vijay Raghavendra Death: Kannada Film Industry condolences

ನಟ ವಸಿಷ್ಠ ಸಿಂಹ ಕೂಡ ಸ್ಪಂದನಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಶ್ರೀಮತಿ ಸ್ಪಂದನಾ ವಿಜಯರಾಘವೇಂದ್ರ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಯಿತು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿ ರಾಘುರವರಿಗೂ, ಅವರ ಕುಟುಂಬಕ್ಕೂ ಆ ದೇವರು ಕರುಣಿಸಲೆಂದು ಪ್ರಾರ್ಥಿಸುವೆ.. ಸದ್ಗತಿ" ಎಂದಿದ್ದಾರೆ.

ಸಿನಿಮಾ ನಿರ್ದೇಶಕ ಶಶಾಂಕ್ ಸ್ಪಂದನಾ ಸಾವು ಆಘಾತಕಾರಿ ಎಂದಿದ್ದಾರೆ. "ಸ್ಪಂದನ ಇನ್ನಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ ಸುದ್ದಿ. ಗೆಳೆಯ ವಿಜಯ ರಾಘವೇಂದ್ರ ಮತ್ತು ಆತನ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ. ಓಂಶಾಂತಿ" ಎಂದು ಟ್ವೀಟ್ ಮಾಡಿದ್ದಾರೆ.

Spandana Vijay Raghavendra Death: Kannada Film Industry condolences

"ಓ ದೇವರೆ. ಇದು ಮನಸ್ಸನ್ನು ಹಿಂಡುತ್ತಿದೆ.. ಈ ಸಮಯದಲ್ಲಿ ವಿಜಯ್ ಮತ್ತು ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು .. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ನಟಿ ಪಾರುಲ್ ಯಾದವ್ ತಮ್ಮ ಸಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಕೂಡ ಸಮಾಆಜಿಕ ಮಾಧ್ಯಮಗಳಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ. "ಮೊದಲು ವಿಷಯ ಕೇಳಿದಾಗ ಈ ಸುದ್ದಿ ಸುಳ್ಳಾಗಿರಲಿ ಅಂತ ಬೇಡಿಕೊಂಡೆ... ಆದ್ರೆ ಭಗವಂತನೂ ನಿಷ್ಕರುಣಿ ಆಗ್ಬಿಟ್ರು... ಇದು ನಿಜಕ್ಕೂ ದೊಡ್ಡ ಶಾಕ್... ಸ್ಪಂದನಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ... ರಾಘಣ್ಣನಿಗೆ ಈ ನೋವು ಭರಿಸೋ ಶಕ್ತಿ ಭಗವಂತ ಕೊಡಲಿ... ಓಂಶಾಂತಿ" ಎಂದಿದ್ದಾರೆ.

More from Filmibeat

English summary
Spandana Vijay Raghavendra Death: Sandalwood Actor vijay raghavendra wife spandana died, Kannada Film Industry condolences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X