Spandana Vijay: ಬೆಂಗಳೂರಿಗೆ ಸ್ಪಂದನಾ ಮೃತದೇಹ; ವಿಮಾನ ನಿಲ್ದಾಣಕ್ಕೆ ಬಂದ ಶ್ರೀಮುರಳಿ ಹಾಗೂ ಕುಟುಂಬಸ್ಥರು

ಕನ್ನಡ ಚಲನಚಿತ್ರರಂಗದ ಹೆಸರಾಂತ ಕಲಾವಿದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಇಹಲೋಕ ತ್ಯಜಿಸಿರುವ ಸುದ್ದಿ ಸದ್ಯ ಚಲನಚಿತ್ರರಂಗವನ್ನು ಚಿಂತೆಗೆ ದೂಡಿದೆ. ಹೌದು, ನಿನ್ನೆ ( ಆಗಸ್ಟ್ 7 ) ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಚಿನ್ನಾರಿ ಮುತ್ತ ಎಂದು ಖ್ಯಾತಿಯನ್ನು ಪಡೆದಿರುವ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅಕಾಲಿಕ ಮರಣ ಹೊಂದಿದ್ದಾರೆ. ಪತಿ ವಿಜಯ್ ರಾಘವೇಂದ್ರ ಜತೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾದ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

 Spandana Vijay: Spandana Vijay dead body arrived to Kempegowda international airport

ಹೀಗೆ ಬ್ಯಾಂಕಾಕ್‌ನಲ್ಲಿ ನಿಧನ ಹೊಂದಿದ ಸ್ಪಂದನಾ ವಿಜಯ್ ಅವರ ಮೃತ ದೇಹವನ್ನು ಅಲ್ಲಿನ ನಿಯಮಗಳನ್ನು ಯಶಸ್ವಿಯಾಗಿ ಅನುಸರಿಸಿ ಭಾರತಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಹೌದು, ಕಾರ್ಗೋ ವಿಮಾನದಲ್ಲಿ ಸ್ಪಂದನಾ ವಿಜಯ್ ಅವರ ಮೃತದೇಹವನ್ನು ಬೆಂಗಳೂರಿಗೆ ತಲುಪಿಸಲಾಗಿದ್ದು, ವಿಜಯ್ ರಾಘವೇಂದ್ರ ಅವರೂ ಸಹ ತಮ್ಮ ಪತ್ನಿ ಸ್ಪಂದನಾ ವಿಜಯ್ ಜತೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಕಾರ್ಗೊ ಟರ್ಮಿನಲ್ ವಿಭಾಗದಲ್ಲಿ ಕಸ್ಟಮ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸ್ಪಂದನಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಮಲ್ಲೇಶ್ವರಂನಲ್ಲಿರುವ ಸ್ಪಂದನಾ ಅವರ ತಂದೆ ಬಿಕೆ ಶಿವರಾಂ ಅವರ ನಿವಾಸಕ್ಕೆ ಸ್ಪಂದನಾ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ. ಸ್ಪಂದನಾ ಮೃತದೇಹವನ್ನು ಸ್ವೀಕರಿಸಲು ವಿಜಯ್ ರಾಘವೇಂದ್ರ ಅವರ ಸಹೋದರ ಶ್ರೀಮುರಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಉಳಿದ ಕುಟುಂಬಸ್ಥರೂ ಸಹ ಅವರೊಟ್ಟಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

More from Filmibeat

English summary
Spandana Vijay: Spandana Vijay dead body arrived to Devanahalli international airport.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X