Spandana Vijay: ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಮಗಳು, ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿದ್ಯಾರ್ಹತೆ ಏನು?

ಚಂದನವನದ ಚಿನ್ನಾರಿ ಮುತ್ತ ಎಂದೇ ಖ್ಯಾತಿಯನ್ನು ಪಡೆದಿರುವ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ವಿಜಯ್ ಅಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಸದ್ಯ ಸ್ಯಾಂಡಲ್‌ವುಡ್‌ನ ಕಲಾವಿದರು ಹಾಗೂ ಸಿನಿ ರಸಿಕರಿಗೆ ಆಘಾತವನ್ನು ಉಂಟು ಮಾಡಿದೆ.

ಇನ್ನು ಪತಿ ವಿಜಯ್ ರಾಘವೇಂದ್ರ ಜತೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದ ಸ್ಪಂದನಾ ವಿಜಯ್ ಅಲ್ಲಿಯೇ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆ ಫಲಿಸದೇ ಸ್ಪಂದನಾ ವಿಜಯ್ ಕೊನೆಯುಸಿರು ಎಳೆದಿದ್ದಾರೆ. ಸ್ಪಂದನಾ ವಿಜಯ್ ಪತಿ ವಿಜಯ್ ರಾಘವೇಂದ್ರ ಹಾಗೂ ಪುತ್ರ ಶೌರ್ಯ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

spandana-vijay-raghavendra

ಸಿನಿಮಾದಲ್ಲಿಯೂ ನಟಿಸಿದ್ರು ಸ್ಪಂದನಾ ವಿಜಯ್:

2016ರಲ್ಲಿ ಬಿಡುಗಡೆಗೊಂಡಿದ್ದ ರವಿಚಂದ್ರನ್ ನಟನೆಯ ಅಪೂರ್ವ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸ್ಪಂದನಾ ವಿಜಯ್ ರಾಘವೇಂದ್ರ ಬಣ್ಣದ ಜಗತ್ತಿಗೂ ಸಹ ಕಾಲಿಟ್ಟಿದ್ದರು. ಅಲ್ಲದೇ 2018ರಲ್ಲಿ ಬಿಡುಗಡೆಗೊಂಡಿದ್ದ ತಮ್ಮ ಪತಿ ವಿಜಯ್ ರಾಘವೇಂದ್ರ ನಟನೆಯ 'ಕಿಸ್ಮತ್' ಎಂಬ ಚಿತ್ರಕ್ಕೆ ಬಂಡವಾಳ ಹೂಡಿದ್ದ ಸ್ಪಂದನಾ ವಿಜಯ್ ನಿರ್ಮಾಪಕಿಯಾಗಿಯೂ ಸಹ ಕನ್ನಡ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಮಗಳು ಸ್ಪಂದನಾ, 16 ವರ್ಷಗಳ ಹಿಂದೆ ವಿಜಯ್ ಜತೆ ಸಪ್ತಪದಿ:

ಸ್ಪಂದನಾ ವಿಜಯ್ ರಾಘವೇಂದ್ರ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಬಿಕೆ ಶಿವರಾಮ್ ಅವರ ಪುತ್ರಿ. ನಟ ವಿಜಯ್ ರಾಘವೇಂದ್ರ ಅವರನ್ನು ಪ್ರೀತಿಸಿದ್ದ ಸ್ಪಂದನಾ ವಿಜಯ್ ಆಗಸ್ಟ್ 26, 2007ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದರು. ಬೆಂಗಳೂರಿನ ಸ್ಟೆಲಾ ಮೇರಿಸ್ ಎಕ್ಸ್ಟ್ರೀಮ್ ಸ್ಕೂಲ್‌ನಲ್ಲಿ ಶಾಲಾ ದಿನಗಳನ್ನು ಕಳೆದಿದ್ದ ಸ್ಪಂದನಾ ವಿಜಯ್ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು.

More from Filmibeat

English summary
Spandana Vijay: Spandana Vijay Raghavendra education and biography
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X