Spandana Vijay: ಡಿಕೆಶಿ ಭೇಟಿ ಲಾಸ್ಟ್ ಪೋಸ್ಟ್; ಪತಿ ವಿಜಯ್ ಜತೆ ಸ್ಪಂದನಾ ರೀಲ್ಸ್ ನೋಡಿದ್ರೆ ಕಣ್ಣು ಒದ್ದೆಯಾಗುತ್ತೆ

ಸ್ಯಾಂಡಲ್‌ವುಡ್‌ನಲ್ಲಿ ಚಿನ್ನಾರಿ ಮುತ್ತ ಎಂದು ಖ್ಯಾತಿಯನ್ನು ಪಡೆದಿರುವ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಅಕಾಲಿಕ ಮರಣ ಹೊಂದಿದ್ದಾರೆ. ಪತಿ ವಿಜಯ್ ರಾಘವೇಂದ್ರ ಜತೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾದ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸ್ಪಂದನಾ ವಿಜಯ್ ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಲಾಗಲಿದ್ದು, ಬಳಿಕ ಅಂತ್ಯಕ್ರಿಯೆ ಜರುಗಲಿದೆ. ನಟ ವಿಜಯ್ ರಾಘವೇಂದ್ರ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಸ್ಪಂದನಾ ರವಿಚಂದ್ರನ್ ನಟನೆಯ ಅಪೂರ್ವ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿಮಾ ಕ್ಷೇತ್ರಕ್ಕೂ ಸಹ ಕಾಲಿಟ್ಟಿದ್ದರು. ಬಳಿಕ ತನ್ನ ಪತಿಯ ಕಿಸ್ಮತ್ ಎಂಬ ಚಿತ್ರಕ್ಕೆ ಬಂಡವಾಳವನ್ನೂ ಸಹ ಹೂಡಿದ್ದ ಸ್ಪಂದನಾ ನಿರ್ಮಾಪಕಿಯೂ ಸಹ ಆಗಿದ್ದರು.

spandana-vijay-raghavendra

ಸ್ಪಂದನಾ ಅಕಾಲಿಕ ಮರಣ ಸದ್ಯ ಸ್ಯಾಂಡಲ್‌ವುಡ್ ಮಂದಿಗೆ ಶಾಕ್ ನೀಡಿದ್ದು, ಚಿತ್ರ ಪ್ರೇಮಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಹಾಗೂ ಸಿನಿ ಕಲಾವಿದರು ಸ್ಪಂದನಾ ಸಾವಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಸ್ಪಂದನಾ ಪತಿ ವಿಜಯ್ ರಾಘವೇಂದ್ರ, ಪುತ್ರ ಶೌರ್ಯ ಹಾಗೂ ಕುಟುಂಬ ಸದಸ್ಯರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ನೆಟ್ಟಿಗರು ಸ್ಪಂದನಾ ವಿಜಯ್ ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಭೇಟಿ ನೀಡಿ ಅವರ ಇತ್ತೀಚೆಗಿನ ಪೋಸ್ಟ್‌ಗಳನ್ನು ನೋಡಿ ಭಾವುಕರಾಗುತ್ತಿದ್ದಾರೆ.

ಡಿಕೆಶಿ ಭೇಟಿಯೇ ಕೊನೆಯ ಪೋಸ್ಟ್:

ಸ್ಪಂದನಾ ವಿಜಯ್ ಅವರ ಸಹೋದರ ರಕ್ಷಿತ್ ಶಿವರಾಂ ಕಾಂಗ್ರೆಸ್ ಪಕ್ಷದ ಪರವಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಸೋದರನ ಪರ ದೊಡ್ಡ ಮಟ್ಟದಲ್ಲಿ ಪ್ರಚಾರದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಸ್ಪಂದನಾ ಕೊನೆಯದಾಗಿ ಹಂಚಿಕೊಂಡಿರುವ ಪೋಸ್ಟ್ ಸಹ ರಾಜಕೀಯದ ಕುರಿತಾಗಿಯೇ. ಹೌದು, ಜುಲೈ 26ರಂದು ಡಿಕೆ ಶಿವಕುಮಾರ್ ಅವರನ್ನು ಪತಿ ವಿಜಯ್ ರಾಘವೇಂದ್ರ ಜತೆ ಭೇಟಿಯಾಗಿದ್ದ ಸ್ಪಂದನಾ ವಿಜಯ್ ಆ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಸ್ಪಂದನಾ "ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು. ನಮ್ಮ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸರ್ ಅವರನ್ನು ಭೇಟಿಯಾದದ್ದು ನಿಜಕ್ಕೂ ಹೆಮ್ಮಯ ಘಳಿಗೆ" ಎಂದು ಬರೆದುಕೊಂಡಿದ್ದರು.

ಪತಿ ಜತೆ ರೀಲ್ಸ್:

ಇನ್ನು ಸ್ಪಂದನಾ ವಿಜಯ್ ಇತ್ತೀಚೆಗೆ ಹೆಚ್ಚು ರಾಜಕೀಯದ ಕುರಿತಾದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರೂ ಸಹ ಈ ಹಿಂದೆ ಹೆಚ್ಚು ತಮ್ಮ ಪತಿ ಹಾಗೂ ಪುತ್ರನ ಜತೆಗಿನ ಫೋಟೊ ಹಾಗೂ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಸದ್ಯ ವಿಜಯ್ ರಾಘವೇಂದ್ರ ಜತೆ ಸ್ಪಂದನಾ ವಿಜಯ್ ಮಾಡಿದ್ದ ರೀಲ್ಸ್ ವಿಡಿಯೊಗಳನ್ನು ನೆಟ್ಟಿಗರು ವೀಕ್ಷಿಸುತ್ತಿದ್ದು, ಮತ್ತೆ ಆ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಶೇಷ ಸಾಲುಗಳನ್ನು ಬರೆದುಕೊಂಡು ಸ್ಪಂದನಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.

More from Filmibeat

English summary
Spandana Vijay: Spandana Vijay Raghavendra last instagram post and reels
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X