»   » ಇದೇ ನಾಡು... ಇದೇ ಭಾಷೆ ಎಂದೆಂದೂ ನಮ್ಮದಾಗಿರಲೀ... ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ..... ಎಂದು ಅಂಬರೀಶ್‌ - ಆರತಿ ಅಭಿನಯದ ತಿರುಗುಬಾಣ ಚಿತ್ರದಲ್ಲಿ ತಾವೇ ಸ್ವತಃ ರಜತ ಪರದೆಯಲ್ಲಿ ಕಾಣಿಸಿಕೊಂಡು ಹಾಡಿದ ಗಾನ ಕೋಗಿಲೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ . ಪಿ.ಬಿ. ಶ್ರೀನಿವಾಸ್‌ ಹಾಡುವಕಟ್ಟೆಯಿಂದ ಇದ್ದಕ್ಕಿದ್ದಂತೆ ಮಾಯವಾದ ನಂತರ ಮೈಕ್‌ ತಮ್ಮ ಕೈಗೆತ್ತಿಕೊಂಡವರು. ಹಾಡುತ್ತ ಹಾಡುತ್ತ ನಟನೆಗೂ ಕಾಲಿಟ್ಟವರು. ಕೇವಲ ತಾವು ಉತ್ತಮ ಗಾಯಕರಷ್ಟೇ ಅಲ್ಲ , ತಮ್ಮಲ್ಲಿ ಅಸಾಧಾರಣವಾದ ಅಭಿನಯ ಪ್ರತಿಭೆಯೂ ಸುಪ್ತವಾಗಿದೆ ಎಂಬುದನ್ನು ಅವರು ಮುದ್ದಿನ ಮಾವ ಚಿತ್ರದಲ್ಲಿ ಪ್ರೂವ್‌ ಮಾಡಿ ತೋರಿಸಿದರು. ಈ ಚಿತ್ರದಲ್ಲಿ ಇಂದು ಸಂಸತ್‌ ಸದಸ್ಯರಾಗಿರುವ ಶಶಿಕುಮಾರ್‌ ಅವರೇ ಹಿರೋ ಆದರೂ, ರಿಯಲ್‌ ಹೀರೋ ಆಗಿ ಮಿಂಚಿದವರು, ಹೆಂಗೆಳೆಯರ ಕಣ್ಣಲ್ಲಿ ನೀರು ಹರಿಯುವಂತೆ ಅಭಿನಯಿಸಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೇ. ಮಿಥಿಲೆಯ ಸೀತೆಯರು ಚಿತ್ರದಲ್ಲಿ ಸಹ ಪೋಷಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡ ಎಸ್‌.ಪಿ., ಸ್ನೇಹ ಮಯಿ. ಸ್ನೇಹಕ್ಕೆ ಅವರು ನೀಡುವ ಬೆಲೆ, ಸ್ನೇಹದ ಬಗ್ಗೆ ಅವರಿಗಿರುವ ಗೌರವ ಅಷ್ಟಿಷ್ಟಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ ತಾಯಿಯನ್ನು ಅಪಾರವಾಗಿ ಅವರು ಗೌರವಿಸುತ್ತಾರೆ. ಸ್ನೇಹ, ತಾಯಿಯ ವಿಷಯ ಬಂದಾಗಲಂತೂ ಸಂಪೂರ್ಣವಾಗಿ ಭಾವುಕರಾಗುತ್ತಾರೆ. ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ಈಗ ಸಂಸತ್‌ ಸದಸ್ಯರೂ ಆಗಿರುವ ಕನ್ನಡದ ಖ್ಯಾತ ನಟ ಅಂಬರೀಶ್‌, ಸಾಹಸ ಸಿಂಹ ವಿಷ್ಣು ವರ್ಧನ್‌ ಅಭಿನಯದ ‘ ದಿಗ್ಗಜರು ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಮೊನ್ನೆ ಮೈಸೂರಿನಲ್ಲಿ ಈ ವಿಷಯವನ್ನು ಕನ್ನಡದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಸಿಂಗ್‌ ಬಾಬು ಬಹಿರಂಗ ಪಡಿಸಿದರು. ದಿಗ್ಗಜರು ಚಿತ್ರದ ಆರು ಹಾಡುಗಳ ಪೈಕಿ ಮೂರು ಭಾರತದಲ್ಲೂ , ಉಳಿದದ್ದು ವಿದೇಶದಲ್ಲೂ ( ಯಾವ ದೇಶ ಎನ್ನುವುದು ಗೊತ್ತಾದ ತಕ್ಷಣ ತಿಳಿಸುತ್ತೇವೆ) ಚಿತ್ರೀಕರಣ ಆಗಲಿದೆಯಂತೆ. ಇದರಲ್ಲಿ ಒಂದು ಹಾಡು ಸ್ನೇಹವನ್ನು ಕುರಿತಾದ್ದು. ಈ ಸ್ನೇಹದ ಹಾಡನ್ನು ಸ್ನೇಹ ಜೀವಿಯೂ, ಸ್ನೇಹಾದರಣಿಯೂ ಆದ ಎಸ್‌. ಪಿ. ಹಾಡಿದ್ದಾರೆ. ಈ ಹಾಡು ಹಾಡುವಾಗ ಅವರು ಮಕ್ಕಳಂತೆ ಗೊಳೋ ಎಂದು ಅತ್ತು ಬಿಟ್ಟರಂತೆ. ಎಸ್‌. ಪಿ. ಹಾಗೇನೇ ತಾಯಿ ಅಥವಾ ಸ್ನೇಹದ ವಿಚಾರ ಬಂದಾಗ ಅವರು ತಮ್ಮನ್ನು ತಾವು ಮರೆತು ಮಕ್ಕಳಂತೆ ಅತ್ತು ಬಿಡುತ್ತಾರೆ. ಆ ಮನುಷ್ಯನ ಕೈಲಿ ತಡೆದುಕೊಳ್ಳಲು ಆಗೋಲ್ಲ ಎಂದರು ಬಾಬು. ಕೇಳುಗರು ಮೈ ಮರೆಯುವಂತೆ ಹಾಡುವ ಎಸ್‌.ಪಿ. ತಾಯಿ - ಸ್ನೇಹದ ಬಗ್ಗೆ ಹಾಡುವಾಗ ತಾವೇ ಮೈಮರೆತು ಅಳುತ್ತಾರೆ. ಅವರಿಗೆ ತಾಯಿಯ ಬಗ್ಗೆ, ಸ್ನೇಹದ ಬಗ್ಗೆ ಇರುವ ಪ್ರೀತಿಯನ್ನು ನೆನೆದರೆ ಗಾರ್ಕಿಯ ‘ ಮದರ್‌ ’ ಜ್ಞಾಪಕವಾಗುತ್ತದೆ.ಮುಖಪುಟ / ಸ್ಯಾಂಡಲ್‌ವುಡ್‌

ಇದೇ ನಾಡು... ಇದೇ ಭಾಷೆ ಎಂದೆಂದೂ ನಮ್ಮದಾಗಿರಲೀ... ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ..... ಎಂದು ಅಂಬರೀಶ್‌ - ಆರತಿ ಅಭಿನಯದ ತಿರುಗುಬಾಣ ಚಿತ್ರದಲ್ಲಿ ತಾವೇ ಸ್ವತಃ ರಜತ ಪರದೆಯಲ್ಲಿ ಕಾಣಿಸಿಕೊಂಡು ಹಾಡಿದ ಗಾನ ಕೋಗಿಲೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ . ಪಿ.ಬಿ. ಶ್ರೀನಿವಾಸ್‌ ಹಾಡುವಕಟ್ಟೆಯಿಂದ ಇದ್ದಕ್ಕಿದ್ದಂತೆ ಮಾಯವಾದ ನಂತರ ಮೈಕ್‌ ತಮ್ಮ ಕೈಗೆತ್ತಿಕೊಂಡವರು. ಹಾಡುತ್ತ ಹಾಡುತ್ತ ನಟನೆಗೂ ಕಾಲಿಟ್ಟವರು. ಕೇವಲ ತಾವು ಉತ್ತಮ ಗಾಯಕರಷ್ಟೇ ಅಲ್ಲ , ತಮ್ಮಲ್ಲಿ ಅಸಾಧಾರಣವಾದ ಅಭಿನಯ ಪ್ರತಿಭೆಯೂ ಸುಪ್ತವಾಗಿದೆ ಎಂಬುದನ್ನು ಅವರು ಮುದ್ದಿನ ಮಾವ ಚಿತ್ರದಲ್ಲಿ ಪ್ರೂವ್‌ ಮಾಡಿ ತೋರಿಸಿದರು. ಈ ಚಿತ್ರದಲ್ಲಿ ಇಂದು ಸಂಸತ್‌ ಸದಸ್ಯರಾಗಿರುವ ಶಶಿಕುಮಾರ್‌ ಅವರೇ ಹಿರೋ ಆದರೂ, ರಿಯಲ್‌ ಹೀರೋ ಆಗಿ ಮಿಂಚಿದವರು, ಹೆಂಗೆಳೆಯರ ಕಣ್ಣಲ್ಲಿ ನೀರು ಹರಿಯುವಂತೆ ಅಭಿನಯಿಸಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೇ. ಮಿಥಿಲೆಯ ಸೀತೆಯರು ಚಿತ್ರದಲ್ಲಿ ಸಹ ಪೋಷಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡ ಎಸ್‌.ಪಿ., ಸ್ನೇಹ ಮಯಿ. ಸ್ನೇಹಕ್ಕೆ ಅವರು ನೀಡುವ ಬೆಲೆ, ಸ್ನೇಹದ ಬಗ್ಗೆ ಅವರಿಗಿರುವ ಗೌರವ ಅಷ್ಟಿಷ್ಟಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ ತಾಯಿಯನ್ನು ಅಪಾರವಾಗಿ ಅವರು ಗೌರವಿಸುತ್ತಾರೆ. ಸ್ನೇಹ, ತಾಯಿಯ ವಿಷಯ ಬಂದಾಗಲಂತೂ ಸಂಪೂರ್ಣವಾಗಿ ಭಾವುಕರಾಗುತ್ತಾರೆ. ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ಈಗ ಸಂಸತ್‌ ಸದಸ್ಯರೂ ಆಗಿರುವ ಕನ್ನಡದ ಖ್ಯಾತ ನಟ ಅಂಬರೀಶ್‌, ಸಾಹಸ ಸಿಂಹ ವಿಷ್ಣು ವರ್ಧನ್‌ ಅಭಿನಯದ ‘ ದಿಗ್ಗಜರು ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಮೊನ್ನೆ ಮೈಸೂರಿನಲ್ಲಿ ಈ ವಿಷಯವನ್ನು ಕನ್ನಡದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಸಿಂಗ್‌ ಬಾಬು ಬಹಿರಂಗ ಪಡಿಸಿದರು. ದಿಗ್ಗಜರು ಚಿತ್ರದ ಆರು ಹಾಡುಗಳ ಪೈಕಿ ಮೂರು ಭಾರತದಲ್ಲೂ , ಉಳಿದದ್ದು ವಿದೇಶದಲ್ಲೂ ( ಯಾವ ದೇಶ ಎನ್ನುವುದು ಗೊತ್ತಾದ ತಕ್ಷಣ ತಿಳಿಸುತ್ತೇವೆ) ಚಿತ್ರೀಕರಣ ಆಗಲಿದೆಯಂತೆ. ಇದರಲ್ಲಿ ಒಂದು ಹಾಡು ಸ್ನೇಹವನ್ನು ಕುರಿತಾದ್ದು. ಈ ಸ್ನೇಹದ ಹಾಡನ್ನು ಸ್ನೇಹ ಜೀವಿಯೂ, ಸ್ನೇಹಾದರಣಿಯೂ ಆದ ಎಸ್‌. ಪಿ. ಹಾಡಿದ್ದಾರೆ. ಈ ಹಾಡು ಹಾಡುವಾಗ ಅವರು ಮಕ್ಕಳಂತೆ ಗೊಳೋ ಎಂದು ಅತ್ತು ಬಿಟ್ಟರಂತೆ. ಎಸ್‌. ಪಿ. ಹಾಗೇನೇ ತಾಯಿ ಅಥವಾ ಸ್ನೇಹದ ವಿಚಾರ ಬಂದಾಗ ಅವರು ತಮ್ಮನ್ನು ತಾವು ಮರೆತು ಮಕ್ಕಳಂತೆ ಅತ್ತು ಬಿಡುತ್ತಾರೆ. ಆ ಮನುಷ್ಯನ ಕೈಲಿ ತಡೆದುಕೊಳ್ಳಲು ಆಗೋಲ್ಲ ಎಂದರು ಬಾಬು. ಕೇಳುಗರು ಮೈ ಮರೆಯುವಂತೆ ಹಾಡುವ ಎಸ್‌.ಪಿ. ತಾಯಿ - ಸ್ನೇಹದ ಬಗ್ಗೆ ಹಾಡುವಾಗ ತಾವೇ ಮೈಮರೆತು ಅಳುತ್ತಾರೆ. ಅವರಿಗೆ ತಾಯಿಯ ಬಗ್ಗೆ, ಸ್ನೇಹದ ಬಗ್ಗೆ ಇರುವ ಪ್ರೀತಿಯನ್ನು ನೆನೆದರೆ ಗಾರ್ಕಿಯ ‘ ಮದರ್‌ ’ ಜ್ಞಾಪಕವಾಗುತ್ತದೆ.ಮುಖಪುಟ / ಸ್ಯಾಂಡಲ್‌ವುಡ್‌

Subscribe to Filmibeat Kannada

ಇದೇ ನಾಡು... ಇದೇ ಭಾಷೆ ಎಂದೆಂದೂ ನಮ್ಮದಾಗಿರಲೀ... ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ..... ಎಂದು ಅಂಬರೀಶ್‌ - ಆರತಿ ಅಭಿನಯದ ತಿರುಗುಬಾಣ ಚಿತ್ರದಲ್ಲಿ ತಾವೇ ಸ್ವತಃ ರಜತ ಪರದೆಯಲ್ಲಿ ಕಾಣಿಸಿಕೊಂಡು ಹಾಡಿದ ಗಾನ ಕೋಗಿಲೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ . ಪಿ.ಬಿ. ಶ್ರೀನಿವಾಸ್‌ ಹಾಡುವಕಟ್ಟೆಯಿಂದ ಇದ್ದಕ್ಕಿದ್ದಂತೆ ಮಾಯವಾದ ನಂತರ ಮೈಕ್‌ ತಮ್ಮ ಕೈಗೆತ್ತಿಕೊಂಡವರು. ಹಾಡುತ್ತ ಹಾಡುತ್ತ ನಟನೆಗೂ ಕಾಲಿಟ್ಟವರು.

ಕೇವಲ ತಾವು ಉತ್ತಮ ಗಾಯಕರಷ್ಟೇ ಅಲ್ಲ , ತಮ್ಮಲ್ಲಿ ಅಸಾಧಾರಣವಾದ ಅಭಿನಯ ಪ್ರತಿಭೆಯೂ ಸುಪ್ತವಾಗಿದೆ ಎಂಬುದನ್ನು ಅವರು ಮುದ್ದಿನ ಮಾವ ಚಿತ್ರದಲ್ಲಿ ಪ್ರೂವ್‌ ಮಾಡಿ ತೋರಿಸಿದರು. ಈ ಚಿತ್ರದಲ್ಲಿ ಇಂದು ಸಂಸತ್‌ ಸದಸ್ಯರಾಗಿರುವ ಶಶಿಕುಮಾರ್‌ ಅವರೇ ಹಿರೋ ಆದರೂ, ರಿಯಲ್‌ ಹೀರೋ ಆಗಿ ಮಿಂಚಿದವರು, ಹೆಂಗೆಳೆಯರ ಕಣ್ಣಲ್ಲಿ ನೀರು ಹರಿಯುವಂತೆ ಅಭಿನಯಿಸಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೇ.

ಮಿಥಿಲೆಯ ಸೀತೆಯರು ಚಿತ್ರದಲ್ಲಿ ಸಹ ಪೋಷಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡ ಎಸ್‌.ಪಿ., ಸ್ನೇಹ ಮಯಿ. ಸ್ನೇಹಕ್ಕೆ ಅವರು ನೀಡುವ ಬೆಲೆ, ಸ್ನೇಹದ ಬಗ್ಗೆ ಅವರಿಗಿರುವ ಗೌರವ ಅಷ್ಟಿಷ್ಟಲ್ಲ. ಎಲ್ಲಕ್ಕಿಂತಲೂ ಮಿಗಿಲಾಗಿ ತಾಯಿಯನ್ನು ಅಪಾರವಾಗಿ ಅವರು ಗೌರವಿಸುತ್ತಾರೆ. ಸ್ನೇಹ, ತಾಯಿಯ ವಿಷಯ ಬಂದಾಗಲಂತೂ ಸಂಪೂರ್ಣವಾಗಿ ಭಾವುಕರಾಗುತ್ತಾರೆ. ತಮ್ಮನ್ನು ತಾವೇ ಮರೆತು ಬಿಡುತ್ತಾರೆ.

ಈಗ ಸಂಸತ್‌ ಸದಸ್ಯರೂ ಆಗಿರುವ ಕನ್ನಡದ ಖ್ಯಾತ ನಟ ಅಂಬರೀಶ್‌, ಸಾಹಸ ಸಿಂಹ ವಿಷ್ಣು ವರ್ಧನ್‌ ಅಭಿನಯದ ‘ ದಿಗ್ಗಜರು ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಮೊನ್ನೆ ಮೈಸೂರಿನಲ್ಲಿ ಈ ವಿಷಯವನ್ನು ಕನ್ನಡದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಸಿಂಗ್‌ ಬಾಬು ಬಹಿರಂಗ ಪಡಿಸಿದರು.

ದಿಗ್ಗಜರು ಚಿತ್ರದ ಆರು ಹಾಡುಗಳ ಪೈಕಿ ಮೂರು ಭಾರತದಲ್ಲೂ , ಉಳಿದದ್ದು ವಿದೇಶದಲ್ಲೂ ( ಯಾವ ದೇಶ ಎನ್ನುವುದು ಗೊತ್ತಾದ ತಕ್ಷಣ ತಿಳಿಸುತ್ತೇವೆ) ಚಿತ್ರೀಕರಣ ಆಗಲಿದೆಯಂತೆ. ಇದರಲ್ಲಿ ಒಂದು ಹಾಡು ಸ್ನೇಹವನ್ನು ಕುರಿತಾದ್ದು. ಈ ಸ್ನೇಹದ ಹಾಡನ್ನು ಸ್ನೇಹ ಜೀವಿಯೂ, ಸ್ನೇಹಾದರಣಿಯೂ ಆದ ಎಸ್‌. ಪಿ. ಹಾಡಿದ್ದಾರೆ. ಈ ಹಾಡು ಹಾಡುವಾಗ ಅವರು ಮಕ್ಕಳಂತೆ ಗೊಳೋ ಎಂದು ಅತ್ತು ಬಿಟ್ಟರಂತೆ. ಎಸ್‌. ಪಿ. ಹಾಗೇನೇ ತಾಯಿ ಅಥವಾ ಸ್ನೇಹದ ವಿಚಾರ ಬಂದಾಗ ಅವರು ತಮ್ಮನ್ನು ತಾವು ಮರೆತು ಮಕ್ಕಳಂತೆ ಅತ್ತು ಬಿಡುತ್ತಾರೆ. ಆ ಮನುಷ್ಯನ ಕೈಲಿ ತಡೆದುಕೊಳ್ಳಲು ಆಗೋಲ್ಲ ಎಂದರು ಬಾಬು.

ಕೇಳುಗರು ಮೈ ಮರೆಯುವಂತೆ ಹಾಡುವ ಎಸ್‌.ಪಿ. ತಾಯಿ - ಸ್ನೇಹದ ಬಗ್ಗೆ ಹಾಡುವಾಗ ತಾವೇ ಮೈಮರೆತು ಅಳುತ್ತಾರೆ. ಅವರಿಗೆ ತಾಯಿಯ ಬಗ್ಗೆ, ಸ್ನೇಹದ ಬಗ್ಗೆ ಇರುವ ಪ್ರೀತಿಯನ್ನು ನೆನೆದರೆ ಗಾರ್ಕಿಯ ‘ ಮದರ್‌ ’ ಜ್ಞಾಪಕವಾಗುತ್ತದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada