For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಅಭಿಮಾನಿಗಳೇ ಅಲರ್ಟ್: ಫೇಸ್‌ಬುಕ್‌ ಲೈವ್ ಬರಲಿದ್ದಾರೆ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಬಹುದು ಎಂದು ಹೇಳಲಾಗುತ್ತಿದೆ. ರಾಬರ್ಟ್ ರಿಲೀಸ್ ಬಗ್ಗೆ ಯಾವಾಗ ಅಪ್‌ಡೇಟ್ ಸಿಗುತ್ತೆ ಎಂದು ಡಿ-ಭಕ್ತರು ಎದುರು ನೋಡುತ್ತಿದ್ದಾರೆ.

  ಇದೀಗ, ನಟ ದರ್ಶನ್ ಅವರು ಸರ್ಪ್ರೈಸ್ ಸುದ್ದಿಯೊಂದು ನೀಡಿದ್ದಾರೆ. ಜನವರಿ 10 ರಂದು ಡಿ ಬಾಸ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ವಿಶೇಷತೆ ಏನು ಎಂಬುದು ಸದ್ಯಕ್ಕೆ ತಿಳಿದಿಲ್ಲ. ಆದರೆ, ದರ್ಶನ್ ಅವರ ಫೇಸ್‌ಬುಕ್‌ ಲೈವ್‌ಗಾಗಿ ಅಭಿಮಾನಿಗಳು ಕಾಯುವಂತಾಗಿದೆ.

  ಹೊಸ ವರ್ಷ ಒಳಿತನ್ನೇ ತರಲಿ, ಕೊರೊನಾ ಮಹಾಮಾರಿ ಜೀವನದಿಂದ ದೂರವಾಗಲಿ; ನಟ ದರ್ಶನ್ಹೊಸ ವರ್ಷ ಒಳಿತನ್ನೇ ತರಲಿ, ಕೊರೊನಾ ಮಹಾಮಾರಿ ಜೀವನದಿಂದ ದೂರವಾಗಲಿ; ನಟ ದರ್ಶನ್

  ಈ ಕುರಿತು ದರ್ಶನ್ ಅವರ ಅಭಿಮಾನಿ ಸಂಘದ ಫೇಸ್‌ಬುಕ್ ಖಾತೆ ಡಿ ಕಂಪನಿ ಮಾಹಿತಿ ನೀಡಿದ್ದು, ''ಎಲ್ಲಾ ಕನ್ನಡಾಭಿಮಾನಿಗಳಿಗೆ ಒಂದು ವಿಶೇಷ ಪ್ರಕಟಣೆ: ನಮ್ಮೆಲರ ನಲ್ಮೆಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ಇದೇ ಜನವರಿ 10 ಬೆಳಗ್ಗೆ 11 ಗಂಟೆಗೆ ತಮ್ಮ FaceBook Page ಅಲ್ಲಿ ನಿಮ್ಮ ಮುಂದೆ ಲೈವ್ ಬರಲಿದ್ದಾರೆ'' ಎಂದು ತಿಳಿಸಿದ್ದಾರೆ.

  ಕಿಚ್ಚನ ಕೆಲಸಕ್ಕೆ ಭೇಶ್ ಎಂದ ಅಭಿಮಾನಿಗಳು | Kiccha Sudeep In Pandavapura | Filmibeat Kannada

  ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದಾರೆ. ದರ್ಶನ್ ಜೊತೆಯಲ್ಲಿ ವಿನೋದ್ ಪ್ರಭಾಕರ್, ಜಗಪತಿಬಾಬು, ಆಶಾಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಇವರ ಮೇಲಿನ ಅಭಿಮಾನ, ಪ್ರೀತಿ ಎಂದು ಕಮ್ಮಿಯಾಗಿಲ್ಲ; ನಟ ದರ್ಶನ್ಇವರ ಮೇಲಿನ ಅಭಿಮಾನ, ಪ್ರೀತಿ ಎಂದು ಕಮ್ಮಿಯಾಗಿಲ್ಲ; ನಟ ದರ್ಶನ್

  'ರಾಬರ್ಟ್' ಚಿತ್ರದ ಮುಗಿಸಿರುವ ದರ್ಶನ್ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಆರಂಭಿಸಿದ್ದಾರೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ.

  English summary
  Special Announcement by Darshan: D Boss will be coming live On Jan 10th at 11am in Facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X