ಪುನೀತ್ ರಾಜ್‌ಕುಮಾರ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಿದ್ದರು: ದೇವರಿಗೆ ಅಪ್ಪು ಅಭಿಮಾನಿಯ ಪತ್ರ
ನಟ ಪುನೀತ್ ರಾಜಕುಮಾರ್ ಪವರ್‌ಸ್ಟಾರ್ ಆಗಿದ್ದು ಅವರ ಅಭಿಮಾನಿಗಳಿಂದ. ಪವರ್‌ಸ್ಟಾರ್‌ಗೆ ಅಷ್ಟು ಅಭಿಮಾನಿ ಬಳಗ ಇದೆ. ಅವರನ್ನು ಅಭಿಮಾನಿಗಳು ಅವರಿಗೆ ಒಂದು ರೀತಿ ಪವರ್ ಆದ್ರೆ. ಅವರು ಅಭಿಮಾನಿಗಳಿಗೆ ಮತ್ತೊಂದು ರೀತಿ ಪವರ್ ಆಗಿದ್ದರು. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳನ್ನು ಕೇವಲ ಅಭಿಮಾನಿಗಳು ಎಂದು ಕರೆದರೆ ಸಾಲದು. ಯಾಕೆ ಅಂತ ಹೇಳಿದರೆ. ಪುನೀತ್ ರಾಜಕುಮಾರ್ ಅವರೇ ತಮ್ಮ ಅಭಿಮಾನಿಗಳನ್ನು ತಮ್ಮ ಮನೆಯ ದೇವರು ಅಂತ ಕರೆದು ಬಿಟ್ಟಿದ್ದಾರೆ. ಅಪ್ಪ ಡಾಕ್ಟರ್ ರಾಜಕುಮಾರ್ ಹಾದಿಯಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ನಡೆಯುತ್ತ ಇದ್ದರು. ರಾಜ್‌ಕುಮಾರ್ ಅಭಿಮಾನಿಗಳನ್ನು ದೇವರ ರೂಪದಲ್ಲಿ ಕಾಣುತ್ತಿದ್ದರು. ಪುನೀತ್ ರಾಜಕುಮಾರ್ ಕೂಡ ಅಭಿಮಾನಿಗಳನ್ನು ತಮ್ಮ ಮನೆಯ ದೇವರು ಅಂತಲೇ ಆರಾಧಿಸುತ್ತಾ ಇದ್ದರು. ಒಂದು ಕಡೆ ಪುನೀತ್ ರಾಜಕುಮಾರ್ ತಮ್ಮ ಅಭಿಮಾನಿಗಳನ್ನು ದೇವರಂತೆ ಆರಾಧಿಸಿದರೆ ಮತ್ತೊಂದು ಕಡೆ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನು ಆರಾಧ್ಯ ದೈವ ದಂತೆ ಕಾಣುತ್ತಿದ್ದರು.
ಅಭಿಮಾನಿಗಳಿಗೆ ಅಪ್ಪು ಇಲ್ಲ ಎನ್ನುವ ನೋವು ಎಷ್ಟು ಕಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಪುನೀತ್ ರಾಜ್‌ಕುಮಾರ್ ಬದುಕಿ ಇದ್ದರೆ ನಾಲ್ಕು ಜನ ನೆಮ್ಮದಿ ಯಿಂದ ಇರುತ್ತಾ ಇದ್ದರು. ಯಾಕೆ ಅವರನ್ನು ಇಷ್ಟು ಕರೆಸಿ ಕೊಂಡೆ ಬಿಟ್ಟೆ ಎಂದು ಅಭಿಮಾನಿ ಒಬ್ಬ ಹಾಸನಾಂಬೆ ದೇವಿಗೆ ಪತ್ರ ಬರೆದಿದ್ದಾನೆ. ಎಲ್ಲರೂ ಇದು ದೇವರು ಮಾಡಿದ ಅನ್ಯಾಯ ಎಂದು ದೇವರಿಗೆ ಶಾಪ ಹಾಕುವುದರ ಜೊತೆಗೆ, ದೇವರಲ್ಲಿಯೇ ಮನವಿ ಮಾಡುತ್ತಿದ್ದಾರೆ.

ಅಭಿಮಾನಿಯ ಪತ್ರದಲ್ಲಿ ಏನಿದೆ?
"ಶ್ರೀ ಶ್ರೀ ಹಾಸನಾಂಬೆ ತಾಯಿ ಚರಣಗಳಿಗೆ ನನ್ನ ಕೋಟಿ ವಂದನೆಗಳು. ಅಮ್ಮ ಆ ಧರ್ಮಾತ್ಮ ಪುನೀತ್ ರಾಜಕುಮಾರ್ ಅವರನ್ನು ಸಾಯಿಸುವ ಬದಲು, ಈ ರಾಜಕೀಯದಲ್ಲಿ ನಾಟಕ ಆಡಿ ಅವರು ತಿಂದು ಅವರ ಮರಿ ಮೊಮ್ಮಕ್ಕಳು ತಿಂದು ತೇಗಿದರು ಕರಗದಷ್ಟು ಆಸ್ತಿ ಮಾಡಿ, ಸಭೆಗಳಲ್ಲಿ ನಾಟಕ ಮಾಡುತ್ತಾರಲ್ಲ ಅಂತಹ ರಾಜಕಾರಣಿಗಳನ್ನು ಸಾಯಿಸು. ಆಗ ನಮ್ಮ ಕರ್ನಾಟಕ ರಾಜ್ಯ ಮುಂದುವರೆಯುತ್ತದೆ. ಬಡವರು ಕರ್ನಾಟಕದಲ್ಲಿ ಸುಖವಾಗಿ ಇರುತ್ತಾರೆ. ನೆನ್ನೆ ಮೊನ್ನೆ ಬಂದ ಕೆಲ ರಾಜಕಾರಣಿಗಳು ಕೋಟಿ ಕೋಟಿ ಮಾಡಿಕೊಂಡು ಬಿಡುತ್ತಾರಲ್ಲ, ಅವರಿಗೆ ಕರ್ಮದ ಸಾವು ಬರಲಿ. ಪಾಪ ಪುನೀತ್ ರಾಜ್ ಕುಮಾರ್ ಇದ್ದಿದ್ದರೆ ನಾಲ್ಕು ಜನ ನೆಮ್ಮದಿಯಿಂದ ಇರುತ್ತಾ ಇದ್ದರು ತಾಯಿ ನಮಸ್ಕಾರಗಳು".
ಇದು ಅಭಿಮಾನಿ ಒಬ್ಬ ದೇವರಿಗೆ ಬರೆದ ಪತ್ರ. ಇಲ್ಲ ಆತ ಹೇಳಿರುವುದು ಅನ್ಯಾಯ ಮಾಡುವವರನ್ನು ಬಿಟ್ಟು ನಾಲ್ಕು ಜನರಿಗೆ ಆಸರೆ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರನ್ನ ಇಷ್ಟು ಬೇಗ ಭೂಮಿಯಿಂದ ಕರೆದು ಕೊಂಡಿರುವುದು ಅನ್ಯಾಯ ಎಂದು. ಇಂದು ಅಪ್ಪು ಇಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಅದೆಷ್ಟು ನೋವು ಉಂಟು ಮಾಡಿದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಈಗ ಆ ಪ್ರೀತಿ ವಿಶ್ವಾಸವನ್ನು ಅಪ್ಪು ಅಭಿಮಾನಿಗಳು ತಮ್ಮ ಕೆಲಸ ಕಾರ್ಯಗಳ ಮೂಲಕ ಮಾಡಿ ತೋರಿಸುತ್ತಾ ಇದ್ದಾರೆ. ಅಪ್ಪು ಮಾದರಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಅದೆಷ್ಟೋ ಯುವಕರು ಅಪ್ಪು ಸ್ಪೂರ್ತಿಯಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಾರೆ.

ಅಪ್ಪು ಇಲ್ಲ ಎಂದಾಗ ದೇವರಿಗೆ ಹಿಡಿ ಶಾಪ ಹಾಕಿದ ಅಪ್ಪು ಅಭಿಮಾನಿಗಳು ಇನ್ನು ಕೂಡ ದೇವರ ಮೊರೆ ಹೋಗುವುದನ್ನು ನಿಲ್ಲಿಸಿಲ್ಲ. ಅಪ್ಪು ಇಲ್ಲವಾಗಿ 11 ದಿನ ಆದರೂ ಅಭಿಮಾನಿಗಳು ಮಾತ್ರ ದೇವರಲ್ಲಿ ಬೇಡಿಕೆ ಇಡುತ್ತಲೇ ಇದ್ದಾರೆ. ಅಪ್ಪು ಅಭಿಮಾನಿ ಒಬ್ಬ ಹಾಸನಾಂಬೆ ದೇವತೆಗೆ ಪತ್ರ ಒಂದನ್ನು ಬರೆದಿದ್ದಾನೆ. ಅಪ್ಪು ಇದ್ದಿದ್ದರೆ ಏನಾಗುತ್ತಿತ್ತು ಅನ್ಯಾಯವಾಗಿ ಅಪ್ಪುವನ್ನು ನೀನು ಕರೆದು ಕೊಂಡು ಬಿಟ್ಟೆ. ಹೀಗೆ ಆಗ ಬಾರದಿತ್ತು. ಪುನೀತ್ ರಾಜ್‌ಕುಮಾರ ಇದ್ದಿದ್ದರೆ ನಾಲ್ಕು ಜನ ನೆಮ್ಮದಿ ಯಿಂದ ಇರುತ್ತಿದ್ದರು ಎನ್ನುವುದನ್ನು ಹಾಸನಾಂಬೆ ದೇವಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾನೆ. ಇಂತಹ ಅದೆಷ್ಟೋ ಮನಸ್ಸುಗಳು ಪುನೀತ್ ರಾಜ್‌ಕುಮಾರ್ ಅವರಿಗಾಗಿ ಮಿಡಿಯುತ್ತಲೇ ಇವೆ. ಇದು ಅಪ್ಪು ಎಂದಿಗೂ ಅಜರಾಮರ ಎನ್ನುವುದನ್ನು ಸಾರಿ ಹೇಳುತ್ತಿದೆ.


Click it and Unblock the Notifications











