ಜಗ್ಗೇಶ್ ಮನೆಯಲ್ಲಿ ವಿಶೇಷ ಪೂಜೆ: ಭೂವರಹ, ಅಷ್ಟಲಕ್ಷ್ಮೀ, ನವಗ್ರಹ ಹೋಮ
ನವರಸ ನಾಯಕ ಜಗ್ಗೇಶ್ ಅವರ ಮನೆಯಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದಿದೆ. ಭೂವರಹ, ಅಷ್ಟಲಕ್ಷ್ಮೀ, ನವಗ್ರಹ ಹೋಮದಂತಹ ಪೂಜೆಗಳನ್ನು ನೆರವೇರಿಸಿದ್ದಾರೆ.
ಈ ಫೋಟೋಗಳನ್ನು ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ''ಇಂದು ಮನೆಯಲ್ಲಿನ ಭೂವರಹ, ಅಷ್ಟಲಕ್ಷ್ಮೀ, ನವಗ್ರಹ ಹೋಮದ ಆಧ್ಯಾತ್ಮಿಕ ಸಮಯದಲ್ಲಿ ಮಡದಿಯೊಂದಿಗೆ. ಸರ್ವೆಜನಃಸುಖಿನೋಭವಂತು'' ಎಂದು ಪೋಸ್ಟ್ ಮಾಡಿದ್ದಾರೆ.
ಗುರು ರಾಯರ ಪರಮ ಭಕ್ತರಾಗಿರುವ ನಟ ಜಗ್ಗೇಶ್ ಆಧ್ಯಾತ್ಮದ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆ. ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ರಾಯರನ್ನು ಕಾಣುತ್ತಾರೆ. ತಮ್ಮ ಸಾಧನೆ, ಸಂತೋಷ, ಶ್ರಮದ ಹಿಂದೆ ರಾಯರ ಆಶೀರ್ವಾದವಿದೆ ಎಂದು ನಂಬಿರುವವರು ಜಗ್ಗೇಶ್.

ಜಗ್ಗೇಶ್ ಅವರ ಸಿನಿಮಾಗಳು
'ಮಠ' ಗುರುಪ್ರಸಾದ್ ಜೊತೆ 'ರಂಗನಾಯಕ' ಎಂಬ ಚಿತ್ರ ಮಾಡುತ್ತಿದ್ದು, ಇತ್ತೀಚಿಗಷ್ಟೆ ಈ ಸಿನಿಮಾ ಮುಹೂರ್ತ ನೆರವೇರಿದೆ. ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಸಹ ಗುರು ಪ್ರಸಾದ್ ಅವರದ್ದೆ. ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.


Click it and Unblock the Notifications











