For Quick Alerts
  ALLOW NOTIFICATIONS  
  For Daily Alerts

  'ಬ್ಯೂಟಿಫುಲ್ ಮನಸುಗಳು' ಸಿನಿಮಾ ಮತ್ತೆ ನೋಡುವ ಚಾನ್ಸ್ ಸಿಕ್ಕಿದೆ

  By Naveen
  |

  ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸುಗಳು' ಸಿನಿಮಾ ರಿಲೀಸ್ ಆಗಿ ಒಳ್ಳೆಯ ಸಿನಿಮಾ ಅಂತ ಹೆಸರು ಗಳಿಸಿತ್ತು. ಚಿತ್ರಮಂದಿರದ ಸಮಸ್ಯೆಯಿಂದಾಗಿ ಕೆಲವರಿಗೆ ಸಿನಿಮಾ ನೋಡಬೇಕು ಅಂತ ಆಸೆ ಇದ್ದರೂ ನೋಡುವುದಕ್ಕೆ ಆಗಿರಲಿಲ್ಲ. ಆದರೆ ಈಗ ಮತ್ತೆ ಈ ಸಿನಿಮಾವನ್ನು ನೋಡುವುದಕ್ಕೆ ಒಂದು ಚಾನ್ಸ್ ಸಿಕ್ಕಿದೆ.

  'ಬ್ಯೂಟಿಫುಲ್ ಮನಸುಗಳು' ಸಿನಿಮಾ ಇದೇ ಭಾನುವಾರ ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಪ್ರದರ್ಶನವಾಗಲಿದೆ. ಈ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ತಂಡ ಕೂಡ ಭಾಗಿಯಾಗಲಿದ್ದು, ಪ್ರದರ್ಶನದ ನಂತರ ಚಿತ್ರ ಸಂವಾದ ಕಾರ್ಯಕ್ರಮ ಕೂಡ ಇರಲಿದೆ. ಭಾನುವಾರ ಬೆಳ್ಳಿಗೆ 10.30ಕ್ಕೆ ಸಿನಿಮಾ ಪ್ರದರ್ಶನ ಆಗಲಿದೆ.

  ಸ್ಯಾಂಡಲ್ ವುಡ್ ಸಾಮ್ರಾಜ್ಯದ ಮುಂದಿನ ರಾಣಿ 'ಶೃತಿ ಹರಿಹರನ್' ಆಗ್ಬಹುದಲ್ವಾ?

  'ಬ್ಯೂಟಿಫುಲ್ ಮನಸುಗಳು' ಸಿನಿಮಾಗೆ ಎರಡು ರಾಜ್ಯ ಪ್ರಶಸ್ತಿ ಸಹ ಬಂದಿದೆ. ಚಿತ್ರದ ನಾಯಕಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ವಿಜಯ ಪ್ರಕಾಶ್ ''ನಮ್ಮೂರಲ್ಲಿ ಚಳಿಗಾಲದಲ್ಲಿ...'' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದು, ಈ ಹಾಡಿಗೆ ಮದನ್ ಬೆಳ್ಳಿಸಾಲು ಸಾಹಿತ್ಯ ಬರೆದಿದ್ದರು.

  English summary
  Kannada movie 'Beautiful Manasugalu' special show on this sunday in Suchitra Cinema & Cultural Academy. Banashankari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X