ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು

By Prasad

ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಜನವರಿ 28ರಿಂದ ಫೆಬ್ರವರಿ 4ರವರೆಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಸಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016 ಹಲವು ಪ್ರಥಮಗಳನ್ನು ಒಳಗೊಂಡಿದೆ.

* ಪ್ರಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿರುತ್ತಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರು ಕಾರ್ಯಾಧ್ಯಕ್ಷರಾಗಿರುತ್ತಾರೆ. ಖ್ಯಾತ ಚಿತ್ರನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ಜಯಮಾಲಾ ಅವರು ಕಲಾ ನಿರ್ದೇಶಕರಾಗಿದ್ದಾರೆ.[ಕೆಎಫ್ ಸಿಸಿಯಿಂದ ಗೋವಾ ಚಲನಚಿತ್ರೋತ್ಸವಕ್ಕೆ ಬಹಿಷ್ಕಾರ!]

Specialities of Bengaluru International Film Festival 2016

* ಏಕಕಾಲದಲ್ಲಿ ಬೆಂಗಳೂರು ಹಾಗೂ ಮೈಸೂರು ಎರಡು ನಗರಗಳಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.

* ಈ ಬಾರಿಯ ಬೆಂಗಳೂರು ಚಲನ ಚಿತ್ರೋತ್ಸವವು ಒಂದೇ ಸೂರಿನಡಿ ಎರಡು ನಗರಗಳಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ರಾಜಾಜಿನಗರದ ಓರಿಯನ್ ಮಾಲ್‌ನ 11 ಬೆಳ್ಳಿ ಪರದೆಗಳ ಮೇಲೆ ಚಿತ್ರೋತ್ಸವದ ಚಿತ್ರಗಳು ಮೂಡಿಬರಲಿದೆ. ಹಾಗೆಯೇ ಮೈಸೂರಿನ ಐನಾಕ್ಸ್ ಚಲನಚಿತ್ರಮಂದಿರದ 4 ಬೆಳ್ಳಿ ಪರದೆಗಳಲ್ಲಿ ಚಲನಚಿತ್ರ ಪ್ರದರ್ಶಿತಗೊಳ್ಳಲಿದೆ.

* ಜನವರಿ 28ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016 ಉದ್ಘಾಟನೆಗೊಳ್ಳಲಿದೆ.

* ಚಲನಚಿತ್ರೋತ್ಸವ ಸಮಾರೋಪ ಸಮಾರಂಭವು ಫೆಬ್ರವರಿ 4ರಂದು ಮೈಸೂರಿನಲ್ಲಿ ನಡೆಯಲಿದೆ.

* ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೇಶ-ವಿದೇಶಗಳಿಂದ ಚಲನಚಿತ್ರರಂಗದ 50ಕ್ಕೂ ಗಣ್ಯ ಪ್ರತಿನಿಧಿಗಳು, ಚಲನಚಿತ್ರ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ.

* 61 ದೇಶಗಳ 170 ಚಿತ್ರಗಳು 7 ದಿನಗಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

* ಸ್ಪರ್ಧಾತ್ಮಕ ವಿಭಾಗವನ್ನು 3 ಭಾಗವಾಗಿ ವಿಂಗಡಿಸಲಾಗಿದೆ. 1. ಏಷ್ಯನ್ ಸ್ಪರ್ಧೆ 2. ಭಾರತೀಯ ಚಿತ್ರಗಳು 3. ಕನ್ನಡ ಚಿತ್ರಗಳು.

* ಚಿತ್ರೋತ್ಸವದ ಸ್ಪರ್ಧೆಯಲ್ಲಿ ಏಷ್ಯಾ ವಿಭಾಗದಿಂದ 12 ಚಿತ್ರಗಳು, ಭಾರತೀಯ ವಿಭಾಗದಲ್ಲಿ 13, ಕನ್ನಡದಲ್ಲಿ 15 ಚಿತ್ರಗಳು ಪಾಲ್ಗೊಳ್ಳಲಿವೆ.

* ಈ ಬಾರಿ ಕನ್ನಡ ಚಿತ್ರಗಳ ಸ್ಪರ್ಧೆಯ ವಿಜೇತರನ್ನು ಅಂತಾರಾಷ್ಟ್ರೀಯ ಖ್ಯಾತಿಯ ತೀರ್ಪುಗಾರರು ನಿರ್ಧರಿಸಲಿದ್ದಾರೆ.

ಇವುಗಳಲ್ಲದೆ ಹಲವು ವೈಶಿಷ್ಟ್ಯಗಳನ್ನು ಚಿತ್ರ ಪ್ರದರ್ಶನದಲ್ಲಿ ಅಳವಡಿಸಲಾಗಿದೆ. ಅವುಗಳೆಂದರೆ.[8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಿತಿ ರಚನೆ]

1. ಸಮಕಾಲೀನ ಜಾಗತಿಕ ಚಿತ್ರಗಳ ಪ್ರದರ್ಶನ.
2. ಮೆಕ್ಸಿಕೋ, ಇರಾನ್, ಟರ್ಕಿ ದೇಶಗಳ ಚಿತ್ರಗಳ ವಿಶೇಷ ಆವಲೋಕನ
3. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಹಂಗೇರಿಯ ಇಸ್ಟ್ವಾನ್ ಝೆಬೋ ಹಾಗೂ ಡೆನ್‌ಮಾರ್ಕ್‌ನ ನಿಲ್ಸ್ ಮ್ಯಾಲ್ಮರೋಸ್ ಅವರ ಚಿತ್ರಗಳ ಪ್ರದರ್ಶನಕ್ಕೆ ಒತ್ತು.
4. ಕಲಾವಿದರ ಸಿಂಹಾವಲೋಕನ ವಿಭಾಗದಲ್ಲಿ ಪಂಚಭಾಷಾ ತಾರೆ, ಪದ್ಮಭೂಷಣ ಬಿ. ಸರೋಜಾ ದೇವಿ ಅವರ ಚಿತ್ರಗಳ ಪ್ರದರ್ಶನ.
5. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಚಿತ್ರ ಪ್ರದರ್ಶನದಲ್ಲಿ ಮೃಣಾಲ್ ಸೇನ್ ಹಾಗೂ ಅಡೂರ್ ಗೋಪಾಲ್ ಕೃಷ್ಣ ಅವರ ಚಿತ್ರಗಳ ಪ್ರದರ್ಶನ.
6. ಕನ್ನಡದ ಖ್ಯಾತ ಚಿತ್ರ ನಿರ್ದೇಶಕರಾದ ಸಿದ್ದಲಿಂಗಯ್ಯ ಹಾಗೂ ಕೆ.ಎಸ್.ಎಲ್. ಸ್ವಾಮಿ (ರವೀ) ಅವರಿಗೆ ನಮನ ಸಲ್ಲಿಸಲು ಅವರ ಚಿತ್ರಗಳ ಪ್ರದರ್ಶನ.
7. ಮೊದಲ ಬಾರಿಗೆ ಸಾಕ್ಷ್ಯಚಿತ್ರಗಳ ಪ್ರದರ್ಶನ. ಬರ ಕುರಿತಂತೆ ದೇಶ ವಿದೇಶಗಳಲ್ಲಿ ಸಿದ್ಧಗೊಂಡಿರುವ ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ.

* ಬರ್ಲಿನ್, ಕಾನ್ಸ್, ಟೊರೆಂಟೋ, ಗೋವಾ, ಮುಂಬೈ ಹಾಗೂ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಏಷ್ಯನ್ ಮತ್ತು ಜಾಗತಿಕ ಸಿನಿಮಾಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

* ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಇರಾನ್‌ನ ಜಾಫರ್ ಪಹಾನಿ, ಚೀನಾದ ಜಿಯಾ ಝಾಂಗ್ ಕೆ, ಜಪಾನ್‌ನ ಹೋ ಸಿಯಾವೋ ಸಿಯೆನ್, ಟರ್ಕಿಯ ಯಮಿನ್ ಅಲ್ಫರ್, ಫಾನ್ಸ್‌ನ ಜಾಕ್ಸ್ ಅಡಿಯಾರ್ಸ್, ಜರ್ಮನಿಯ ಕ್ರಿಶ್ಚಿಯನ್ ಪೆಝೋಲ್ಡ್, ಇಟಲಿಯನ್ ಮೊರೆಟ್ಟಿ, ಅವರ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

* ಚಿತ್ರಗಳನ್ನು ವೀಕ್ಷಿಸಲಿಚ್ಚಿಸುವವರಿಗೆ ನೋಂದಣಿಗಾಗಿ, ಬೆಂಗಳೂರಿನ ಚಲನಚಿತ್ರ ಅಕಾಡೆಮಿಯ ಕಾರ್ಯಾಲಯ, ಸುಚಿತ್ರ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಣಿ ಘಟಕಗಳನ್ನು ಜನವರಿ 6ರಿಂದ ತೆರೆಯಲಾಗುವುದು.

ಕನ್ನಡ, ಸಂಸ್ಕೃತಿ, ವಾರ್ತಾ ಹಾಗು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್.ಎಸ್. ಚನ್ನಪ್ಪಗೌಡ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ಖ್ಯಾತ ನಿರ್ದೇಶಕರಾದ ಡಾ. ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಆರ್.ಪಿ.ಶರ್ಮಾ, ನಟಿ ರಾಧಿಕಾ ಪಂಡಿತ್, ಪತ್ರಕರ್ತ ವಿಶಾಖಾ ಎನ್., ಸೆನ್ಸಾರ್ ಮಂಡಳಿಯ ಸ್ಥಳೀಯ ಮುಖ್ಯಸ್ಥರು, ಫಿಲ್ಮಂ ಸೊಸೈಟಿ ಅಧ್ಯಕ್ಷರು, ಚಿಲ್ಡ್ರನ್ಸ್ ಇಂಡಿಯಾದ ಅಧ್ಯಕ್ಷ ನಂಜುಂಡೇಗೌಡ, ಸಂಘಟನಾ ಸಮಿತಿಯ ಸದಸ್ಯರಾಗಿರುತ್ತಾರೆ.

ಖ್ಯಾತ ಸಿನಿಮಾ ತಜ್ಞ ವಿದ್ಯಾ ಶಂಕರ್ ಕಾರ್ಯಕಾರಿ ಕಲಾ ನಿರ್ದೇಶಕರಾಗಿರುತ್ತಾರೆ. ಕೇಂದ್ರ ಸರ್ಕಾರ ಗೋವಾದಲ್ಲಿ ಸಂಘಟಿಸುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶಕರಾಗಿದ್ದ ಶಂಕರ್ ಮೋಹನ್ ಅವರು ಸಲಹೆಗಾರರಾಗಿರುತ್ತಾರೆ.

More from Filmibeat

English summary
Specialities of Bengaluru International Film Festival 2016, which will be held in Bangalore and Mysuru from January 28 to February 4. 61 countries are taking part and 170 movies from all languages will be showcased in this film festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X