»   » ಉಪೇಂದ್ರ 'ಪ್ರಜಾಕೀಯ' ವೆಬ್ ಸೈಟ್ ನಲ್ಲಿರುವ ವಿಶೇಷತೆಗಳು

ಉಪೇಂದ್ರ 'ಪ್ರಜಾಕೀಯ' ವೆಬ್ ಸೈಟ್ ನಲ್ಲಿರುವ ವಿಶೇಷತೆಗಳು

Written By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಇಂದು ತಮ್ಮ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ' (ಕೆ.ಪಿ.ಜೆ.ಪಿ) ಪಕ್ಷದ ವೆಬ್ ಸೈಟ್ ಹಾಗೂ ಆಪ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಉಪ್ಪಿಯ ಈ ವೆಬ್ ಸೈಟ್ ಅನೇಕ ವಿಶೇಷತೆಗಳನ್ನು ಹೊಂದಿದೆ.

ಇತರ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರದ ಮೂಲಕ ಚುನಾವಣೆಯ ಪ್ರಚಾರವನ್ನು ಈಗಾಗಲೇ ಶುರು ಮಾಡಿವೆ. ಇತ್ತ ಉಪೇಂದ್ರ ವೆಬ್ ಸೈಟ್ ಮೂಲಕ ತಮ್ಮ ಪಕ್ಷದ ವಿಚಾರವನ್ನು ಜನರಿಗೆ ತಲುಪಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಅಂದಹಾಗೆ, ಉಪ್ಪಿಯ ಕೆ.ಪಿ.ಜೆ.ಪಿ ವೆಬ್ ಸೈಟ್ ನಲ್ಲಿರುವ ವಿಶೇಷತೆಗಳು ಇಲ್ಲಿದೆ ಓದಿ...

ಪ್ರಜಾಕೀಯದ ಪಕ್ಷದ ವೇದ ವಾಕ್ಯ

ಕೆ.ಪಿ.ಜೆ.ಪಿ ವೆಬ್ ಸೈಟ್ ಓಪನ್ ಮಾಡಿದ ತಕ್ಷಣ 'Leadership Is "Action", Not Position' ಎಂಬ ವಾಕ್ಯ ಕಾಣಿಸುತ್ತದೆ. ತಮ್ಮ ಪಕ್ಷದಲ್ಲಿ 'ನಾಯಕತ್ವ ಅಂದರೆ ಅದು ಸ್ಥಾನ ಅಲ್ಲ.. ಕಾರ್ಯ' ಎಂದು ಉಪೇಂದ್ರ ಒಂದೇ ಸಾಲಿನಲ್ಲಿ ಹೇಳಿದ್ದಾರೆ.

ರಾಜಕೀಯ ಮತ್ತು ಪ್ರಜಾಕೀಯದ ವ್ಯತ್ಯಾಸ

ರಾಜಕೀಯ ಮತ್ತು ಪ್ರಜಾಕೀಯಕ್ಕೂ ಇರುವ ವ್ಯತ್ಯಾಸವನ್ನು ಜನರಿಗೆ ಅರ್ಥವಾಗುವಂತೆ ವೆಬ್ ಸೈಟ್ ನಲ್ಲಿ ವಿವರಿಸಲಾಗಿದೆ.

ಜನಗಳ ಫೋಟೋ

ಪ್ರಜಾಕೀಯಕ್ಕೆ ಬೆಂಬಲ ನೀಡಿರುವಂತಹ ಜನರ ಮತ್ತು ಬೆಂಬಲಿಗರ ಫೋಟೋಗಳು ವೆಬ್ ಸೈಟ್ ನಲ್ಲಿರುವ ಮುಖ್ಯ ಪುಟದಲ್ಲಿ ರಾರಾಜಿಸುತ್ತಿವೆ.

ಅಭ್ಯರ್ಥಿಗಳಿಗೆ ಮಾಹಿತಿ

'ಕೆ.ಪಿ.ಜೆ.ಪಿ' ಪಕ್ಷವನ್ನು ಸೇರಲು ಬಯಸಿದವರಿಗೆ ಬೇಕಾದ ಅಗತ್ಯ ಮಾಹಿತಿಗಳು, ಅಭ್ಯರ್ಥಿಗಳಿಗೆ ಇರಬೇಕಾದ ಕೆಲ ಅರ್ಹತೆಗಳ ಬಗ್ಗೆ ಹೇಳಲಾಗಿದೆ.

ಉಪೇಂದ್ರ ವಿಡಿಯೋಗಳು

ಉಪೇಂದ್ರ ಮೊದಲು 'ಪ್ರಜಾಕೀಯ' ವ್ಯವಸ್ಥೆ ಬಗ್ಗೆ ಮಾತನಾಡಿದ್ದ ಆಡಿಯೋ, ಹಾಗೂ ಕಾರ್ಯಕ್ರಮಗಳಲ್ಲಿ ಮಾತನಾಡಿರುವ ವಿಡಿಯೋ ವೆಬ್ ಸೈಟ್ ನಲ್ಲಿ ಲಭ್ಯವಿದೆ.

ಪ್ರಜಾಕೀಯದ ಪ್ರಚಾರ ತಂತ್ರ

''ಯಾವುದೇ ಕೆಲಸ ಶುರುವಾಗಬೇಕಾದರೆ ಅದು ನಮ್ಮಿಂದಲೇ ಶುರುವಾಗಬೇಕು, ರಾಜಕೀಯ ತಪ್ಪು, ಪ್ರಜಾಕೀಯ ಸರಿ ಅಂತ ನಿಮಗೆ ನಂಬಿಕೆ ಬಂದರೆ.. ನೀವೊಬ್ಬರು ಇದನ್ನು ನಂಬಿ, ನಿಮ್ಮ ಮನೆಯವರನ್ನು ನಂಬಿಸಿ, ನಿಮ್ಮ ಮನೆಯವರನ್ನು, ನಿಮ್ಮ ಜೊತೆ ಇರುವ ಸ್ನೇಹಿತರನ್ನು ಬದಲಾವಣೆ ಮಾಡಿ, ಅವರು ಬೇರೆಯವರನ್ನು ಬದಲಾಯಿಸುವಂತೆ ಮಾಡುವುದೇ... ಪ್ರಜಾಕೀಯದ ಪ್ರಚಾರ ತಂತ್ರ! ಅಸಾಧ್ಯವನ್ನು ಸಾಧ್ಯ ಮಾಡುವವನೇ... ಅಸಾಮಾನ್ಯ! ಇದೇ ನಿಜವಾದ ಪ್ರಜಾಕೀಯ... ಪ್ರಜಾ ಪ್ರಭುತ್ವ.. ಇದು ಸಾಧ್ಯ. ​ಇದನ್ನು ಮೊದಲು ನಾವು ನಂಬಬೇಕು.'' ಎಂಬ ಮಾತುಗಳೊಂದಿಗೆ ಉಪೇಂದ್ರ ತಮ್ಮ ವೆಬ್ ಸೈಟ್ ಮೂಲಕ ಜನರನ್ನು ತಲುಪುತ್ತಿದ್ದಾರೆ.

English summary
Specialities of Real Star Upendra's 'Karnataka Pragnavantha Janatha Party' Website.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X