ಸನ್ನಿಯ ಕನ್ನಡ ಚಿತ್ರದಲ್ಲಿ ಇಷ್ಟೊಂದು ವಿಶೇಷತೆಗಳಾ.!

By Bharath Kumar

Recommended Video

ಕನ್ನಡಕ್ಕೆ ಮತ್ತೆ ಬಂದ ಬೇಬಿ ಡಾಲ್ ಸನ್ನಿ | Filmibeat Kannada

ಕನ್ನಡದಲ್ಲಿ ಸನ್ನಿ ಲಿಯೋನ್ ಬರಿ ಹಾಡುಗಳಿಗೆ ಮಾತ್ರ ಹೆಜ್ಜೆ ಹಾಕಿದ್ದರು. ಪ್ರೇಮ್ ಅಭಿನಯಿಸಿದ್ದ 'ಡಿಕೆ' ಹಾಗೂ ಇಂದ್ರಜಿತ್ ಲಂಕೇಶ್ ನಿರ್ದೇಶನದ ಲವ್ ಯೂ ಆಲಿಯಾ ಚಿತ್ರಗಳಲ್ಲಿ ಸೊಂಟ ಬಳುಕಿಸಿದ್ದೇ ಹೆಚ್ಚು. ಇದೀಗ, ಸಂಪೂರ್ಣ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅಂದ್ಹಾಗೆ, ಬಹುಭಾಷಾ ಸಿನಿಮಾ ಎನ್ನುವುದು ವಿಶೇಷ.

ಹೌದು, 100 ಕೋಟಿ ರೂಪಾಯಿ ವೆಚ್ಚದಲ್ಲಿ, ಐದು ಭಾಷೆಗಳಲ್ಲಿ ತಯಾರಾಗುತ್ತಿರುವ 'ವೀರ ಮಹಾದೇವಿ' ಚಿತ್ರದಲ್ಲಿ ಸನ್ನಿ ಲಿಯೋನ್ ಮಹಾರಾಣಿಯಾಗಿ ಅಬ್ಬರಿಸಲಿದ್ದಾರೆ. ಅರುಂಧತಿ, ರುದ್ರಮದೇವಿ, ಬಾಹುಬಲಿ ರೀತಿಯಲ್ಲಿ ಈ ಸಿನಿಮಾನೂ ಸಿದ್ಧವಾಗುತ್ತಿದ್ದು, ಸನ್ನಿ ಕೈಯಲ್ಲಿ ಖಡ್ಗ ಹಿಡಿದು, ಕುದರೆ ಏರಿ ಯುದ್ಧ ಮಾಡಲಿದ್ದಾರೆ.

ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ವಿ ಸಿ ವಡಿವುದೈಯನ್ ಅವರ ನಿರ್ದೇಶನದಲ್ಲಿ, ಪೊಸ್ಸೇ ಸ್ಟೀಫನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷತೆಗಳನ್ನ ತಿಳಿಯಲು ಮುಂದೆ ಓದಿ....

ಸನ್ನಿ ಲಿಯೋನ್ ಅದ್ಧೂರಿ ತಯಾರಿ

ಸನ್ನಿ ಲಿಯೋನ್ ಅದ್ಧೂರಿ ತಯಾರಿ

150 ದಿನಗಳ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದೆ. ಸನ್ನಿ ಲಿಯೋನ್ ಈ ಚಿತ್ರಕ್ಕೆ ಕುದುರೆ ಸವಾರಿ, ಕತ್ತಿ ವರಸೆ ವಿಶೇಷವಾಗಿ ಕಲಿತಿದ್ದಾರೆ. ತಮಿಳು ನಟ ನಾಜರ್ ಅಲ್ಲದೆ ಕನ್ನಡ, ತೆಲುಗು, ಮಲಯಾಳ ಭಾಷೆಗಳ ನಟರುಗಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಅದ್ಧೂರಿ ಸೆಟ್, ಭರ್ಜರಿ ತಯಾರಿ

ಅದ್ಧೂರಿ ಸೆಟ್, ಭರ್ಜರಿ ತಯಾರಿ

ಈ ಚಿತ್ರದ ಯುದ್ದ ಸನ್ನಿವೇಶಗಳಿಗೆ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಂದ ಕುದುರೆ ಹಾಗೂ ಆನೆಗಳನ್ನು ಒಟ್ಟು ಸೇರಿಸಿ ಅದ್ಭುತವಾಗಿ ಚಿತ್ರೀಕರಣ ಮಾಡಲಾಗುವುದು. ಇದಕ್ಕಾಗಿ ಸಹ ಕಲಾವಿದರಿಗೆ ತರಬೇತಿ ಸಹ ಒದಗಿಸಲಾಗಿದೆ. ಕೇರಳ ರಾಜ್ಯದ ಕಾಡುಗಳಲ್ಲಿ ಚಿತ್ರಕ್ಕೆ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗುವುದು. ರಾಮೋಜೀ ಫಿಲ್ಮ್ ಸಿಟಿಯಲ್ಲಿ ಹಾಕಲಾಗಿರುವ ದೊಡ್ಡ ಸೆಟ್ ನಲ್ಲೂ ಶೂಟಿಂಗ್ ಮಾಡಲಿದ್ದಾರೆ.

40 ಕೋಟಿ ವೆಚ್ಚದ ಗ್ರಾಫಿಕ್ಸ್

40 ಕೋಟಿ ವೆಚ್ಚದ ಗ್ರಾಫಿಕ್ಸ್

'ವೀರ ಮಹಾದೇವಿ' ಚಿತ್ರಕ್ಕೆ ಯುದ್ದದ ಸನ್ನಿವೇಶಗಳು ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಬಳಕೆ ಆಗಲಿದೆ. ಕೆನಡಾ ದೇಶದ ತಂತ್ರಜ್ಞರನ್ನು ಈ ಮಹೋನ್ನತ ಕೆಲಸಕ್ಕೆ ಬಳಕೆ ಮಾಡಲಾಗುವುದು. ಇದಕ್ಕಾಗಿಯೇ 40 ಕೋಟಿ ರೂಪಾಯಿ ಸಹ ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ. ಸನ್ನಿ ಲಿಯೋನ್ ಅವರ 150 ದಿನಗಳ ಸಮಯವನ್ನು ಈ ಚಿತ್ರಕ್ಕೆ ಮುಡುಪಾಗಿಟ್ಟಿದ್ದಾರೆ.

ಮೋಡಿ ಮಾಡಿದೆ ಫಸ್ಟ್ ಲುಕ್

ಮೋಡಿ ಮಾಡಿದೆ ಫಸ್ಟ್ ಲುಕ್

ಚಿತ್ರೀಕರಣದ ಸಮಯದಲ್ಲಿ ಅವರು ಎಲ್ಲರ ಜೊತೆ ಬೆರೆತು ಸಾಮಾನ್ಯವಾಗಿ ಹೊಂದಿಕೊಡಿದ್ದಾರೆ.`ವೀರ ಮಹಾದೇವಿ' ಚಿತ್ರದ ಫಸ್ಟ್ ಲುಕ್ ಸಹ ಈಗಾಗಲೇ ಬಿಡುಗಡೆಯಾಗಿದ್ದು, ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಇನ್ನುಳಿದಂತೆ ಅಂಬರೀಶ್, ದತ್ತಾಶ ಎ ಪಿಳ್ಳೈ, ರಿಜೋಯ್ಸ್ ಹಾಗೂ ಇತರರು ತಂತ್ರಜ್ಞರ ಪಟ್ಟಿಯಲ್ಲಿದ್ದಾರೆ.

More from Filmibeat

English summary
Actress Sunny Leone is all set to foray into Kollywood with the upcoming period drama titled ‘Veeramadevi’. The makers are planning to release the film in four other languages; Telugu, Kannada, Malayalam, and Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X