'ಕುರುಕ್ಷೇತ್ರ' ಟ್ರೇಲರ್ ನಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ
Recommended Video
'ಕುರುಕ್ಷೇತ್ರ' ಸಿನಿಮಾದ ಟ್ರೇಲರ್ ನಿರೀಕ್ಷೆ ಮಟ್ಟಕ್ಕೆ ಇಲ್ಲ ಎಂದು ದರ್ಶನ್ ಅಭಿಮಾನಿಗಳು ಬೇಸರ ಆಗಿದ್ದಾರೆ. ಅದರ ಜೊತೆಗೆ, ಚಿತ್ರತಂಡ ಮತ್ತೊಂದು ತಪ್ಪು ಮಾಡಿ, ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
ಇತಿಹಾಸದಲ್ಲೆ ಮೊಟ್ಟಮೊದಲ ಬಾರಿಗೆ
ಜಗತಿನ ಚಲನಚಿತ್ರ ರಂಗದಲ್ಲೆ
3D ಪೌರಾಣಿಕ ಚಲನಚಿತ್ರ
ಎಂದು ಟ್ರೇಲರ್ ನಲ್ಲಿ ಮೂರು ಸಾಲು ಬರುತ್ತದೆ. ಆದರೆ, ಈ ಸಾಲುಗಳಲ್ಲಿ ಜಗತ್ತಿನ ಪದ ತಪ್ಪಾಗಿ ಬರೆಯಲಾಗಿದೆ. ಜಗತಿನ ಎಂದು ತಪ್ಪಾಗಿ ಬರೆದಿದ್ದು, ಅನೇಕರು ಅಸಮಾದಾನಕ್ಕೆ ಕಾರಣ ಆಗಿದೆ.

ಟ್ರೇಲರ್ ಅನ್ನು ಸರಿಯಾಗಿ ಮಾಡಿಲ್ಲ.. ಆದರೆ, ಅದರ ಮೇಲೆ ಇರುವ ಪದವನ್ನಾದರೂ ಸರಿಯಾಗಿ ಬರೆಯಿರಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಸಣ್ಣ ತಪ್ಪು ಆಗಿದ್ದರೂ, ಇಂತಹ ಸಿನಿಮಾದಲ್ಲಿ ತಪ್ಪು ಆಗಬಾರದು ಎನ್ನುವುದು ಅನೇಕರ ಅಭಿಪ್ರಾಯ.
ಅಂದಹಾಗೆ, ಟೀಕೆಗಳ ನಡುವೆಯೂ 'ಕುರುಕ್ಷೇತ್ರ' ಟ್ರೇಲರ್ ಈಗ ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಇದೆ. ಬಹುತೇಕ ನೆಗೆಟಿವ್ ಕಾಮೆಂಟ್ಸ್ ಗಳು ಟ್ರೇಲರ್ ಗೆ ಬರುತ್ತಿದ್ದು, ಕಾಮೆಂಟ್ಸ್ ಗಳನ್ನು ಹೈಡ್ ಮಾಡಲಾಗಿದೆ.

ಮುನಿರತ್ನ ಈ ಸಿನಿಮಾದ ನಿರ್ಮಾಣ ಮಾಡಿದ್ದು, ನಾಗಣ್ಣ ನಿರ್ದೇಶನ ಚಿತ್ರಕ್ಕಿದೆ.


Click it and Unblock the Notifications











