»   » 'ಟೀಸರ್'ನಿಂದಲೇ ದಾಖಲೆ ಸೃಷ್ಠಿ ಮಾಡುತ್ತಿರುವ 'ಸ್ಪೈಡರ್'!

'ಟೀಸರ್'ನಿಂದಲೇ ದಾಖಲೆ ಸೃಷ್ಠಿ ಮಾಡುತ್ತಿರುವ 'ಸ್ಪೈಡರ್'!

Posted By:
Subscribe to Filmibeat Kannada

ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸ್ಪೈಡರ್' ಚಿತ್ರ ಫಸ್ಟ್ ಲುಕ್ ನಿಂದಲೇ ಕುತೂಹಲ ಹೆಚ್ಚಿಸಿತ್ತು. ಈಗ ಟೀಸರ್ ನಿಂದ ದಾಖಲೆಗಳನ್ನ ಸೃಷ್ಠಿ ಮಾಡುತ್ತಿದೆ.

ಯ್ಯೂಟ್ಯೂಬ್ ನಲ್ಲಿ 'ಸ್ಪೈಡರ್' ಕ್ರೇಜ್ ಜೋರಾಗಿದ್ದು, 'ಬಾಹುಬಲಿ' ನಂತರ ಅತಿ ಹೆಚ್ಚು ವೀಕ್ಷಕರನ್ನ ಹೊಂದಿದೆ. ಮಹೇಶ್ ಬಾಬು ಲುಕ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದು, ಚಿತ್ರಕ್ಕಾಗಿ ತುದಿಗಾಲಲ್ಲಿ ಕಾಯುವಂತಾಗಿದೆ.[ಪ್ರಿನ್ಸ್ ಮಹೇಶ್ ಬಾಬು 'ಸ್ಪೈಡರ್'ಗೆ ಟಿಟೌನ್ ರಾಣಿಯರು ಕ್ಲೀನ್ ಬೌಲ್ಡ್!]

ಮಹೇಶ್ ಬಾಬು ಮತ್ತು ಎ.ಆರ್.ಮುರುಗದಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಇದಾಗಿದ್ದು, ದಕ್ಷಿಣ ಚಿತ್ರರಂಗದಲ್ಲಿ ಹೈ ಎಕ್ಸ್ ಪೆಕ್ಟೇಶನ್ ಹುಟ್ಟುಹಾಕಿದೆ. ಮುಂದೆ ಓದಿ.......

ಮೊದಲ ದಿನ 'ಸ್ಪೈಡರ್' ಹವಾ

'ಸ್ಪೈಡರ್' ಚಿತ್ರದ ಟೀಸರ್ ಮೊದಲ ದಿನ 6.3 ಲಕ್ಷ ವೀಕ್ಷಕರು ನೋಡಿದ್ದಾರೆ. ಮೊದಲ 24 ಗಂಟೆಯಲ್ಲಿ ಅತಿ ಹೆಚ್ಚು ಜನ ನೋಡಿರುವ ಟೀಸರ್ ಪೈಕಿ ಇದು ಎರಡನೇ ಚಿತ್ರವಾಗಿದೆಯಂತೆ.[ಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್]

'ಬಾಹುಬಲಿ' ನಂತರ 'ಸ್ಪೈಡರ್'

'ಬಾಹುಬಲಿ' ನಂತರದ ಸ್ಥಾನವನ್ನ 'ಸ್ಪೈಡರ್' ಚಿತ್ರದ ಟೀಸರ್ ಪಡೆದುಕೊಂಡಿದೆ. ದಾಖಲೆಗಳ ಪ್ರಕಾರ, ಬಾಹುಬಲಿ ಟೀಸರ್ ಮೊದಲ ದಿನ 8 ಮಿಲಿಯನ್ ಜನರು ನೋಡಿದ್ದರು.

1 ಕೋಟಿಯತ್ತ ವೀಕ್ಷಕರ ಸಂಖ್ಯೆ

ಈಗಾಗಲೇ 8.8 ಲಕ್ಷ ವೀಕ್ಷಕರು ಸ್ಪೈಡರ್ ಟೀಸರ್ ನೋಡಿದ್ದಾರೆ. ಸದ್ಯ, ಸ್ಪೈಡರ್ ಕ್ರೇಜ್ ನೋಡುತ್ತಿದ್ದರೇ, ಇನ್ನು ಕೆಲವೇ ದಿನಗಳಲ್ಲಿ ವೀಕ್ಷಕರ ಸಂಖ್ಯೆ 1 ಕೋಟಿ ತಲುಪಲಿದೆ.

ಪ್ರಿನ್ಸ್-ಮುರುಗದಾಸ್ ಜೋಡಿ

ಅಂದ್ಹಾಗೆ, ಸ್ಪೈಡರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಎ.ಆರ್ ಮುರುಗದಾಸ್. ಇದೇ ಮೊದಲ ಬಾರಿಗೆ ಮಹೇಶ್ ಬಾಬು ಚಿತ್ರಕ್ಕೆ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಗಜಿನಿ', 'ತುಪಾಕಿ', 'ಕತ್ತಿ', 'ಸ್ಟಾಲಿನ್', ರಾಜ ರಾಣಿ, ಸೇರಿದಂತೆ ಹಲವು ಚಿತ್ರಗಳಿಗೆ ಮುರುಗದಾಸ್ ಡೈರೆಕ್ಷನ್ ಮಾಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಸ್ಪೈಡರ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

English summary
Spyder Teaser has already Created a Record for the Highest ever Views on day one a South Indian movie. 6.3 million views on YouTube within 24 hours of its release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada