'ಬೈ 2 ಲವ್' ಸಿನಿಮಾ ಚಿತ್ರೀಕರಣ ಮುಗಿಸಿದ ಧನ್ವೀರ್-ಶ್ರೀಲೀಲಾ
'ಬಜಾರ್' ನಂತರ ಧನ್ವೀರ್ ಕೈಗೆತ್ತಿಕೊಂಡಿದ್ದ ಹೊಸ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹರಿ ಸಂತೋಷ್ (ಅಲೆಮಾರಿ ಸಂತು) ನಿರ್ದೇಶನದಲ್ಲಿ ಪ್ರಾರಂಭವಾಗಿದ್ದ 'ಬೈ ಟು ಲವ್' ಆಗಸ್ಟ್ 24 ರಂದು ಶೂಟಿಂಗ್ ಮುಗಿಸಿದೆ ಎಂದು ತಿಳಿದು ಬಂದಿದೆ.
ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. 'ಟಗರು' ಖ್ಯಾತಿಯ ಮಹಿಂದ್ರಾ ಸಿಂಹ ಅವರ ಛಾಯಾಗ್ರಾಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಕೆ ಎಂ ಪ್ರಕಾಶ್ ಸಂಕಲನವನ್ನು ಬೈ 2 ಲವ್ ಸಿನಿಮಾ ಒಳಗೊಂಡಿದೆ.
'ಬೈ 2 ಲವ್' ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ 'ಕಿಸ್' ಖ್ಯಾತಿಯ ಶ್ರೀಲೀಲಾ ನಟಿಸಿದ್ದಾರೆ. ಅಂದ್ಹಾಗೆ, 'ಬಜಾರ್' ಸಿನಿಮಾ ಮುಗಿದ ಬಳಿಕ 'ಬಂಪರ್' ಎಂಬ ಚಿತ್ರವನ್ನು ಧನ್ವೀರ್ ಮತ್ತು ಹರಿ ಸಂತು ಘೋಷಿಸಿದ್ದರು. ಅದಕ್ಕೂ ಮೊದಲೇ 'ಬೈ ಟು ಲವ್' ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

ಕ್ರಿಸ್‌ಮಸ್ ಹಬ್ಬದ ವಿಶೇಷವಾಗಿ 2020 ಡಿಸೆಂಬರ್ 25 ರಂದು ಬಂಡಿಮಹಾಂಕಾಳ್ಳಮ್ಮನ ದೇವರ ಸನ್ನಿಧಿಯಲ್ಲಿ 'ಬೈ 2 ಲವ್' ಚಿತ್ರದ ಮುಹೂರ್ತ ನೆರವೇರಿತ್ತು.
ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ
ಕೆವಿಎನ್ ಪ್ರೊಡಕ್ಷನ್ ಮತ್ತು ಸುಪ್ರೀತ್ ಪ್ರೊಡಕ್ಷನ್ ಮತ್ತೊಂದು ಸಿನಿಮಾ ಆರಂಭಿಸಿದೆ. 'ಜೋಗಿ' ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಹೊಸ ಚಿತ್ರ ಇಂದು (ಆಗಸ್ಟ್ 24) ಘೋಷಣೆಯಾಗಿದೆ. ಇದು ಪ್ರೇಮ್‌ಗೆ 9ನೇ ಸಿನಿಮಾ ಆಗಿದ್ದರೆ, ಧ್ರುವ ಸರ್ಜಾಗೆ 6ನೇ ಸಿನಿಮಾ. ಇನ್ನುಳಿದ ಮಾಹಿತಿ ಶೀಘ್ರದಲ್ಲಿ ಕೊಡಲಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ.


Click it and Unblock the Notifications











