Don't Miss!
- Technology ಕಡಿಮೆ ದರದ ಈ ಮೊಬೈಲ್ಗೆ ಸಖತ್ ಆಫರ್!..ಉಳಿತಾಯ ಪಕ್ಕಾ?
- News ಮಸ್ಲಿಮರು ಹೀಗೆ ಮಾಡಿರದಿದ್ದರೆ ಭಾರತದಲ್ಲಿ 'ಹಿಂದೂ ಬಾವುಟ' ಹಾರುತ್ತಿರಲಿಲ್ಲ: ಸಂತೋಷ್ ಲಾಡ್
- Automobiles ಇತ್ತೀಚಿನ ಜೀಪ್ ಕಂಪಾಸ್ ನೈಟ್ ಈಗಲ್ ಲಿಮಿಟೆಡ್ ಎಡಿಷನ್ ವಿಶೇಷತೆಗಳು!
- Sports RCB vs SRH IPL 2024: ಚಿನ್ನಸ್ವಾಮಿಯಲ್ಲಿ ರಾಯಲ್ ತಂಡಕ್ಕೆ ಸನ್ರೈಸರ್ಸ್ ಚಾಲೆಂಜ್!; ಹೆಡ್-ಟು-ಹೆಡ್ ದಾಖಲೆ
- Lifestyle ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ..? ಈ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ..!
- Finance ಅಮೇರಿಕನ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾದ ಆರ್ಬಿಐ, ಫೋನ್ಪೇ, ಗೂಗಲ್ಗೆ ಆತಂಕ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೆ ದಿನ ಎರಡು ಸಿನಿಮಾಗಳ ಮೂಲಕ ಶ್ರೀಲೀಲಾ ಗ್ರ್ಯಾಂಡ್ ಎಂಟ್ರಿ
Recommended Video
ಸೆಪ್ಟಂಬರ್ 27 ಕನ್ನಡ ಚಿತ್ರಪ್ರಿಯರಿಗೆ ದೊಡ್ಡ ಹಬ್ಬ. ಯಾಕಂದ್ರೆ ಬಹು ನಿರೀಕ್ಷೆಯ ಸ್ಟಾರ್ ನಟರ ಚಿತ್ರಗಳು ಸೆಪ್ಟಂಬರ್ 27ಕ್ಕೆ ತೆರೆಗೆ ಬರಲು ಸಜ್ಜಾಗಿವೆ. ಶ್ರೀಮುರಳಿ ಅಭಿನಯದ ಭರಾಟೆ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ಒಂದೆ ದಿನ ತೆರೆಗೆ ಬರುತ್ತಿದೆ. ಈಗ ಅದೆ ದಿನ ಕಿಸ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ.
ವಿಶೇಷ ಅಂದ್ರೆ ಭರಾಟೆ ಮತ್ತು ಕಿಸ್ ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಭರಾಟೆ ಚಿತ್ರಕ್ಕಿಂತಲು ಮೊದಲು ಕಿಸ್ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದ್ರೀಗ ಎರಡು ಚಿತ್ರಗಳು ಒಟ್ಟಿಗೆ ತೆರೆಗೆ ಬರುತ್ತಿವೆ. ಈ ಮೂಲಕ ಒಂದೆ ದಿನ ಎರಡು ಚಿತ್ರಗಳ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.
ಶ್ರೀಲೀಲಾ ಜೊತೆ ಸ್ವಿಡ್ಜರ್ ಲ್ಯಾಂಡ್ ಗೆ ಹೊರಟ ನಟ ಶ್ರೀಮುರಳಿ
ಕಿಸ್ ಚಿತ್ರಸೆಟ್ಟೇರಿ ಎರಡು ವರ್ಷದ ಮೇಲಾಗಿದೆ. ಅಂದುಕೊಂಡಂತೆ ಆಗಿದ್ರೆ ಕಿಸ್ ಈಗಾಗಲೆ ತೆರೆಗೆ ಬರಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಚಿತ್ರ ರಿಲೀಸ್ ತಡವಾದ ಕಾರಣ ಕಿಸ್ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಟ್ರೈಲರ್ ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆಗಿದೆ. ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.
ಭರಾಟೆ ಚಿತ್ರದ ಹಾಡು ಸಹ ಸದ್ದು ಮಾಡುತ್ತಿವೆ. ಶ್ರೀಲೀಲಾ ಅಭಿನಯದ ಎರಡು ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಮೊದಲ ಭಾರಿಗೆ ಎರಡು ಚಿತ್ರಗಳ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರುತ್ತಿರುವ ಅವಕಾಶ ಶ್ರೀಲೀಲಾ ಪಾಲಿಗೆ ಒಲಿದು ಬಂದಿದೆ. ಪ್ರೇಕ್ಷಕರ ಯಾವ ಚಿತ್ರಕ್ಕೆ ಹೆಚ್ಚು ಮಾರ್ಕ್ಸ್ ನೀಡುತ್ತಾನೆ ಎನ್ನುವುದು ಕುತೂಹಲ.