'ಬ್ರೇಕಪ್' ಮಾಡಿಕೊಳ್ಳಲು ಸಿದ್ಧವಾದ 'ಕಿಸ್' ನಟಿ ಶ್ರೀಲೀಲಾ
Recommended Video
'ಬ್ರೇಕಪ್' ಮಾಡಿಕೊಳ್ಳಲು ಸಿದ್ಧವಾದ 'ಕಿಸ್' ನಟಿ ಶ್ರೀಲೀಲಾ | SREE LEELA | BREAK UP | FILMIBEAT
'ಕಿಸ್' ಹಾಗೂ 'ಭರಾಟೆ' ಸಿನಿಮಾದ ಕ್ಯೂಟ್ ನಟಿ ಶ್ರೀಲೀಲಾ ಇದೀಗ ಬ್ರೇಕಪ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಅವರ ಬ್ರೇಕಪ್ ವೈಯಕ್ತಿಕ ಜೀವನದಲ್ಲಿ ಅಲ್ಲ... ಸಿನಿಮಾದಲ್ಲಿ.
'ಲೆಟ್ಸ್ ಬ್ರೇಕಪ್' ಎನ್ನುವುದು ಶ್ರೀಲೀಲಾ ಹೊಸ ಸಿನಿಮಾದ ಟೈಟಲ್. ಈ ಸಿನಿಮಾದಲ್ಲಿ ನಾಯಕನಾಗಿ ವಿಹಾನ್ ಕಾಣಿಸಿಕೊಳ್ಳುತ್ತಿದ್ದಾರೆ. 'ಪಂಚತಂತ್ರ' ನಂತರ ಈ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀ ಲೀಲಾ ನಾಯಕಿಯಾಗಿದ್ದಾರೆ.
ಲವ್ ಸ್ಟೋರಿಗಳಲ್ಲಿ ಬ್ರೇಕಪ್ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೇ ವಿಷಯದ ಮೇಲೆ ನಿರ್ದೇಶಕ ಸ್ವರೂಪ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜಯಣ್ಣ ಭೋಗೆಂದ್ರ ಬಂಡವಾಳ ಹಾಕುತ್ತಿದ್ದಾರೆ.

ವಿಹಾನ್ ಅಭಿನಯದ ನಾಲ್ಕನೇ ಸಿನಿಮಾ ಇದಾಗಿದೆ. ಶ್ರೀಲೀಲಾಗೆ ಇದು ಮೂರನೇ ಸಿನಿಮಾ. ಇಬ್ಬರು ಸಿನಿಮಾದ ಪಾತ್ರಗಳಿಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರು ಇಲ್ಲಿ ಎಂ ಬಿ ಎ ವಿದ್ಯಾರ್ಥಿಗಳಾಗಿದ್ದಾರೆ. ವಿಹಾನ್ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
More from Filmibeat
English summary
Actress Sreeleela next movie titled as Lets Break Up.


Click it and Unblock the Notifications











