For Quick Alerts
  ALLOW NOTIFICATIONS  
  For Daily Alerts

  ಕಾಲೇಜಿನಲ್ಲಿ ಕಿರಿಕ್, ಕಪಾಳಕ್ಕೆ ಹೊಡೆತ; ಬಂಧನದ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!

  |

  ಬೆಂಗಳೂರಿನ ಆನೇಕಲ್ ನಲ್ಲಿರುವ ಅಲಯನ್ಸ್ ಯೂನಿವರ್ಸಿಟಿ ವಿಚಾರದ ಕುರಿತಾಗಿ ನಟಿ ಶ್ರೀಲೀಲಾ ತಾಯಿ ಇದೀಗ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ. ವೃತ್ತಿಯಲ್ಲಿ ಸ್ತ್ರೀರೋಗ ತಜ್ಞೆಯಾಗಿರುವ ಶ್ರೀಲೀಲಾ ತಾಯಿ ಸ್ವರ್ಣಲತಾ ಬೌನ್ಸರ್ಸ್ ಹಾಗೂ ಮಾರಕಾಸ್ತ್ರಗಳೊಂದಿಗೆ ಅಲಯನ್ಸ್ ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅರೆಸ್ಟ್ ಆಗುವ ಸಾಧ್ಯತೆಯಿದೆ.

  ಈ ಅಲಯನ್ಸ್ ಕಾಲೇಜು ಒಡೆತನದ ವಿಚಾರವಾಗಿ ಆಗಾಗ ಜಗಳಗಳಾಗುತ್ತಲೇ ಇದ್ದು, ಸೆಪ್ಟೆಂಬರ್ 10ರಂದು ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಹಾಗೂ ಮಧು ಅಂಗೂರ್ ಎಂಬುವವರು ಬೌನ್ಸರ್ಸ್ ಜತೆ ಕೋರ್ಟ್ ಆದೇಶ ಇಲ್ಲದೇ ಇದ್ದರೂ ಸಹ ಅಲಯನ್ಸ್ ಕಾಲೇಜಿಗೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ದೂರು ದಾಖಲಾಗಿದೆ. ವಿವಿಯ ಸಿಬ್ಬಂದಿ ನಿವೇದಿತಾ ಮಿಶ್ರಾ ಎಂಬುವವರು ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ ಒಟ್ಟು 7 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಮಾಹಿತಿಯ ಪ್ರಕಾರ ಸದ್ಯ ಪೊಲೀಸರು ಈ 7 ಜನರ ಹುಡುಕಾಟದಲ್ಲಿದ್ದಾರೆ ಎನ್ನಲಾಗುತ್ತಿದೆ.

  ಮುಂದಿನ ಚಾನ್ಸೆಲರ್ ನಾವೇ ಎಂದು ಗದರಿದ ಸ್ವರ್ಣಲತಾ

  ಮುಂದಿನ ಚಾನ್ಸೆಲರ್ ನಾವೇ ಎಂದು ಗದರಿದ ಸ್ವರ್ಣಲತಾ

  ಇನ್ನು ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಎಂಬುವವರ ಜತೆ ವಿಶ್ವವಿದ್ಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಸಿಬ್ಬಂದಿಗೆ ಈ ಕಾಲೇಜಿನ ಮುಂದಿನ ಚಾನ್ಸಲರ್ ನಾವೇ ಎಂದು ಗದರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಸ್ವರ್ಣಲತಾ ಕಾಲೇಜಿನ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿರುವ ವಿಡಿಯೋ ಲಭ್ಯವಾಗಿದೆ. ತನ್ನ ಸುತ್ತ ಅನೇಕ ಮಂದಿ ಮೊಬೈಲ್ ಮತ್ತು ಕ್ಯಾಮೆರಾ ಮೂಲಕ ವಿಡಿಯೋ ಸೆರೆ ಹಿಡಿಯುತ್ತಿದ್ದರು ಸಹ ಲೆಕ್ಕಿಸದ ಸ್ವರ್ಣಲತಾ ರಾಜಾರೋಷವಾಗಿ ಕಾಲೇಜು ಆವರಣದೊಳಗೆ ಓಡಾಡಿದ್ದಾರೆ.

  ಸಿಬ್ಬಂದಿ ಮೇಲೆ ಹಲ್ಲೆ!

  ಸಿಬ್ಬಂದಿ ಮೇಲೆ ಹಲ್ಲೆ!

  ಇನ್ನು ಈ ವಿಡಿಯೋದಲ್ಲಿ ಶ್ರೀಲೀಲಾ ತಾಯಿ ಸ್ವರ್ಣಲತಾ ಕಾಲೇಜಿನ ಆವರಣದಲ್ಲಿ ಯಾರದ್ದೋ ಜೊತೆ ಫೋನಿನಲ್ಲಿ ಸಂಭಾಷಣೆ ನಡೆಸುತ್ತಾ ಬರುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಸಿಬ್ಬಂದಿಯೋರ್ವರು ಸ್ವರ್ಣಲತಾ ಅವರ ಮೊಬೈಲ್ ಕಸಿದುಕೊಳ್ಳುವ ಯತ್ನ ಮಾಡಿದ್ದಾರೆ. ಇದೇ ವೇಳೆಯಲ್ಲಿ ಸಿಟ್ಟಿಗೆದ್ದ ಸ್ವರ್ಣಲತಾ ಆ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಹಾಗೂ ಆಕೆ ನನ್ನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದಳು ಎಂದು ಕರೆ ಮಾಡಿದ್ದ ವ್ಯಕ್ತಿ ಜತೆ ಸ್ವರ್ಣಲತಾ ಹೇಳಿರುವ ಆಡಿಯೋ ಕೂಡ ಇಲ್ಲಿ ರೆಕಾರ್ಡ್ ಆಗಿದೆ.

  ಪೊಲೀಸರ ಉಪಸ್ಥಿತಿಯಲ್ಲಿಯೇ ಇಷ್ಟೆಲ್ಲಾ ರಂಪಾಟ

  ಪೊಲೀಸರ ಉಪಸ್ಥಿತಿಯಲ್ಲಿಯೇ ಇಷ್ಟೆಲ್ಲಾ ರಂಪಾಟ

  ಇನ್ನು ಪೊಲೀಸರ ಕಣ್ಮುಂದೆಯೇ ಶ್ರೀಲೀಲಾ ತಾಯಿ ಸ್ವರ್ಣಲತಾ ಇಷ್ಟೆಲ್ಲ ರಂಪಾಟ ಮಾಡಿದ್ದಾರೆ. ಪೊಲೀಸರು ಅಕ್ಕಪಕ್ಕದಲ್ಲಿಯೇ ಇರುವ ದೃಶ್ಯವನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಕೇವಲ ಅತಿಕ್ರಮ ಪ್ರವೇಶ ಮಾಡಿರುವುದಲ್ಲದೇ ಅಲ್ಲಿನ ಸಿಬ್ಬಂದಿ ಮೇಲೆ ಕೈ ಮಾಡಿರುವ ಸ್ವರ್ಣಲತಾ ಸ್ಥಿತಿ ಮುಂದೇನಾಗಲಿದೆಯೋ ಕಾದು ನೋಡಬೇಕಿದೆ.

  Read more about: sreeleela controversy
  English summary
  Sreeleela's mother Swarnalatha likely to be arrested by police due to Alliance university issue

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X