ಸಲ್ಮಾನ್ ಮುಂದೆ ಕನ್ನಡದ 'ಕೆಂಪೇಗೌಡ' ಚಿತ್ರದ ಬಗ್ಗೆ ಮಾತನಾಡಿದ ಶ್ರೀಶಾಂತ್.!
Recommended Video

'ಬಿಗ್ ಬಾಸ್-12' ರಿಯಾಲಿಟಿ ಶೋ ನಿನ್ನೆಯಷ್ಟೇ ಆರಂಭವಾಗಿದೆ. ಈ ಬಾರಿ 'ಬಿಗ್ ಬಾಸ್' ಮನೆಗೆ ಕ್ರಿಕೆಟರ್ ಶ್ರೀಶಾಂತ್ ಎಂಟ್ರಿಕೊಟ್ಟಿದ್ದಾರೆ. ಸ್ಟೇಡಿಯಂ ನಲ್ಲಿ ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ್ದ ಶ್ರೀಶಾಂತ್ ಇದೀಗ 'ಬಿಗ್ ಬಾಸ್' ಮೂಲಕ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನ 'ಬಿಗ್ ಬಾಸ್' ನಿರೂಪಕ ಸಲ್ಮಾನ್ ಖಾನ್ ಜೊತೆಗೆ ಶ್ರೀಶಾಂತ್ ಮಾತನಾಡಿದರು. ಈ ವೇಳೆ ಕನ್ನಡದ 'ಕೆಂಪೇಗೌಡ-2' ಚಿತ್ರದ ಬಗ್ಗೆ ಶ್ರೀಶಾಂತ್ ಉಲ್ಲೇಖ ಮಾಡಿದರು.
''ದಕ್ಷಿಣ ಭಾರತದಲ್ಲಿ ನಾನು 'ಕೆಂಪೇಗೌಡ-2' ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಾಯಿತು'' ಎಂದು ಸಲ್ಮಾನ್ ಖಾನ್ ಮುಂದೆ ಶ್ರೀಶಾಂತ್ ಹೇಳಿದರು. ಇದನ್ನ ಕೇಳಿ ಸಲ್ಮಾನ್ ಖಾನ್ ಕೂಡ ಖುಷಿ ಪಟ್ಟರು.

ಶ್ರೀಶಾಂತ್ ಹಾಗೂ ಸಲ್ಮಾನ್ ಖಾನ್ ನಡುವಿನ ಸಂವಾದದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನ ಕಂಡು ನಟ ಜಗ್ಗೇಶ್ ಹೆಮ್ಮೆ ಪಟ್ಟಿದ್ದಾರೆ.
ಅಂದ್ಹಾಗೆ, 'ಕೆಂಪೇಗೌಡ-2' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ಜಗ್ಗೇಶ್ ಸಹೋದರ ಕೋಮಲ್. ಸಹೋದರನ ಸಿನಿಮಾ ಬಗ್ಗೆ ಶ್ರೀಶಾಂತ್ ಮಾತನಾಡಿದ್ದಕ್ಕೆ ಜಗ್ಗೇಶ್ ಸಂತಸಗೊಂಡಿದ್ದಾರೆ.
ಅಂದ್ಹಾಗೆ, 'ಕೆಂಪೇಗೌಡ-2' ಈಗ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ, ಅದೂ ಗೊತ್ತಿಲ್ಲ.!


Click it and Unblock the Notifications











