Don't Miss!
- News karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನ ದಾರಕಾರ ಮಳೆ: ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅರ್ಭಟ!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ ಮುಂದೆ ಕನ್ನಡದ 'ಕೆಂಪೇಗೌಡ' ಚಿತ್ರದ ಬಗ್ಗೆ ಮಾತನಾಡಿದ ಶ್ರೀಶಾಂತ್.!
Recommended Video
'ಬಿಗ್ ಬಾಸ್-12' ರಿಯಾಲಿಟಿ ಶೋ ನಿನ್ನೆಯಷ್ಟೇ ಆರಂಭವಾಗಿದೆ. ಈ ಬಾರಿ 'ಬಿಗ್ ಬಾಸ್' ಮನೆಗೆ ಕ್ರಿಕೆಟರ್ ಶ್ರೀಶಾಂತ್ ಎಂಟ್ರಿಕೊಟ್ಟಿದ್ದಾರೆ. ಸ್ಟೇಡಿಯಂ ನಲ್ಲಿ ಆಟಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡಿದ್ದ ಶ್ರೀಶಾಂತ್ ಇದೀಗ 'ಬಿಗ್ ಬಾಸ್' ಮೂಲಕ ನಿಮ್ಮೆಲ್ಲರ ಮುಂದೆ ಬಂದಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನ 'ಬಿಗ್ ಬಾಸ್' ನಿರೂಪಕ ಸಲ್ಮಾನ್ ಖಾನ್ ಜೊತೆಗೆ ಶ್ರೀಶಾಂತ್ ಮಾತನಾಡಿದರು. ಈ ವೇಳೆ ಕನ್ನಡದ 'ಕೆಂಪೇಗೌಡ-2' ಚಿತ್ರದ ಬಗ್ಗೆ ಶ್ರೀಶಾಂತ್ ಉಲ್ಲೇಖ ಮಾಡಿದರು.
''ದಕ್ಷಿಣ ಭಾರತದಲ್ಲಿ ನಾನು 'ಕೆಂಪೇಗೌಡ-2' ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ನಾನು ವಿಲನ್ ಪಾತ್ರ ಮಾಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಾಯಿತು'' ಎಂದು ಸಲ್ಮಾನ್ ಖಾನ್ ಮುಂದೆ ಶ್ರೀಶಾಂತ್ ಹೇಳಿದರು. ಇದನ್ನ ಕೇಳಿ ಸಲ್ಮಾನ್ ಖಾನ್ ಕೂಡ ಖುಷಿ ಪಟ್ಟರು.
ಶ್ರೀಶಾಂತ್ ಹಾಗೂ ಸಲ್ಮಾನ್ ಖಾನ್ ನಡುವಿನ ಸಂವಾದದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನ ಕಂಡು ನಟ ಜಗ್ಗೇಶ್ ಹೆಮ್ಮೆ ಪಟ್ಟಿದ್ದಾರೆ.
'ಕೆಂಪೇಗೌಡ-2' ಮೂಲಕ ಕನ್ನಡಕ್ಕೆ ಬಂದ ಶ್ರೀಶಾಂತ್.!
ಅಂದ್ಹಾಗೆ, 'ಕೆಂಪೇಗೌಡ-2' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ಜಗ್ಗೇಶ್ ಸಹೋದರ ಕೋಮಲ್. ಸಹೋದರನ ಸಿನಿಮಾ ಬಗ್ಗೆ ಶ್ರೀಶಾಂತ್ ಮಾತನಾಡಿದ್ದಕ್ಕೆ ಜಗ್ಗೇಶ್ ಸಂತಸಗೊಂಡಿದ್ದಾರೆ.
ಕೋಮಲ್ ನಟಿಸಿರುವ #kempegowda2 ಚಿತ್ರದಲ್ಲಿ ಮಾಜಿ ಕ್ರಿಕೆಟ್ಟಿಗ #srishanth #villan ಪಾತ್ರ ಮಾಡಿದ್ದಾರೆ..ಈ ಚಿತ್ರದಲ್ಲಿ ನಟಿಸಿದ ಬಗ್ಗೆ #salmankhan ಗೆ #bigboss ಗೆ ಆಯ್ಕೆಯಾದ ಸಂಧರ್ಭದಲ್ಲಿ ಶ್ರೀಶಾಂತ್ ಸಲ್ಮಾನ್ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು..
— ನವರಸನಾಯಕ ಜಗ್ಗೇಶ್ (@Jaggesh2) September 17, 2018
ನಿಮ್ಮ ಶುಭಹಾರೈಕೆ ಇರಲಿ ಕೋಮಲ್ ಗೆ. pic.twitter.com/POUhsTAvuQ
ಅಂದ್ಹಾಗೆ, 'ಕೆಂಪೇಗೌಡ-2' ಈಗ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ, ಅದೂ ಗೊತ್ತಿಲ್ಲ.!