ಯುವತಿಯನ್ನ ಎಳೆದುಕೊಂಡು ಹೋಗಿ ಕಿರುಕುಳ ನೀಡಿದ್ರಂತೆ ಕ್ರಿಕೆಟರ್ ಮಾಲಿಂಗ.!
ಚಿತ್ರರಂಗದಲ್ಲಿ #me too ಅಭಿಯಾನ ದೊಡ್ಡ ಸಂಚಲನ ಸೃಷ್ಟಿಸಿದೆ. ಒಬ್ಬರ ನಂತರ ಮತ್ತೊಬ್ಬರು ಎಂಬಂತೆ ಘಟಾನುಘಟಿ ನಿರ್ದೇಶಕ, ನಿರ್ಮಾಪಕರ ವಿರುದ್ಧ ನೊಂದ ಮಹಿಳೆಯರು ಬಾಂಬ್ ಸಿಡಿಸುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ನಟಿ, ಗಾಯಕಿ, ಸಾಮಾನ್ಯ ಮಹಿಳೆಯರು ಸಮಾಜದಲ್ಲಿ ಗಣ್ಯವ್ಯಕ್ತಿಗಳು ಎನಿಸಿಕೊಂಡಿದ್ದವರು ಮುಖವಾಡ ಕಳಚುತ್ತಿದ್ದಾರೆ.
ಚಿತ್ರೋಧ್ಯಮವನ್ನೇ ಬೆಚ್ಚಿಬೀಳಿಸಿರುವ #metoo ಈಗ ಕ್ರಿಕೆಟ್ ಜಗತ್ತಿಗೂ ಕಾಲಿಟ್ಟಿದೆ. ಗಾಯಕ ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಗಾಯಕಿ ಈಗ ಶ್ರೀಲಂಕಾ ಕ್ರಿಕೆಟರ್ ಲಸಿತ್ ಮಾಲಿಂಗ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಭಾರತಕ್ಕೆ ಕ್ರಿಕೆಟ್ ಆಡಲು ಬರುತ್ತಿದ್ದ ವೇಗದ ಬೌಲರ್ ಮಾಲಿಂಗ, ಮುಂಬೈ ಹೋಟೆಲ್ ನಲ್ಲಿ ಮಾಡಿದ ಅನಾಚಾರವನ್ನ ಗಾಯಕಿ ಬಿಚ್ಚಿಟ್ಟಿದ್ದಾರೆ. ಐಪಿಎಲ್ ನಡೆಯುತ್ತಿದ್ದ ಸಂದರ್ಭದಲ್ಲಿ ಯುವತಿಗೆ ಮಾಲಿಂಗ ಮಾಡಿರುವ ವಂಚನೆ ಬಗ್ಗೆ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.ಅಷ್ಟಕ್ಕೂ, ಹೋಟೆಲ್ ನಲ್ಲಿ ಅಂದು ನಡೆದಿದ್ದೇನು.? ಮುಂದೆ ಓದಿ.....

ಐಪಿಎಲ್ ನಡೆಯುತ್ತಿದ್ದ ಸಂದರ್ಭ
ಕ್ರಿಕೆಟ್ ಮಾಲಿಂಗ ಅವರಿಂದ ನೋವು ಅನುಭವಿಸಿದ ಮಹಿಳೆ, ಗಾಯಕಿ ಚಿನ್ಮಯಿ ಬಳಿ ಪೂರ್ತಿ ಘಟನೆಯನ್ನ ವಿವರಿಸಿದ್ದಾರೆ. ಈ ಸಂಗತಿಯನ್ನ ಚಿನ್ಮಯಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ''ಐಪಿಎಲ್ ಕ್ರಿಕೆಟ್ ನಡೆಯುತ್ತಿದ್ದ ಸಂದರ್ಭ. ಸ್ನೇಹಿತೆಯನ್ನ ಭೇಟಿ ಮಾಡಲು ನಾನು ಆ ಹೋಟೆಲ್ ಗೆ ಹೋಗಿದ್ದೆ. ಅದೇ ಹೋಟೆಲ್ ನಲ್ಲಿ ಕ್ರಿಕೆಟರ್ ಮಾಲಿಂಗ ಕೂಡ ಇದ್ದರು. ಸ್ನೇಹಿತೆಗಾಗಿ ರೂಂಮಿನ ಬಾಗಿಲ ಮುಂದೆ ಕಾಯುತ್ತಿದ್ದೆ. ಆ ವೇಳೆ ಮಾಲಿಂಗ..''

ಬೆಡ್ ಮೇಲೆ ಎಳೆದುಕೊಂಡ
'ನಾನು ಸ್ನೇಹಿತೆಗಾಗಿ ಕಾಯುತ್ತಿದ್ದೆ. ಪಕ್ಕದಲ್ಲೇ ಮಾಲಿಂಗ ರೂಂ ಕೂಡ ಇತ್ತು. ನನ್ನನ್ನು ಗಮನಿಸಿದ ಮಾಲಿಂಗ. ನಿಮ್ ಫ್ರೆಂಡ್ ಗಾಗಿ ಕಾಯುತ್ತಿದ್ದೀಯಾ, ನನ್ನ ರೂಂಮಿನಲ್ಲಿ ಇದ್ದಾಳೆ ಬಾ ಎಂದರು. ಬಹುಶಃ ಇರಬಹುದು ಎಂದು ನಂಬಿ ನಾನು ಹೋದೆ. ಆದ್ರೆ, ಒಳಗೆ ನನ್ನ ಸ್ನೇಹಿತೆ ಇರಲಿಲ್ಲ. ಅಷ್ಟರಲ್ಲೇ ಮಾಲಿಂಗ ನನ್ನನ್ನು ಎಳೆದುಕೊಂಡು ಹೋಗಿ ಬೆಡ್ ಮೇಲೆ ತಳ್ಳಿದರು''

ಅಸಭ್ಯವಾಗಿ ನಡೆದುಕೊಂಡ ಮಾಲಿಂಗ
'ಬೆಡ್ ಮೇಲೆ ತಳ್ಳಿದ ಮಾಲಿಂಗ ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡರು. ಎಷ್ಟೇ ಪ್ರಯತ್ನ ಪಟ್ಟರೂ ಅವರಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯಕ್ಕೆ ಸರಿಯಾಗಿ ಹೋಟೆಲ್ ಸಿಬ್ಬಂದಿ ಬಾಗಿಲು ತಟ್ಟಿದರು. ನಾನು ಥಟ್ ಅಂತ ವಾಷ್ ರೂಂಮಿಗೆ ಹೋಗಿಬಿಟ್ಟೆ. ಆ ನಂತರ ಹೋಟೆಲ್ ಸಿಬ್ಬಂದಿ ಅವರ ಜೊತೆ ಸೇರಿ ಮಾಲಿಂಗ ರೂಂಮಿನಿಂದ ಹೊರಗೆ ಬಂದೆ''
ಈಗ ಹೇಳಬೇಕು ಎನಿಸಿತು
ಈ ವಿಷ್ಯವನ್ನ ಬಹಿರಂಗಪಡಿಸೋಣ ಅಂದ್ರೆ ಆತ ಸ್ಟಾರ್ ಕ್ರಿಕೆಟಿಗ. ನಾನೇ ಇಷ್ಟಪಟ್ಟು ಹೋಗಿರುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಅದಕ್ಕೆ ಇಷ್ಟು ದಿನ ಆ ವಿಷ್ಯವನ್ನ ನಾನು ಹೊರಗೆ ಹೇಳಿಲ್ಲ ಎಂದು ನೊಂದ ಮಹಿಳೆ ಚಿನ್ಮಯಿ ಬಳಿ ಹೇಳಿಕೊಂಡಿದ್ದಾರೆ.


Click it and Unblock the Notifications











