twitter
    For Quick Alerts
    ALLOW NOTIFICATIONS  
    For Daily Alerts

    'ಮದಗಜ' ಹಿಂದಿ ಡಬ್ಬಿಂಗ್ ರೈಟ್ಸ್ ಸೋಲ್ಡ್‌ಔಟ್: ನಿರ್ಮಾಪಕರ ಜೇಬು ಸೇರಿದ್ದು ಎಷ್ಟು ಕೋಟಿ?

    |

    ಡಿಸೆಂಬರ್ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಸಂಭ್ರಮವೇ ನಡೆಯಲಿದೆ. ಬಿಗ್ ಬಜೆಟ್ ಸಿನಿಮಾಗಳು ಒಂದೊಂದು ಡೇಟ್ ಹಿಡಿದು ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಡಲು ಸಜ್ಜಾಗಿ ನಿಂತಿವೆ. ಇಂತಹ ದುಬಾರಿ ಸಿನಿಮಾಗಳಲ್ಲಿ ಬಿಡುಗಡೆ ಸಜ್ಜಾಗಿ ನಿಂತಿರುವ ಸಿನಿಮಾ ಮದಗಜ. ಒಂದ್ಕಡೆ ಸಿನಿಮಾ ರಿಲೀಸ್‌ಗೆ ಬೇಕಾಗಿರುವ ಥಿಯೇಟರ್ ಸೆಟಪ್ ಹಾಗೂ ವಿತರಕರಕೊಂದಿಗೆ ಸಿನಿಮಾ ವ್ಯಾಪಾರ ಬಗ್ಗೆ ಮಾತುಕತೆ ನಡೆಯುತ್ತಿದೆ. ಮತ್ತೊಂದು ಕಡೆ ಸಿನಿಮಾ ಡಬ್ಬಿಂಗ್ ರೈಟ್ಸ್ ವ್ಯವಹಾರ ಕೂಡ ನಡೆಯುತ್ತಿದೆ.

    ಮದಗಜ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಹೀಗಾಗಿ ಚಿತ್ರತಂಡದಿಂದ ಬಿಡುವಿಲ್ಲದ ಕೆಲಸ ನಡೆಯುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿಯ ಈ ಮಾಸ್ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸ್ಕೆಚ್ ಹಾಕಿದೆ ಚಿತ್ರತಂಡ. ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿರುವ ತಂಡ ಹಿಂದಿ ರೈಟ್ಸ್ ಅನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಿದೆ ಅನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಬೇಜಾನ್ ಸುದ್ದು ಮಾಡುತ್ತಿದೆ.

    ಮದಗಜ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್

    ಮದಗಜ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್

    ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಹಲವು ಭಾಷೆಗೆ ಡಬ್ ಆಗಿ ಪ್ರಸಾರ ಆಗುತ್ತವೆ. ಇದೇ ಕಾರಣಕ್ಕೆ ಮದಗಜ ಸಿನಿಮಾ ಬಹು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಸಿನಿಮಾ ರಿಲೀಸ್‌ಗೆ ಇನ್ನು 9 ದಿನಗಳು (ಡಿಸೆಂಬರ್ 3) ಬಾಕಿ ಇರುವಾಗಲೇ ದೊಡ್ಡ ಮೊತ್ತ ನಿರ್ಮಾಪಕ ಕೈ ಸೇರಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ನಿರ್ಮಿಸಿರುವ 'ಮದಗಜ' ಚಿತ್ರದ ಹಿಂದಿ ಭಾಷೆಯ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಮಾತುಕತೆ ಮುಗಿದಿದ್ದು, ದೊಡ್ಡ ಮೊತ್ತವನ್ನೇ ನಿರ್ಮಾಪಕರು ಜೇಬಿಗಿಳಿಸಿಕೊಂಡಿದ್ದಾರೆ ಎನ್ನುತ್ತಿದೆ ಚಿತ್ರತಂಡ.

    ಮದಗಜ ಹಿಂದಿ ಹಕ್ಕು ಎಷ್ಟಕ್ಕೆ ಮಾರಾಟ?

    ಮದಗಜ ಹಿಂದಿ ಹಕ್ಕು ಎಷ್ಟಕ್ಕೆ ಮಾರಾಟ?

    ಚಿತ್ರತಂಡ ನೀಡುವ ಮಾಹಿತಿ ಪ್ರಕಾರ, 'ಮದಗಜ' ಸಿನಿಮಾಗೆ ಹಿಂದಿಗೆ ಭಾರಿ ಬೇಡಿಕೆ ಬಂದಿತ್ತು. ನಿರ್ಮಾಪಕರು ಹಾಗೂ ಕೊಳ್ಳುವವರ ಮಧ್ಯೆ ಹಗ್ಗ ಜಗ್ಗಾಟದಲ್ಲಿ ಒಂದೊಳ್ಳೆ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ ಎಂದು ಹೇಳಲಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಿದ ಈ ಸಿನಿಮಾವನ್ನು ಹಿಂದಿ ನಿರ್ಮಾಪಕರು ಬರೋಬ್ಬರಿಗೆ 8 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾ ಬಳಿಕ ಕನ್ನಡ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.

    1500 ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದ್ದಾನೆ 'ಮದಗಜ'

    1500 ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದ್ದಾನೆ 'ಮದಗಜ'

    ಮದಗಜ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಮುಂದಾಗಿದೆ. ಹೀಗಾಗಿ ಬಹಳ ದೊಡ್ಡ ಥಿಯೇಟರ್ ಸೆಟಪ್ ಮಾಡಿದೆ ಚಿತ್ರತಂಡ. " ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಸೇರಿ ಮದಗಜ ಸುಮಾರು 600 ರಿಂದ 700 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗುತ್ತೆ. ಇನ್ನು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 700 ರಿಂದ 800 ಸ್ಕ್ರೀನ್‌ನಲ್ಲಿ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ಆಗಿದೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

    ಮಾಸ್ ಎಂಟರ್‌ಟೈನರ್ ಸಿನಿಮಾ 'ಮದಗಜ'

    ಮಾಸ್ ಎಂಟರ್‌ಟೈನರ್ ಸಿನಿಮಾ 'ಮದಗಜ'

    'ಮದಗಜ' ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಅನ್ನುವುದನ್ನು ಈಗಾಗಲೇ ಬಿಡುಗಡೆ ಮಾಡಿರುವ ದೃಶ್ಯ ತುಣುಕುಗಳು ಸಾಭೀತು ಮಾಡಿವೆ. ಮಾಸ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ, ಶ್ರೀ ಮುರಳಿ ಅಭಿಮಾನಿಗಳಿಗೆ ಪವರ್‌ಫುಲ್ ಸಿನಿಮಾ ಗ್ಯಾರಂಟಿ ಸಿಗುತ್ತೆ ಅಂತಿದೆ ಚಿತ್ರತಂಡ. ಶ್ರೀಮುರಳಿ ಹಾಗೂ ಆಶಿಕಾ ಲವ್ ಸ್ಟೋರಿ, ಜಗಪತಿ ಬಾಬು ವಿಲನ್ ಲುಕ್ ಇವೆಲ್ಲವೂ ಪ್ರೇಕ್ಷಕರಿಗೆ 100% ಕಿಕ್ ಕೊಡುತ್ತೆ ಅಂತ ಚಿತ್ರತಂಡ ಭರವಸೆ ನೀಡಿದೆ.

    English summary
    Roaring star Sri Murali movie madagaja hindi dubbing rights sold for 8 crores. Ayogya Mahesh Kumar directed film will be releasing on December 3rd in 3 languages.
    Wednesday, November 24, 2021, 15:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X