'ಇರುವುದೆಲ್ಲವ ಬಿಟ್ಟು' ತಂಡಕ್ಕೆ ಸಾಥ್ ನೀಡಿದ ಶ್ರೀ ಮುರಳಿ
'ಭರಾಟೆ' ಸಿನಿಮಾದಲ್ಲಿ ಬ್ಸುಸಿ ಇರುವ ನಟ ಶ್ರೀಮುರಳಿ ಇದೀಗ ಇನ್ನೊಂದು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಚಿತ್ರದಲ್ಲಿ ಶ್ರೀಮುರಳಿ ಅವರ ಖಡಕ್ ಧ್ವನಿ ಇರಲಿದೆ.
ಅಂದಹಾಗೆ, ಈ ಸಿನಿಮಾದ ಕಥೆಯ ಪ್ರಮುಖ ಅಂಶವನ್ನು ಶ್ರೀಮುರಳಿ ನಿರೂಪಣೆ ನೀಡಲಿದ್ದಾರೆ. ಚಿತ್ರದ ಪ್ರಾರಂಭ ಮತ್ತು ಅಂತ್ಯದಲ್ಲಿ ಶ್ರೀಮುರಳಿ ಕಥೆಯನ್ನು ವಿವರಿಸಲಿದ್ದಾರೆ.
ಈ ಹಿಂದೆ ತಮಿಳು ನಟ ಸಿಂಬು ಈ ಚಿತ್ರದ ಒಂದು ಹಾಡನ್ನು ಹಾಡಿದ್ದರು. ಅದರ ಬಳಿಕ ಶ್ರೀಮುರಳಿ ಕೂಡ ಒಂದು ಒಳ್ಳೆಯ ಪ್ರಯತ್ನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಇನ್ನು 'ಇರುವುದೆಲ್ಲವ ಬಿಟ್ಟು ಇರುವೆಬಿಟ್ಟುಕೊಳ್ಳುವುದೇ ಜೀವನ' ಸಿನಿಮಾವನ್ನು ಕಾಂತ ಕನ್ನಲಿ ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾವಾಗಿದ್ದು, ಈ ಬಾರಿ ವಿಭಿನ್ನ ಶೈಲಿಯ ಕಥೆ ಹೇಳುತ್ತಿದ್ದಾರೆ. ನಟಿ ಮೇಘನಾ ರಾಜ್ ತಮ್ಮ ಕೆರಿಯರ್ ನಲ್ಲಿಯೇ ಈ ರೀತಿಯ ಪಾತ್ರವನ್ನು ಮಾಡಿಲ್ಲವಂತೆ. ಮೇಘನಾ ಇಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ತಿಲಕ್ ಹಾಗೂ ಶ್ರೀ ಮಹದೇವ್ ನಾಯಕರಾಗಿದ್ದಾರೆ.

ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಎಲ್ಲ ಹಾಡುಗಳು ಹಿಟ್ ಆಗಿವೆ.


Click it and Unblock the Notifications











