For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ

  By Pavithra
  |
  D-Bossಗೆ ಸವಾಲು ಹಾಕಿದ ಸ್ಟಾರ್ ಯಾರು ? | FIlmibeat Kannada

  'ಹಮ್ ಫಿಟ್ ತೊ ಇಂಡಿಯಾ ಫಿಟ್' ಅಭಿಯಾನಕ್ಕೆ ಕನ್ನಡ ಸಿನಿಮಾರಂಗದಿಂದ ಭರ್ಜರಿ ಸಹಕಾರ ವ್ಯಕ್ತವಾಗಿದೆ. ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ , ರಾಧಿಕಾ ಚೇತನ್ , ಪವನ್ ಕುಮಾರ್, ಸಂಯುಕ್ತ ಹೊರನಾಡು, ಹರ್ಷಿಕಾ ಪೂಣಚ್ಚ ಹೀಗೆ ಸಾಕಷ್ಟು ಕಲಾವಿದರು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಹಲವರಿಗೆ ಸ್ಫೂರ್ತಿ ಆಗಿದ್ದಾರೆ.

  ಸುದೀಪ್, ಯಶ್ ಅವರಿಗೆ ಚಾಲೆಂಜ್ ಹಾಕಿದ್ರೆ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಹಾಗೂ ಶ್ರೀ ಮುರಳಿ ಅವರಿಗೆ ಚಾಲೆಂಜ್ ಸ್ವೀಕರಿಸುವಂತೆ ತಿಳಿಸಿದ್ದರು. ಸದ್ಯ ಶ್ರೀ ಮುರಳಿ ಪವರ್ ಸ್ಟಾರ್ ಹಾಕಿದ್ದ ಚಾಲೆಂಜ್ ನಲ್ಲಿ ಗೆದ್ದು ದರ್ಶನ್ ಅವರಿಗೆ ಹಮ್ ಫಿಟ್ ತೊ ಇಂಡಿಯಾ ಫಿಟ್ ಚಾಲೆಂಜ್ ಹಾಕಿದ್ದಾರೆ.

  ಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್ ಗೆ ಅಭಿಮಾನಿಗಳು ಫಿದಾಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್ ಗೆ ಅಭಿಮಾನಿಗಳು ಫಿದಾ

  ಶ್ರೀ ಮುರಳಿ ಹಾಕಿರುವ ಚಾಲೆಂಜ್ ಅನ್ನು ದರ್ಶನ್ ಸ್ವೀಕರಿಸುತ್ತಾರಾ? ಎನ್ನುವುದು ಈಗ ಅಭಿಮಾನಿಗಳ ತಲೆಯಲ್ಲಿ ಕಾಡುತ್ತಿರುವ ಪ್ರಶ್ನೆ. ದರ್ಶನ್ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುವುದರಿಂದ ಅಭಿಮಾನಿಗಳಿಗೆ ತುಂಬಾ ಖುಷಿ ಆಗಲಿದೆ. ಅದಕ್ಕೆ ಕಾರಣವೂ ಇದೆ. ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

  ಪವರ್ ಸ್ಟಾರ್ ಚಾಲೆಂಜ್ ಗೆದ್ದ ರೋರಿಂಗ್ ಸ್ಟಾರ್

  ಪವರ್ ಸ್ಟಾರ್ ಚಾಲೆಂಜ್ ಗೆದ್ದ ರೋರಿಂಗ್ ಸ್ಟಾರ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಕಿದ್ದ ಚಾಲೆಂಜ್ ಅನ್ನು ನಟ ಶ್ರೀ ಮುರಳಿ ಸ್ವೀಕರಿಸಿದ್ದಾರೆ. ಜಿಮ್ ನಲ್ಲಿ ಭರ್ಜರಿ ಸ್ಟಂಟ್ಸ್ ಮಾಡುವ ಮೂಲಕ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

  ದರ್ಶನ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ

  ದರ್ಶನ್ ಗೆ ಚಾಲೆಂಜ್ ಹಾಕಿದ ಶ್ರೀ ಮುರಳಿ

  ನಟ ಶ್ರೀ ಮುರಳಿ ಫಿಟ್ನೆನ್ಸ್ ಚಾಲೆಂಜ್ ಸ್ವೀಕರಿಸಿದ ನಂತರ ನಟ ದರ್ಶನ್ ಅವರಿಗೆ ಚಾಲೆಂಜ್ ಕ್ಲಿಯರ್ ಮಾಡಿ ಎಂದಿದ್ದಾರೆ. ಅವರ ಜೊತೆಯಲ್ಲಿ ಗಣೇಶ್, ಪ್ರಜ್ವಲ್ ಕೂಡ ಇದ್ದಾರೆ.

  ದರ್ಶನ್ ವರ್ಕ್ ಔಟ್ ನೋಡುವ ಅವಕಾಶ

  ದರ್ಶನ್ ವರ್ಕ್ ಔಟ್ ನೋಡುವ ಅವಕಾಶ

  ದರ್ಶನ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದನ್ನ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಇಲ್ಲಿಯವರೆಗೂ ಸಿಕ್ಕಿಲ್ಲ. ಆದ್ದರಿಂದ ದರ್ಶನ್ ಏನಾದರೂ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಚಾಲೆಂಜ್ ಸ್ವೀಕರಿಸಿದರೇ ಫ್ಯಾನ್ಸ್ ಗೆ ಡಿ ಬಾಸ್ ವರ್ಕ್ ಔಟ್ ನೋಡುವ ಚಾನ್ಸ್ ಸಿಗುತ್ತೆ.

  ಚಾಲೆಂಜ್ ಸ್ವೀಕರಿಸಬೇಕಿರುವ ಸ್ಟಾರ್ ಗಳು

  ರಕ್ಷಿತ್ ಶೆಟ್ಟಿ, ಡಾನಿಶ್ ಸೇಠ್, ಪ್ರಜ್ವಲ್ ದೇವರಾಜ್, ಗಣೇಶ್, ಶೃತಿ ಹರಿಹರನ್ ಇನ್ನು ಅನೇಕರಿಗೆ ನಮ್ಮ ಕಲಾವಿದರೇ 'ಹಮ್ ಫಿಟ್ ತೊ ಇಂಡಿಯಾ ಫಿಟ್' ಚಾಲೆಂಜ್ ಹಾಕಿದ್ದು ಇವರೆಲ್ಲರೂ ಮುಂದಿನ ದಿನಗಳಲ್ಲಿ ತಮ್ಮ ಫಿಟ್ನೆನ್ಸ್ ಗುಟ್ಟು ಬಿಟ್ಟುಕೊಡಲಿದ್ದಾರೆ.

  English summary
  Kannada actor Sri Murali has received the Hum Fit To India Fit Challenge. Sri Murali has challenged Prajwal Devraj, Darshan and Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X