ಮತ್ತೊಂದು ಮಾಸ್ ಟೈಟಲ್ ಜೊತೆ ಬಂದ ರೋರಿಂಗ್ ಸ್ಟಾರ್

By Pavithra

Recommended Video

ಸಖತ್ ಆಗಿದೆ ಶ್ರೀ ಮುರಳಿ ಹೊಸ ಸಿನಿಮಾ ಟೈಟಲ್..!! | Filmibeat Kannada

'ರಥಾವರ', 'ಮಫ್ತಿ' ಸಿನಿಮಾದ ನಂತರ ಶ್ರೀ ಮುರಳಿ ಯಾವ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಅದಕ್ಕೆ ತಕ್ಕಂತೆ ಬಹದ್ದೂರ್ ಚೇತನ್ ಹಾಗೂ ಶ್ರೀ ಮುರಳಿ ಕಾಂಬಿನೇಶನ್ ನಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ರೋರಿಂಗ್ ಸ್ಟಾರ್ ಅನೌನ್ಸ್ ಮಾಡಿದ್ರು.

ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಈ ಬಾರಿ ಶ್ರೀ ಮುರಳಿ ಫ್ಯಾಮಿಲಿ ಎಂಟರ್‌ಟ್ರೈನ್ಮೆಂಟ್ ವಿತ್ ಕಮರ್ಷಿಯಲ್ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸಕ್ಸಸ್ ಫುಲ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್ ಕುಮಾರ್ ಮುರಳಿ ಅವರಿಗಾಗಿ ಉತ್ತಮವಾದ ಕಥೆ ಮಾಡಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ಇಷ್ಟೆಲ್ಲಾ ಮಾಹಿತಿ ನೀಡಿದ ಚಿತ್ರತಂಡ ಟೈಟಲ್ ಮಾತ್ರ ಸೀಕ್ರೆಟ್ ಆಗಿ ಇಟ್ಟಿತ್ತು. ಇಂದು ಚಿತ್ರದ ಶೀರ್ಷಿಕೆಯನ್ನು ರಿವಿಲ್ ಮಾಡಿದ್ದು ವಿಶೇಷವಾಗಿ ಸ್ಪೆಷಲ್ ಆಗಿರೋ ಗೆಸ್ಟ್ ಗಳ ಜೊತೆ ಸೇರಿ ಟೈಟಲ್ ಅನೌನ್ಸ್ ಮಾಡಿದ್ದಾರೆ ಶ್ರೀ ಮುರಳಿ. ಹಾಗಾದ್ರೆ ಟೈಟಲ್ ಏನು? ಚಿತ್ರೀಕರಣ ಯಾವಾಗಿನಿಂದ ಶುರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಭರಾಟೆ ಶ್ರೀ ಮುರಳಿ ಹೊಸ ಸಿನಿಮಾ

ಭರಾಟೆ ಶ್ರೀ ಮುರಳಿ ಹೊಸ ಸಿನಿಮಾ

ನಟ ಶ್ರೀ ಮುರಳಿ ಅಭಿನಯದ ಹೊಸ ಚಿತ್ರದ ಟೈಟಲ್ ರಿವಿಲ್ ಆಗಿದೆ. 'ಭರಾಟೆ' ಅಂತ ಸಿನಿಮಾ ಶೀರ್ಷಿಕೆ ಫೈನಲ್ ಆಗಿದ್ದು ರೋರಿಂಗ್ ಸ್ಟಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಈ ವಿಚಾರ ತಿಳಿಸಿದ್ದಾರೆ. ಮಕ್ಕಳ ಜೊತೆಯಲ್ಲಿ ಸೇರಿ ಟೈಟಲ್ ಅನೌನ್ಸ್ ಮಾಡಿದ್ದು ವಿಶೇಷ.

ಮತ್ತೆ 'ಭ' ಅಕ್ಷರದಲ್ಲೇ ಚೇತನ್ ಸಿನಿಮಾ

ಮತ್ತೆ 'ಭ' ಅಕ್ಷರದಲ್ಲೇ ಚೇತನ್ ಸಿನಿಮಾ

ನಿರ್ದೇಶಕ ಚೇತನ್ ಕುಮಾರ್ ಹಾಗೂ ಶ್ರೀ ಮುರಳಿ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು ಈಗಾಗಲೇ 'ಬಹದ್ದೂರ್', 'ಭರ್ಜರಿ' ಸಕ್ಸಸ್ ಖುಷಿಯಲ್ಲಿರುವ ಚೇತನ್ ಡೈರೆಕ್ಟ್ ಮಾಡುತ್ತಿರುವ ಮೂರನೆ ಸಿನಿಮಾನೂ 'ಭ' ಅಕ್ಷರದಿಂದಲೇ ಶುರುವಾಗುತ್ತಿದೆ.

ಚಿತ್ರಕ್ಕೆ ಶ್ರೀಲೀಲಾ ನಾಯಕಿ

ಚಿತ್ರಕ್ಕೆ ಶ್ರೀಲೀಲಾ ನಾಯಕಿ

'ಭರಾಟೆ' ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶ್ರೀ ಮುರಳಿ ಜೊತೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 'ಕಿಸ್' ಚಿತ್ರದಲ್ಲಿ ಶ್ರೀ ಲೀಲಾ ನಾಯಕಿಯಾಗಿ ಅಭಿನಯ ಮಾಡಿದ್ದು' ಭರಾಟೆ' ಶ್ರೀಲೀಲಾ ಆಕ್ಟ್ ಮಾಡುತ್ತಿರುವ ಎರಡನೇ ಸಿನಿಮಾ.

ಅದ್ಧೂರಿ ತಾರಾಬಳಗ -ಉತ್ತಮ ತಂತ್ರಜ್ಞರು

ಅದ್ಧೂರಿ ತಾರಾಬಳಗ -ಉತ್ತಮ ತಂತ್ರಜ್ಞರು

'ಭರಾಟೆ' ಸಿನಿಮಾವನ್ನು ಶ್ರೀಮುರಳಿ ಅವರ ಸ್ನೇಹಿತರಾದ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದ್ದು ಭುವನ್ ಗೌಡ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಜುಲೈ 25ರಂದು ಭರಾಟೆ ಸಿನಿಮಾ ಮುಹೂರ್ತ ನಡೆಯಲಿದೆ.

More from Filmibeat

English summary
Kannada actor Sri Murali is the next movie title Bharaate. Bharate Cinema is directed by Chetan Kumar. Sreeleela is acting as a heroine in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X