twitter
    For Quick Alerts
    ALLOW NOTIFICATIONS  
    For Daily Alerts

    'ಮದಗಜ' ಬಿಡುಗಡೆಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್: ಎಲ್ಲೆಲ್ಲಿ ಯಾವ್ಯಾವ ಶೋ ಫುಲ್?

    |

    ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಇಂದು(ಡಿಸೆಂಬರ್ 03) ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಆ್ಯಕ್ಷನ್ ಸೆಂಟಿಮೆಂಟ್ ಹೊಂದಿರುವ ಮಾಸ್ ಸಿನಿಮಾ 'ಮದಗಜ' ನೋಡಲು ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. 25 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸುಮಾರು ಕರ್ನಾಟಕದಲ್ಲಿಯೇ ಸುಮಾರು 800 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಈಗಾಗಲೇ ಹಲವೆಡೆ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

    'ಮದಗಜ' ಸ್ಯಾಂಡಲ್‌ವುಡ್‌ನ ಲಕ್ಕಿ ತಿಂಗಳು ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿರುವ ಬಿಗ್ ಬಜೆಟ್ ಸಿನಿಮಾ. ಬಿಡುಗಡೆಗೂ ಮುನ್ನವೇ 'ಮದಗಜ' ದೊಡ್ಡ ಮಟ್ಟದಲ್ಲಿಯೇ ವ್ಯಾಪಾರ ಮಾಡಿದೆ. ಡಬ್ಬಿಂಗ್, ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. ಥಿಯೇಟರ್‌ನಲ್ಲೂ 'ಮದಗಜ' ಶ್ರೀಮುರಳಿಗೆ ಅದ್ಧೂರಿ ಸ್ವಾಗತ ಕೋರಲು ಅಭಿಮಾನಿಗಳು ರೆಡಿಯಾಗಿದ್ದಾರೆ. ಈ ಮಧ್ಯೆ ಹಲವೆಡೆ ಫಸ್ಟ್ ಡೇ ಫಸ್ಟ್ ಶೋ ಫುಲ್ ಆಗಿದೆ. ಆ ಸಿನಿಮಾ ಮಂದಿರಗಳ ಲಿಸ್ಟ್ ಇಲ್ಲಿದೆ.

    ರಾಜ್ಯದ 186 ಥಿಯೇಟರ್‌ಗಳಲ್ಲಿ 'ಮದಗಜ' ಸೋಲ್ಡ್ ಔಟ್

    ರಾಜ್ಯದ 186 ಥಿಯೇಟರ್‌ಗಳಲ್ಲಿ 'ಮದಗಜ' ಸೋಲ್ಡ್ ಔಟ್

    ಎಸ್. ಮಹೇಶ್ ಕುಮಾರ್ ನಿರ್ದೇಶನದ ಔಟ್ ಅಂಡ್ ಔಟ್ ಆ್ಯಕ್ಷನ್ ಆಕ್ಷನ್, ಸೆಂಟಿಮೆಂಟ್ ಸಿನಿಮಾ 'ಮದಗಜ'. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಕಾಂಬಿನೇಷನ್‌ನ ಈ ಸಿನಿಮಾ ರಾಜ್ಯದ 186 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಟಿಕೆಟ್ ಮುಂಗಡವಾಗಿ ಬಿಕರಿಯಾಗಿವೆ. ಫಸ್ಟ್ ಶೋ ಹಾಗೂ ಮ್ಯಾಟನಿ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಧಾರವಾಡದ ಪದ್ಮ ಟಾಕೀಸ್, ಶಿವಮೊಗ್ಗ ಭರತ್ ಸಿನಿಮಾದ ಎಲ್ಲಾ ಶೋಗಳು ಫುಲ್ ಆಗಿವೆ. ಗದಗದ ಮಹಾಲಕ್ಷ್ಮಿ ಥಿಯೇಟರ್ ಮೊದಲ ಮೂರು ಶೋ ಫುಲ್. ರಾಣೆಬೆನ್ನೂರು ಶಂಕರ್ ಟಾಕೀಸ್ ಎಲ್ಲಾ ಶೋಗಳು ಸೋಲ್ಡ್ ಔಟ್ ಆಗಿವೆ.

    ಬೆಂಗಳೂರಿನ ಚಿತ್ರಮಂದಿರಗಳೂ ಫುಲ್

    ಬೆಂಗಳೂರಿನ ಚಿತ್ರಮಂದಿರಗಳೂ ಫುಲ್

    ಟೈಟಲ್‌ನಿಂದಲೇ ಮಾಸ್ ಪ್ರೇಕ್ಷಕರಲ್ಲಿ ಕ್ರೇಜ್ ಹುಟ್ಟು ಹಾಕಿದ ಸಿನಿಮಾ 'ಮದಗಜ'ನ ಹವಾ ರಾಜಧಾನಿ ಬೆಂಗಳೂರಿನಲ್ಲೂ ಜೋರಾಗಿದೆ. ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಹಿಟ್ ಆದ್ಮೇಲಂತೂ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಶ್ರೀಮುರಳಿ ಆ್ಯಕ್ಷನ್ ಖದರ್‌, ಅದ್ಧೂರಿ ಮೇಕಿಂಗ್‌ಗೆ 'ಮದಗಜ' ಸೌಂಡ್ ಮಾಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲೂ ಸಿನಿಮಾ ನೋಡುವುದಕ್ಕೆ ಜನರು ಕಾತುರರಾಗಿದ್ದಾರೆ. ನವರಂಗ್ ಚಿತ್ರಮಂದಿರದ ಎರಡು ಶೋ ಫುಲ್ ಆಗಿದೆ. ಪ್ರಸನ್ನ ಥಿಯೇಟರ್‌ನಲ್ಲಿ ಮೊದಲ ಮೂರು ಶೋ ಫುಲ್. ಓಲ್ಡ್ ಮದ್ರಾಸ್ ರಸ್ತೆಯ ಪಿವಿಆರ್ ಮೊದಲ ಶೋ ಫುಲ್. ವೆಗಾ ಸಿಟಿ ಪಿವಿಆರ್, ಜಿಟಿ ವರ್ಲ್ಡ್ ಪಿವಿಆರ್ ಈ ಎಲ್ಲಾ ಕಡೆಯಲ್ಲೂ ಮೊದಲ ಶೋ ಟಿಕೆಟ್‌ಗಳು ಮಾರಾಟ ಆಗಿವೆ.

    ಥಿಯೇಟರ್ ಮುಂದೆ ಎದ್ದು ನಿಂತಿವೆ ಕಟೌಟ್

    ಥಿಯೇಟರ್ ಮುಂದೆ ಎದ್ದು ನಿಂತಿವೆ ಕಟೌಟ್

    ರಾಜ್ಯದ 800ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ 'ಮದಗಜ'ನ ಸಂಭ್ರಮ ಜೋರಾಗಿದೆ. ಆ್ಯಕ್ಷನ್, ರೊಮ್ಯಾನ್ಸ್, ಮದರ್ ಸೆಂಟಿಮೆಂಟ್, ಮಾಸ್ ಡೈಲಾಗ್ಸ್ ಹೀಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳ ಮಹಾಪೂರವೇ ಅಭಿಮಾನಿಗಳಲ್ಲಿದೆ. ಹೀಗಾಗಿ ಎಲ್ಲೆಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆಯೋ ಅಲ್ಲೆಲ್ಲಾ ಥಿಯೇಟರ್‌ಗಳು ಸಿಂಗಾರಗೊಂಡಿವೆ. ಚಿತ್ರಮಂದಿರದ ಮುಂದೆ ಕಟೌಟ್ ಎದ್ದು ನಿಂತಿವೆ.

    ಕೆಜಿಎಫ್ ಚಂದ್ರಮೌಳಿ ಡೈಲಾಗ್: ರವಿಬಸ್ರೂರ್ ಮ್ಯೂಸಿಕ್

    ಕೆಜಿಎಫ್ ಚಂದ್ರಮೌಳಿ ಡೈಲಾಗ್: ರವಿಬಸ್ರೂರ್ ಮ್ಯೂಸಿಕ್

    ಮಹೇಶ್ ಕುಮಾರ್ ಮಾಸ್ ಕಥೆಗೆ ಕೆಜಿಎಫ್ ಖ್ಯಾತಿಯ ಬರಹಗಾರ ಚಂದ್ರಮೌಳಿ ಮಾಸ್ ಡೈಲಾಗ್ ಸೇರಿಕೊಂಡಿದೆ. ಈಗಾಗಲೇ ಟ್ರೈಲರ್‌ನಲ್ಲಿ ಡೈಲಾಗ್ ಅಬ್ಬರ ಹೇಗಿರುತ್ತೆ ಅನ್ನುವುದ ಝಲಕ್ ಕೂಡ ಸಿಕ್ಕಿದೆ. ಇದರೊಂದಿಗೆ ರವಿಬಸ್ರೂರ್ ಮ್ಯೂಸಿಕ್ ಹಾಗೂ ಹಿನ್ನೆಲೆ ಸಂಗೀತ ಸಿನಿಪ್ರಿಯರಿಗೆ ಕಿಕ್ ಕೊಡಲಿದೆ. ಇನ್ನು ಹಳ್ಳಿ ಹುಡುಗಿಯಾಗಿ ಆಶಿಕಾ ರಂಗನಾಥ್, ಖಳನಾಯಕರಾಗಿ ಜಗಪತಿ ಬಾಬು, ಕೆಜಿಎಫ್ ಗರುಡ ರಾಮ್, ಶ್ರೀಮುರಳಿ ಎದುರು ಅಬ್ಬರಿಸಲಿದ್ದಾರೆ.

    English summary
    Roaring Star Sri Murali Movie Madagaja releasing on december 03. All Over Karnataka more than 186 theater first day shows sold out.
    Friday, December 3, 2021, 9:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X