For Quick Alerts
  ALLOW NOTIFICATIONS  
  For Daily Alerts

  ಆಡೋ ಮಾತ್ಮೇಲೆ ಜವಾಬ್ದಾರಿ ಇರಬೇಕು: ಶ್ರೀಮುರಳಿ ಹೇಳಿದ್ದು ಯಾರಿಗೆ?

  |

  'ಭರಾಟೆ' ಚಿತ್ರದಲ್ಲಿ ಬ್ಯುಸಿಯಾಗಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅದರ ಹಿಂದೆಯೇ 'ಮದಗಜ' ಚಿತ್ರವನ್ನ ಶುರು ಮಾಡಲಿದ್ದಾರೆ. ಮಫ್ತಿ ಸೂಪರ್ ಹಿಟ್ ಆದ ಬೆನ್ನಲ್ಲೆ ಶ್ರೀಮುರಳಿ ಮುಂದಿನ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.

  'ಭರ್ಜರಿ' ಚಿತ್ರದ ನಿರ್ದೇಶಕ ಚೇತನ್ ಕುಮಾರ್ 'ಭರಾಟೆ'ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಮೇಕಿಂಗ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

  ಇದೀಗ, ಶ್ರೀಮುರಳಿ ತಮ್ಮ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಶ್ರೀಮುರಳಿ ಅವರು ಯಾವುದೇ ಕಾಂಟ್ರುವರ್ಸಿ ಮಾಡಿಕೊಂಡಿಲ್ಲ. ಯಾವ ವಿವಾದಕ್ಕೂ ತಲೆಕೆಡಿಸಿಕೊಳ್ಳಲ್ಲ. ಯಾರ ವ್ಯಕ್ತಿತ್ವಕ್ಕೂ ಧಕ್ಕೆ ಆಗುವಂತೆ ಮಾತನಾಡಲ್ಲ. ಆದ್ರೆ, ರೋರಿಂಗ್ ಸ್ಟಾರ್ ಬರೆದಿರುವ ಸಾಲುಗಳು ಚರ್ಚೆಗೆ ಕಾರಣವಾಗಿದೆ.

  ಪತಿಯ ಶ್ರಮ ಕಂಡು ಮತ್ತೆ ಪ್ರೀತಿಯಲ್ಲಿ ಬಿದ್ದ ವಿದ್ಯಾ ಶ್ರೀ ಮುರಳಿ

  ''ಆಡೋ ಮಾತ್ಮೇಲೆ ಜವಾಬ್ದಾರಿ ಇರಬೇಕು. ಕೊಟ್ಟ ಮೇಲೆ ಮಾತನ್ನ ಉಳಿಸಿಕೊಳ್ಳಬೇಕು ಅಲ್ವಾ?'' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಹಾಗೆ ಸುಮ್ಮನೆ ಹೇಳಿದ್ದು (#HaagehSumneBardhe #HSB) ಹ್ಯಾಷ್ ಟ್ಯಾಗ್ ಬಳಸಿ Tc all ಎಂದಿದ್ದಾರೆ.

  ಇನ್ನು ನಾಳೆಯಿಂದ ಭರಾಟೆ ಶೂಟಿಂಗ್ ಹೆಚ್ಚಿದೆ ಎಂದು ಅದೇ ಸ್ಟೇಟಸ್ ನಲ್ಲಿ ತಿಳಿಸಿದ್ದಾರೆ. ಅಂದ್ಹಾಗೆ, ಈ ಸ್ಟೇಟಸ್ ನಲ್ಲಿ ಅಂತಹ ವಿಶೇಷವೇನು ಇಲ್ಲ. ಬಹುಶಃ ಇದನ್ನ ಗಮನಿಸಿದ್ರೆ, ಇದು ಭರಾಟೆ ಚಿತ್ರದ ಡೈಲಾಗ್ ಇರಬಹುದು ಅನಿಸುತ್ತಿದೆ.

  English summary
  Kannada actor Sri murali has posts interesting status in facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X