ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಸಿಕ್ತು ಸ್ವೀಟ್ ನ್ಯೂಸ್
ವರ್ಷದ 6 ತಿಂಗಳು ಕಳೆದರೂ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಗೆ ಇನ್ನು ಮೀನಾಮೇಷ ಎಣಿಸುತ್ತಿದ್ದಾರೆ. 'ಮಾರ್ಟಿನ್', 'ಭೀಮ' ಚಿತ್ರಗಳು ಯಾವಾಗ ಬರುತ್ತದೆ ಎನ್ನುವುದು ಮಾತ್ರ ಖಚಿತವಾಗಿದೆ.
'ಯುಐ', 'ಬೈರತಿ ರಣಗಲ್' ಹಾಗೂ 'ಮ್ಯಾಕ್ಸ್' ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ. ಈ ಐದು ಸಿನಿಮಾಗಳ ಜೊತೆಗೆ ಈ ವರ್ಷ ಮತ್ತೊಂದಷ್ಟು ಸಿನಿಮಾಗಳು ಕುತೂಹಲ ಮೂಡಿಸಿವೆ. ಈ ಪಟ್ಟಿಯಲ್ಲಿ 'ಉತ್ತರಕಾಂಡ', 'ಪೆಪೆ', 'ಬಘೀರ' ಸಿನಿಮಾಗಳೂ ಇವೆ. ಬಹಳ ಹಿಂದೆ ಶುರುವಾದ 'ಬಘೀರ' ಸಿನಿಮಾ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಡಾ. ಸೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತಯಾರಾಗುತ್ತಿದೆ. ಅದ್ಧೂರಿ ಮೇಕಿಂಗ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಂದಿದ್ದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಹ ಸ್ಟಂಟ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರಕ್ಕೆ ಪ್ರಶಾಂತ್ ನೀಲ್ ಸಂಭಾಷಣೆ ಬರೆದಿರುವುದು ವಿಶೇಷ.
'ಉಗ್ರಂ', 'KGF', 'ಸಲಾರ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟ ಪ್ರಶಾಂತ್ ನೀಲ್ 'ಬಘೀರ' ಚಿತ್ರಕ್ಕೆ ಕಥೆ ಬರೆದಿದ್ದಾರೆ ಎನ್ನುವುದೇ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಅಬ್ಬರಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಮುಸುಕುಧಾರಿ ನಾಯಕನ ಹೋರಾಟವೇ ಚಿತ್ರದ ಕಥೆ ಎನ್ನುವುದು ಗೊತ್ತಾಗುತ್ತಿದೆ. ಈ ಹಿಂದೆ 'ಮಫ್ತಿ' ಚಿತ್ರದಲ್ಲಿ ಮುರಳಿ ಖಾಕಿ ತೊಟ್ಟಿದ್ದರು.
'ಬಘೀರ' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಆರಂಭಿಸಲಾಗಿದೆ. ಈ ವರ್ಷವೇ ಸಿನಿಮಾ ತೆರೆಗೆ ತರಲು ಪ್ರಯತ್ನ ನಡೀತಿದೆ. ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಕಾಶ್ ರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಎ. ಜೆ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಎಪಿಡೋಡ್‌ಗಳಿವೆ. ರೋರಿಂಗ್ ಸ್ಟಾರ್ ಬಹಳ ರಿಸ್ಕಿ ಸ್ಟಂಟ್ಸ್ ಟ್ರೈ ಮಾಡಿದ್ದಾರೆ. ಇದೇ ಕಾರಣಕ್ಕೆ ಚಿತ್ರೀಕರಣದ ವೇಳೆ ಶ್ರೀ ಮುರಳಿ ಪದೇ ಪದೆ ಗಾಯಗೊಂಡಿದ್ದರು. ಚಿಕಿತ್ಸೆ ಪಡೆದು ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಂತೂ ಇಂತೂ ಸಿನಿಮಾ ಮುಗಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಡಾ. ಸೂರಿ ಈ ಹಿಂದೆ ಯಶ್ ನಟನೆಯ 'ಲಕ್ಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಆ ಬಳಿಕ ಬಹಳ ಗ್ಯಾಪ್ ನಂತರ ಇದೀಗ 'ಬಘೀರ'ನನ್ನು ಕರೆದುಕೊಂಡು ಬರ್ತಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ರೋರಿಂಗ್ ಸ್ಟಾರ್ ಲುಕ್ಕು, ಟೀಸರ್ ಗಮನ ಸೆಳೆದಿದೆ. ಅಕ್ಟೋಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಚಾಲ್ತಿಯಲ್ಲಿದೆ.
'ಬಘೀರ' ಬಳಿಕ 'ಪರಾಕ್' ಎನ್ನುವ ಚಿತ್ರಕ್ಕೆ ಶ್ರೀಮುರಳಿ ಬಣ್ಣ ಹಚ್ಚಲಿದ್ದಾರೆ. ಹಾಲೇಶ್ ಕೊಗುಡಿ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಆದರೆ ಮುಂದಿನ ಸಿನಿಮಾ ಚಿತ್ರೀಕರಣ ಶುರು ಮಾಡುವ ಮುನ್ನ ಕೊಂಚ ವಿಶ್ರಾಂತಿ ಪಡೆಯಲು ರೋರಿಂಗ್ ಸ್ಟಾರ್ ನಿರ್ಧರಿಸಿದ್ದಾರೆ.


Click it and Unblock the Notifications











