twitter
    For Quick Alerts
    ALLOW NOTIFICATIONS  
    For Daily Alerts

    'ನೋ ಕಟ್.. ನೋ ಮ್ಯೂಟ್' 'ಮದಗಜ' ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು?

    |

    ಸ್ಯಾಂಡಲ್‌ವುಡ್‌ನಲ್ಲಿ 'ಮದಗಜ' ಹವಾ ಜೋರಾಗಿದೆ. ಡಿಸೆಂಬರ್ 03ಕ್ಕೆ ದೇಶಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಜ್ಜಾಗಿ ನಿಂತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಮಾಸ್ ಖದರ್. ಆಶಿಕಾ ರಂಗನಾಥ್ ಕ್ಲಾಸ್ ಲುಕ್, ದುಬಾರಿ ಮೇಕಿಂಗ್, ಇವೆಲ್ಲವನ್ನೂ ಒಂದೇ ಒಂದು ಟ್ರೈಲರ್ ತೋರಿಸಿಕೊಟ್ಟಿದೆ. ಮೂರು ಭಾಷೆಗಳಲ್ಲಿ ರಿಲೀಸ್ ರೆಡಿಯಾಗಿರುವ ಸಿನಿಮಾವನ್ನು ನವೆಂಬರ್ 27ರಂದು ಸೆನ್ಸಾರ್ ಬೋರ್ಡ್ ಅಧಿಕಾರಿಗಳು ವೀಕ್ಷಿಸಿದ್ದಾರೆ.

    ಫಸ್ಟ್ ಲುಕ್‌ನಿಂದ ಮದಗಜನ ಯಾತ್ರೆ ಶುರುವಾಗಿತ್ತು. ಬಳಿಕ ಒಂದು ಮೆಲೋಡಿ ಹಾಡನ್ನು ಗಮನ ಸೆಳೆದಿತ್ತು. ಈಗ ಸಿನಿಮಾದ ಹೆಸರಿಗೆ ತಕ್ಕಂತೆ ಪವರ್‌ಫುಲ್ ಟ್ರೈಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಇದೊಂದು ಮಾಸ್ ಸ್ಟೋರಿ ಅನ್ನುವು ಟ್ರೈಲರ್ ಹೇಳಿದೆ. ಆದರೆ, ಇಡೀ ಸಿನಿಮಾ ಹೇಗಿದೆ? ಹಿಂಸಿಸುವ ದೃಶ್ಯಗಳೇ ಹೆಚ್ಚಿವೆಯೇ? ಅನ್ನುವ ಅನುಮಾನಗಳಿಗೆ ಸೆನ್ಸಾರ್ ಸರ್ಟಿಫಿಕೇಟ್ ಮುಖ್ಯ ಆಗುತ್ತೆ. ಇಂದು ಸಿನಿಮಾ ವೀಕ್ಷಿಸಿದ ಅಧಿಕಾರಿಗಳು 'ಮದಗಜ' ಚಿತ್ರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

    ಮದಗಜ ಚಿತ್ರಕ್ಕೆ U/A ಸರ್ಟಿಫಿಕೇಟ್

    ಮದಗಜ ಚಿತ್ರಕ್ಕೆ U/A ಸರ್ಟಿಫಿಕೇಟ್

    ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಸಿನಿಮಾ 'ಮದಗಜ' ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ. ಹೀಗಾಗಿ ಬಿಡುಗಡೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ಸಿನಿಮಾವನ್ನು ಸೆನ್ಸಾರ್ ಬೋರ್ಡ್ ವೀಕ್ಷಿಸಿದೆ. ಇದೊಂದು ಮಾಸ್ ಎಂಟರ್‌ಟೈನರ್ ಆಗಿರುವುದರಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಸಿನಿಮಾ ನೋಡಿದ ಮೇಲೆ ಯಾವುದೇ ಕಟ್ ಕೊಟ್ಟಿಲ್ಲ. ಸಂಭಾಷಣೆಯನ್ನು ತೆಗೆಯುವಂತೆ ತಿಳಿಸಿಲ್ಲ. ಹೀಗಾಗಿ ಡಿಸೆಂಬರ್ 3ಕ್ಕೆ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುವುದು ಪಕ್ಕಾ ಆದಂತಾಗಿದೆ.

    'ಮದಗಜ' ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು?

    'ಮದಗಜ' ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು?

    ನವೆಂಬರ್ 27ರಂದು ಸೆನ್ಸಾರ್ ಬೋರ್ಡ್ ಸಿನಿಮಾ ನೋಡಿದೆ. 'ಮದಗಜ' ಚಿತ್ರ ಚೆನ್ನಾಗಿದೆ ಎಂದು ಸೆನ್ಸಾರ್ ಅಧಿಕಾರಿಗಳು ಹೇಳಿದ್ದಾರೆ. ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. ಸಂಭಾಷಣೆಯನ್ನು ತೆಗೆಯುವಂತೆಯು ಸೂಚಿಸಿಲ್ಲ. ಹೀಗಾಗಿ ಇದೊಂದು ನೀಟ್ ಸಿನಿಮಾ ಆಗಿದ್ದು, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಹಬ್ಬ." ಎಂದು ಮದಗಜ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.

    'ಮದಗಜ' 25 ಕೋಟಿ ಸಿನಿಮಾ

    'ಮದಗಜ' 25 ಕೋಟಿ ಸಿನಿಮಾ

    ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಸುಮಾರು 25 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರದಲ್ಲಿ ದಿಗ್ಗಜರ ದೊಡ್ಡ ತಂಡವೇ ಇದೆ. ಶ್ರೀಮುರಳಿ, ಆಶಿಕಾ ಹೊರತು ಪಡಿಸಿ, ಜಗಪತಿ ಬಾಬು, ಗರುಡಾ ರಾಮ್, ಚಿಕ್ಕಣ್ಣ, ಶಿವು ಕೆ.ಆರ್ ಪೇಟೆ, ಧರ್ಮಣ್ಣ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ.

    ಮದಗಜ ಬಾಕ್ಸಾಫೀಸ್ ಲೆಕ್ಕಾಚಾರವೇನು?

    ಮದಗಜ ಬಾಕ್ಸಾಫೀಸ್ ಲೆಕ್ಕಾಚಾರವೇನು?

    ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಕೇವಲ ಕರ್ನಾಟಕದಲ್ಲೇ ಸುಮಾರು 650 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಮೊದಲ ದಿನದ ಗಳಿಕೆನೇ 10 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆಲುಗು ಹಾಗೂ ತಮಿಳು ವರ್ಷನ್ ಮದಗಜ ಬಿಡುಗಡೆಯಾಗಲಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 'ಮದಗಜ' ಒಳ್ಳೆಯ ಗಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.

    English summary
    Roarig star Sri Murali's Madagaja got U/A censor certificate without cut and without mute. Ashika Ranganath is the lead actress.
    Monday, November 29, 2021, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X