ಮೈಸೂರಿನಲ್ಲಿ ಶ್ರೀಮರಳಿ-ಶ್ರೀಲೀಲಾ 'ಭರಾಟೆ' ಡ್ಯುಯೆಟ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಶ್ರೀಮುರಳಿ ಭರಾಟೆ ಜೋರಾಗಿದೆ. ಮೇಕಿಂಗ್ ಹಂತದಲ್ಲೇ ಸಿಕ್ಕಾಪಟ್ಟೆ ಸದ್ದುಮಾಡುತ್ತಿರುವ 'ಭರಾಟೆ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಮೈಸೂರಿನ ಸುಂದರ ತಾಣಗಳಲ್ಲಿ ಶ್ರೀಮರಳಿ ಮತ್ತು ಶ್ರೀಲೀಲಾ ಅವರ ಕೆಲವು ದೃಶಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಮತ್ತು ಅದ್ಧೂರಿ ಹಾಡಿನ ಚಿತ್ರೀಕರಣದ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆದಿತ್ತು ಭರಾಟೆ. ಸದ್ಯ ಮೈಸೂರಿನಲ್ಲಿ ಅದ್ಭುತ ಸೆಟ್ ಹಾಕಿ ಶ್ರೀಮುರುಳಿ ಮತ್ತು ಶ್ರೀಲೀಲಾ ಅವರ ಪ್ರಮುಖ ಭಾಗಗಳನ್ನು ಸೆರೆಹಿಯುತ್ತಿದೆ. ಈಗಾಗಲೆ 'ಭರಾಟೆ' ಟೀಂ ರಾಜಸ್ಥಾನ್, ಹೈದಾರಾಬಾದ್ ಮತ್ತು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ.

'ಮಫ್ತಿ' ಚಿತ್ರದ ನಂತರ ಶ್ರೀಮುರಳಿ 'ಭರಾಟೆ' ಮೂಲಕ ಅದ್ಧೂರಿ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಅಂದ್ಹಾಗೆ 'ಭರಾಟೆ' ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಟೀಸರ್, ಫಸ್ಟ್ ಲುಕ್, ಕಾಸ್ಟ್ಯೂಮ್ ಮತ್ತು ಮೇಕಿಂಗ್ ಮೂಲಕ ಸಿನಿರಸಿಕರ ಗಮನ ಸೆಳೆದಿರುವ 'ಭರಾಟೆ' ಚಿತ್ರದಲ್ಲಿ 10 ಜನ ಖಡಕ್ ಖಳನಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

sri murali starrer bharate movies shooting in mysuru

ವಿಶೇಷ ಅಂದ್ರೆ ಸಾಯಿ ಕುಮಾರ್ ಸಹೋದರರಾದ ರವಿಶಂಕರ್ ಮತ್ತು ಅಯ್ಯಪ್ಪ ಶರ್ಮ ಮೂವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಇನ್ನು ಟಾಲಿವುಡ್ ಸ್ಟಾರ್ ಜಗಪತಿ ಬಾಬು ಕೂಡ 'ಭಾರಟೆ' ಚಿತ್ರದ ಭಾಗವಾಗಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ಭರಾಟೆ' ಸಧ್ಯದಲ್ಲೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

More from Filmibeat

English summary
kannada actor Sri Murali starrer bharate movies shooting in mysuru. This movie is directed by chetan kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X