For Quick Alerts
  ALLOW NOTIFICATIONS  
  For Daily Alerts

  ಒಟಿಟಿ ಹಾಗೂ ಡಬ್ಬಿಂಗ್ ವಿಚಾರದಲ್ಲಿ ಶ್ರೀಮುರಳಿ ಖಡಕ್ ಮಾತು

  By ಹಾಸನ ಪ್ರತಿನಿಧಿ
  |

  ಕೊರೊನಾ ನಂತರ ನಿಧಾನಕ್ಕೆ ಒಂದೊಂದಾಗಿ ಸಿನಿಮಾಗಳು ತೆರೆಗೆ ಬರುತ್ತಿವೆ. ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲ ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳು ಸಹ ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿವೆ. ಈ ಸಮಯದಲ್ಲಿ ಮತ್ತೆ ಡಬ್ಬಿಂಗ್ ವಿವಾದ ತಲೆ ಎತ್ತಿದೆ.

  ಪರಭಾಷೆಯ ಬಿಗ್ ಬಜೆಟ್ ಡಬ್ಬಿಂಗ್ ಸಿನಿಮಾಗಳು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದ್ದು, ಇದರಿಂದ ಕನ್ನಡದ ಸಿನಿಮಾಗಳಿಗೆ ಸಮಸ್ಯೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂದು ಹಾಸನಕ್ಕೆ ಭೇಟಿ ನೀಡಿದ್ದ ನಟ ಶ್ರೀಮುರಳಿ ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

  ''ಡಬ್ಬಿಂಗ್ ಯಾವತ್ತಿದ್ದರೂ ಅಪಾಯಕಾರಿಯೇ'' ಎಂದ ಶ್ರೀಮುರಳಿ, ''ನಮ್ಮ ಸಿನಿಮಾಗಳು ಚೆನ್ನಾಗಿರಬೇಕು. ನಮ್ಮ ಅಡುಗೆ ಚೆನ್ನಾಗಿದ್ದರೆ ನಾವು ಬೇರೆಯವರದ ಬಗ್ಗೆ ತಲೆ ಕೆಡಿಸಿಕೊಳ್ಳವ ಅವಶ್ಯಕತೆ ಇಲ್ಲ. ನಾವು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ, ನಮ್ಮ ಅಭಿಮಾನಿಗಳನ್ನು ಉಳಿಸಿಕೊಂಡರೆ ಯಾವ ಡಬ್ಬಿಂಗ್ ಬಂದರೂ ಏನೂ ಪರಿಣಾಮ ಆಗುವುದಿಲ್ಲ'' ಎಂದರು ಶ್ರೀಮುರಳಿ.

  ''ಇಷ್ಟು ವರ್ಷ ಡಬ್ಬಿಂಗ್ ನಮ್ಮಲ್ಲಿ ಇರಲಿಲ್ಲ. ಆದರೆ ಇತ್ತೀಚೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅಂತಿಮವಾಗಿ ನಮ್ಮ ಅಭಿಮಾನಿಗಳು ಅದನ್ನು ಒಪ್ಪಬೇಕಲ್ಲ. ಅಭಿಮಾನಿಗಳು ಒಪ್ಪಿದರೆ ಮಾತ್ರವೇ ಯಾವುದೇ ಆಗಲಿ ಉಳಿಯಲು ಸಾಧ್ಯ'' ಎಂದರು ಶ್ರೀಮುರಳಿ.

  ಒಟಿಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶ್ರೀಮುರಳಿ, ''ಒಟಿಟಿ ಸಹ ಒಂದು ಡಿಜಿಟಲ್ ಫ್ಲಾಟ್‌ಫಾರ್ಮ್, ಒಟಿಟಿಯಲ್ಲಿ ಸಿನಿಮಾಗಳು ತಡವಾಗಿ ಬರಲು ತಯಾರಿ ಮಾಡ್ಕೋಬೇಕು, ಜನ ಥಿಯೇಟರ್‌ಗೆ ಬಂದು ಸಿನೆಮಾ ನೋಡಿದರೆ ನಮಗೆ ಖುಷಿ, ಹಾಗಾಗಿಯೇ ನಾವ್ಯಾರು ಸಿನಿಮಾವನ್ನು ಒಟಿಟಿಗಳಲ್ಲಿ ಬೇಗ ರಿಲೀಸ್ ಮಾಡ್ತಿಲ್ಲ. ಒಟಿಟಿಯಲ್ಲಿ ಯಾವಾಗ ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಚಿತ್ರರಂಗದ ಹಿರಿಯರು, ತಿಳಿದವರು ಬುದ್ದಿವಂತರು ಈ ಬಗ್ಗೆ ಏನಾದರೂ ಒಂದು ನಿರ್ಣಯ ಮಾಡಬೇಕು, ಅವರು ಏನೇ ಹೇಳಿದ್ರು ನಾವು ಅವರ ಜೊತೆ ನಿಲ್ಲುತ್ತೇವೆ. ಒಟಿಟಿಯಲ್ಲಿ ಬಿಡುಗಡೆ ಮಾಡಬೇಡಿ, ಬಿಡುಗಡೆ ಮಾಡಿ ಎಂದು ಹೇಳುವಷ್ಟು ದೊಡ್ಡವರು ನಾವಲ್ಲ. ನಾವೆಲ್ಲ ಈಗ ಬಂದವರು'' ಎಂದರು ಶ್ರೀಮುರಳಿ.

  ''ಆದರೆ ಚಿತ್ರಮಂದಿರಗಳ ಮಾಲೀಕರ ಪರವಾಗಿ, ಸಿನಿಮಾಗಳು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಬೇಕು ಎಂಬುವರ ಪರವಾಗಿ ನಾವು ಸದಾ ನಿಂತಿರುತ್ತೇವೆ'' ಎಂದ ಶ್ರೀಮುರಳಿ, ಸಿನಿಮಾಗಳು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಆಗಬೇಕು ಎಂಬ ತಮ್ಮ ನಿಲವನ್ನು ಸ್ಪಷ್ಟಪಡಿಸಿದರು.

  'ಮದಗಜ' ಸಿನಿಮಾದ ಬಗ್ಗೆ ಮಾತನಾಡಿದ ಅವರು, ''ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ಸಿನಿಮಾಕ್ಕೆ ಬಹಳ ಚೆನ್ನಾಗಿ ಪ್ರತಿಕ್ರಿಯೆ ಬರುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಹ ಬಂದು ಸಿನಿಮಾ ನೋಡುತ್ತಿದ್ದಾರೆ. ಒಳ್ಳೆಯ ಸಿನಿಮಾ ಮಾಡಿರುವ ಖುಷಿ ಇದೆ. ಅಭಿಮಾನಿಗಳು ಸಹ ಅಷ್ಟೆ ಖುಷಿಯಿಂದ ಸಿನಿಮಾವನ್ನು ಸ್ವೀಕಾರ ಮಾಡಿದ್ದಾರೆ. ರಾಜ್ಯದಾದ್ಯಂತ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ'' ಎಂದರು ಶ್ರೀಮುರಳಿ.

  ಶ್ರೀಮುರಳಿ ಇಂದು ಹಾಸನದ ಎಸ್.ಬಿ.ಜಿ. ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು 'ಮದಗಜ' ಸಿನಿಮಾದ ಡೈಲಾಗ್ ಹೇಳಿದ ಶ್ರೀಮುರಳಿ, ಅಭಿಮಾನಿಗಳೊಟ್ಟಿಗೆ ಸೆಲ್ಫಿ ತೆಗೆಸಿಕೊಂಡರು. ಸಿನಿಮಾಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಶ್ರೀಮುರಳಿ ಜೊತೆಗೆ 'ಮದಗಜ' ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್, ಖಳಪಾತ್ರಧಾರಿ ಗರುಡಾ ರಾಮ್ ಸಹ ಇದ್ದರು.

  English summary
  Actor Sri Murali talks about OTT release and dubbing movies. He said he is against direct release on OTT. He also said dubbing movies are dangerous to Kannada film industry.
  Tuesday, December 14, 2021, 9:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X