ಬಂದ ಬಂದ 'ಬಘೀರ'; ಸೆಲಬ್ರೇಷನ್‌ಗೆ ನೀವ್ ರೆಡಿನಾ?

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾ 'ಬಘೀರ'. ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.

'ಮದಗಜ' ಸಿನಿಮಾ ತೆರೆಕಂಡು ಬರೋಬ್ಬರಿ 3 ವರ್ಷಗಳ ಬಳಿಕ 'ಬಘೀರ' ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಲಿವುಡ್ ರೇಂಜ್ ಮೇಕಿಂಗ್‌ನಿಂದ ಸಿನಿಮಾ ಕುತೂಹಲ ಮೂಡಿಸಿದೆ. ಸಣ್ಣ ಟೀಸರ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ಟ್ರೈಲರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ಅಕ್ಟೋಬರ್ 31ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು ಇದೀಗ ಭರ್ಜರಿ ಪ್ರಮೋಷನ್ ಪ್ಲ್ಯಾನ್ ಶುರುವಾಗಿದೆ.

Sri Murali s Bagheera begins 19 days countdown to release here s the new poster

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಬಘೀರ' ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಸಿನಿಮಾ ಬಿಡುಗಡೆಗೆ 19 ದಿನ ಮಾತ್ರ ಬಾಕಿಯಿದ್ದು ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಲು ಚಿತ್ರತಂಡ ಮುಂದಾಗಿದೆ. ಮೈಸೂರಿನಲ್ಲಿ ಟ್ರೈಲರ್ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಮುಂದಿನ ವಾರವೇ ಟ್ರೈಲರ್ ಬಿಟ್ಟು ಹೈಪ್ ಕ್ರಿಯೇಟ್ ಮಾಡುವ ಲೆಕ್ಕಾಚಾರ ಶುರುವಾಗಿದೆ.

ಪ್ರಶಾಂತ್ ನೀಲ್ ಬರೆದ ಕಥೆಗೆ ಡಾ. ಸೂರಿ ಚಿತ್ರಕಥೆ, ಸಂಭಾಷಣೆ ಬರೆದುಕೊಂಡಿದ್ದಾರೆ. ಎಜೆ ಶೆಟ್ಟಿ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿದೆ. ಚೇತನ್ ಡಿಸೋಜಾ 'ಬಘೀರ' ಚಿತ್ರದ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. ಇನ್ನು ಚಿತ್ರದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮೌನ ವಹಿಸಿದೆ. ಆದಷ್ಟು ಬೇಗ ಪ್ರಮೋಷನ್ ಶುರು ಮಾಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

Sri Murali s Bagheera begins 19 days countdown to release here s the new poster

'ಬಘೀರ' ಎನ್ನುವ ಖಡಕ್ ಟೈಟಲ್‌ನಲ್ಲಿ ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಶ್ರೀಮುರಳಿ ಮಿಂಚಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು ಪ್ರಕಾಶ್ ರಾಜ್, ಗರುಡ ರಾಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪೊಲೀಸ್ ಆಫೀಸರ್ ಆಗಿರುವ 'ಬಘೀರ' ಮಾಸ್ಕ್ ಧರಿಸಿ ಅಬ್ಬರಿಸುವುದು ಯಾಕೆ? ಚಿತ್ರದಲ್ಲಿ ಶ್ರೀಮುರಳಿ ದ್ವಿಪಾತ್ರದಲ್ಲಿ ನಟಿಸಿದ್ದಾರಾ? ಎನ್ನುವ ಪ್ರಶ್ನೆಗಳಿಗೆಲ್ಲಾ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಲೇಟ್ ಆದರೂ ಒಳ್ಳೆ ಸಿನಿಮಾಗಳನ್ನು ಮಾತ್ರ ಮಾಡ್ತೀನಿ. ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವ ಹಠ ಇಲ್ಲ ಎಂದು ಕೆಲ ದಿನಗಳ ಹಿಂದೆ ಶ್ರೀಮುರಳಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದಕ್ಕೆ ತಕ್ಕಂತೆ ಬಹಳ ಸಮಯ ತೆಗೆದುಕೊಂಡು 'ಬಘೀರ' ಸಿನಿಮಾ ಮಾಡಲಾಗಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಆಕ್ಷನ್ ಥ್ರಿಲ್ಲರ್ 'ಬಘೀರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುವುದು ಪಕ್ಕಾ ಎನ್ನಲಾಗ್ತಿದೆ. ದೀಪಾವಳಿ, ರಾಜ್ಯೋತ್ಸವ ರಜೆಯ ಜೊತೆಗೆ ಶನಿವಾರ, ಭಾನುವಾರ ವೀಕೆಂಡ್ ಕೂಡ ಚಿತ್ರದ ಕಲೆಕ್ಷನ್‌ಗೆ ಪ್ಲಸ್ ಆಗಲಿದೆ. ದೀಪಾವಳಿಗೆ ಸಾಮಾನ್ಯವಾಗಿ ತೆಲುಗು, ತಮಿಳಿನ ದೊಡ್ಡ ಚಿತ್ರಗಳು ತೆರೆಗೆ ಬರಬೇಕಿತ್ತು. ಆದರೆ ಈ ಬಾರಿ ಯಾವುದೇ ಸಿನಿಮಾ ಬರ್ತಿಲ್ಲ. ಇದು 'ಬಘೀರ'ನಿಗೆ ವರದಾನವಾಗಲಿದೆ. ಹೊಂಬಾಳೆ ಸಂಸ್ಥೆಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ, ರಿಲೀಸ್ ಮಾಡುವ ಅನುಭವ ಇದೆ. ಹಾಗಾಗಿ ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

ಪ್ರಶಾಂತ್ ನೀಲ್ ಕಥೆ ಎನ್ನುವ ಟ್ರಂಪ್ ಕಾರ್ಡ್ ಪರಭಾಷೆಗಳಲ್ಲಿ 'ಬಘೀರ' ಚಿತ್ರಕ್ಕೆ ಪ್ಲಸ್ ಆಗುವ ನಿರೀಕ್ಷೆಯಿದೆ. ಒಂದೊಳ್ಳೆ ಕಲಾವಿದರು ಹಾಗೂ ತಂತ್ರಜ್ಞರ ತಂಡ ಕಟ್ಟಿಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿತ್ತು. ಟೀಸರ್‌ನ ಪ್ರತಿ ಫ್ರೇಮ್ ಅಬ್ಬಬ್ಬಾ ಎನ್ನುವಂತಿದ್ದು ಸಿನಿಮಾ ನೋಡಲೇಬೇಕು ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Bagheera Roaring in cinemas from October 31st;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X