ಸಿನಿಮಾ ಗಣ್ಯರಿಗೆ 'ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ' ಗೌರವ

By Naveen

ಪ್ರತಿ ವರ್ಷದಂತೆ ಈ ವರ್ಷವೂ 'ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ'ಯನ್ನು ಸಿನಿಮಾರಂಗದ ಗಣ್ಯರಿಗೆ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚಿಗಷ್ಟೆ ಅದ್ದೂರಿಯಾಗಿ ನೆರವೇರಿದೆ. ಸಿನಿಮಾ ಪ್ರಚಾರಕರಾಗಿದ್ದ ದಿವಂಗತ ಡಿ.ವಿ.ಸುದೀಂದ್ರ ಅವರು 'ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ'ಯನ್ನು ಆರಂಭ ಮಾಡಿದ್ದರು.

ಈ ಬಾರಿ ನಿರ್ದೇಶಕ ಎಸ್‌. ನಾರಾಯಣ್‌, ವಿ.ನಾಗೇಂದ್ರಪ್ರಸಾದ್, ನರ್ತನ್, ಸಂತೋಷ್‌ ಆನಂದರಾಮ್, ರಾಜೇಶ್‌ ಬಿ. ಶೆಟ್ಟಿ, ಹಿರಿಯ ನಿರ್ಮಾಪಕ ಕೆ.ಸಿ.ಎನ್‌ ವೇಣುಗೋಪಾಲ್‌, ಹಿನ್ನೆಲೆ ಗಾಯಕಿ ನಂದಿತ, ಮನದೀಪರಾಯ್, ಹಿರಿಯ ಪತ್ರಕರ್ತ ಕೃಷ್ಣರಾವ್, ಬಾಪು ಪದ್ಮನಾಭ, ಕಲಾವಿದೆ ಸುಂದರಶ್ರೀ ಅವರಿಗೆ ಪ್ರಶಸ್ತಿ ನೀಡಲಾಗಿದೆ.

17ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇದಾಗಿದ್ದು, ನಟ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಭಾಗಿಯಾಗಿದ್ದರು. ವಿಶೇಷ ಅಂದರೆ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ತಮ್ಮ ಗುರು ಕಾಶೀನಾಥ್ ಅವರ ಹೆಸರಿನಲ್ಲಿ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲು ಹೇಳಿ ಆ ವೆಚ್ಚವನ್ನು ಅವರು ಬರಿಸುವುದಾಗಿ ಹೇಳಿದರು.

Sri Raghavendra Chithra Vani awards

ಜೊತೆಗೆ ಗೌರಿ ಲಂಕೇಶ್‌ ಹೆಸರನಲ್ಲಿ ಪ್ರಚಾರಕರ್ತರಿಗೆ ಹತ್ತು ಸಾವಿರ ನಗದು ಕೊಡುತ್ತೇನೆ ಎಂದು ಇಂದ್ರಜೀತ್ ಲಂಕೇಶ್, ಹಾಗೂ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು ಸಹ ವಿಷ್ಣುವರ್ಧನ್‌ ಅವರ ಹೆಸರಲ್ಲಿ ಪ್ರಶಸ್ತಿ ನೀಡವುದಾಗಿ ಹೇಳಿದರು.

More from Filmibeat

English summary
Sri Raghavendra Chithra Vani awards ceremony was held in Chamundeshwari Studio Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X