»   » ಜನಪ್ರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

ಜನಪ್ರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Posted By:
Subscribe to Filmibeat Kannada

ಈ ಸಾಲಿನ ಜನಪ್ರಿಯ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪ್ರಶಸ್ತಿಗಳು ಪ್ರಕಟವಾಗಿವೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25ವರ್ಷ ತುಂಬಿದ ಸುಸಂದರ್ಭದಲ್ಲಿ ಅನ್ನದಾತರಾದ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು.

ಎರಡು ಪ್ರಶಸ್ತಿಯೊಂದಿಗೆ ಆರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ನೀಡಲು ಮುಂದಾದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಪ್ರಸಿದ್ಧ ನಟರು, ಪತ್ರಕರ್ತರು ಹಾಗೂ ನಿರ್ದೇಶಕರು ಪ್ರಶಸ್ತಿ ಸಮಾರಂಭಕ್ಕೆ ಜೊತೆಯಾಗಿ ಈ ಸಂಸ್ಥೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಸಂಸ್ಥೆಯ 36ನೇ ವಾರ್ಷಿಕೋತ್ಸವ ಹಾಗೂ 12ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮೇ 25ರ ಶನಿವಾರದಂದು ಸಂಜೆ 6ಕ್ಕೆ ನಗರದ ದಿ.ಬೆಲ್ ಹೋಟಲ್(ರೈಲ್ವೇ ನಿಲ್ದಾಣದ ಪಕ್ಕ)ನಲ್ಲಿ ನಡೆಯಲಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಬಿ.ವಿಜಯಕುಮಾರ್ ಸಮಾರಂಭವನ್ನು ಉದ್ಘಾಟಿಸುತ್ತಾರೆ. ಹಿರಿಯ ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರಾದ ಕೆ.ಎಸ್.ಎಲ್.ಸ್ವಾಮಿ(ರವೀ) ಅಧ್ಯಕ್ಷತೆ ವಹಿಸಲಿದ್ದಾರೆ.

ಖ್ಯಾತ ಕಲಾವಿದರಾದ ರಮೇಶ್‍ಅರವಿಂದ್, ಉಪೇಂದ್ರ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನಂ ಅವರುಗಳು ಅಂದಿನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಶಸ್ತಿಗಳ ವಿವರಗಳು ಸ್ಲೈಡ್ ಗಳಲ್ಲಿ....

ದೊರೈ ಭಗವಾನ್ ಹಿರಿಯ ಚಲನಚಿತ್ರ ನಿರ್ಮಾಪಕರು

ದೊರೈ ಭಗವಾನ್ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ಟಿ.ಜಿ.ಅಶ್ವತ್ಥ್ ನಾರಾಯಣ ಹಿರಿಯ ಚಲನಚಿತ್ರ ಪತ್ರಕರ್ತರು

ಟಿ.ಜಿ.ಅಶ್ವತ್ಥ್ ನಾರಾಯಣ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

ರತ್ನಮಾಲಾಪ್ರಕಾಶ್ ಖ್ಯಾತ ಹಿನ್ನಲೆಗಾಯಕರು

ರತ್ನಮಾಲಾಪ್ರಕಾಶ್ ಖ್ಯಾತ ಹಿನ್ನಲೆಗಾಯಕರು
(`ಡಾ:ರಾಜ ಕುಮಾರ್ ಪ್ರಶಸ್ತಿ' ಪಾರ್ವತಮ್ಮ ರಾಜ್ ಕುಮಾರ್ ಅವರಿಂದ)

ಡಿ.ರಾಜೇಂದ್ರಬಾಬು ನಿರ್ದೇಶಕರು

ಡಿ.ರಾಜೇಂದ್ರಬಾಬು ನಿರ್ದೇಶಕರು
(`ಯಜಮಾನ' ಚಿತ್ರದ ಖ್ಯಾತಿ `ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ' ಭಾರತಿ ವಿಷ್ಣುವರ್ಧನ ಅವರಿಂದ)

ಆರ್.ಸಿ.ಕಲಾ ಕಲಾವಿದರು

ಆರ್.ಸಿ.ಕಲಾ ಕಲಾವಿದರು
(ಖ್ಯಾತ ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)

ಅನೂಪ್ ಸೀಳಿನ್ ಅತ್ಯುತ್ತಮ ಸಂಗೀತ ನಿರ್ದೇಶನ `ಸಿದ್ಲಿಂಗು’ಚಿತ್ರಕ್ಕಾಗಿ

ಅನೂಪ್ ಸೀಳಿನ್ ಅತ್ಯುತ್ತಮ ಸಂಗೀತ ನಿರ್ದೇಶನ `ಸಿದ್ಲಿಂಗು'ಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್ ಟೈನ್ ಮೆಂಟ್ ಪ್ರೈ.ಲಿ ಪ್ರಶಸ್ತಿ)

ಮಂಜುನಾಥ್ ಅತ್ಯುತ್ತಮ ಕಥಾಲೇಖಕರು `ಬಾಲ್ ಪೆನ್’ ಚಿತ್ರ

ಮಂಜುನಾಥ್ ಅತ್ಯುತ್ತಮ ಕಥಾಲೇಖಕರು `ಬಾಲ್ ಪೆನ್' ಚಿತ್ರ
(`ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ' ಮೀನಾಕ್ಷಿ ಜಯರಾಂ ಅವರಿಂದ)

ಕೇಶವಾದಿತ್ಯ ಅತ್ಯುತ್ತಮ ಸಂಭಾಷಣೆ `ಸಂಗೊಳ್ಳಿರಾಯಣ್ಣ’ ಚಿತ್ರಕ್ಕಾಗಿ

ಕೇಶವಾದಿತ್ಯ ಅತ್ಯುತ್ತಮ ಸಂಭಾಷಣೆ `ಸಂಗೊಳ್ಳಿರಾಯಣ್ಣ' ಚಿತ್ರಕ್ಕಾಗಿ
(`ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ' ಡಾ:ಎಚ್.ಕೆ.ನರಹರಿ ಅವರಿಂದ)

ಶ್ರೀ ವಿಜಯಪ್ರಸಾದ್ `ಸಿದ್ಲಿಂಗು’ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ

ಶ್ರೀ ವಿಜಯಪ್ರಸಾದ್ `ಸಿದ್ಲಿಂಗು' ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಂತ್ರಜ್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಬಿ.ಸುರೇಶ್ ಪ್ರಶಸ್ತಿ)

ಕುಮಾರಿ ಡಿ.ಸುಮನಾ ಕಿತ್ತೂರು 'ಎದೆಗಾರಿಕೆ' ಚಿತ್ರದ ಗೀತರಚನೆಗಾಗಿ

ಕುಮಾರಿ ಡಿ.ಸುಮನಾ ಕಿತ್ತೂರು 'ಎದೆಗಾರಿಕೆ' ಚಿತ್ರದ ಗೀತರಚನೆಗಾಗಿ
(ಹಿರಿಯ ಪತ್ರಕರ್ತರಾದ ಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ' ಪತ್ರಕರ್ತ ವಿನಾಯಕರಾಮ್ ಕಲಗಾರು ಅವರಿಂದ )

ಕುಣಿಗಲ್ ನಾಗಭೂಷಣ್ ಹಿರಿಯ ಕಲಾವಿದರು

ಕುಣಿಗಲ್ ನಾಗಭೂಷಣ್ ಹಿರಿಯ ಕಲಾವಿದರು
(`ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ' ನಟ ಸುದೀಪ್ ಅವರಿಂದ)

English summary
The 25th Sri Raghavendra Chitravani awards will be present on May 25th at The Bell Hotel on Saturday evening with huge attendance from the Kannada cinema industry. B Vijaykumar, KFCC President, Dr Bharathi Vishnuvardhana, Dr Jayamala, Parvathamma Rajkumar to be present.
Please Wait while comments are loading...