twitter
    For Quick Alerts
    ALLOW NOTIFICATIONS  
    For Daily Alerts

    ಕಠಾರಿವೀರ ವಿರುದ್ಧ ತಿರುಗಿಬಿದ್ದ ಹಿಂದೂ ಸಂಘಟನೆಗಳು

    By Rajendra
    |

    ಮುನಿರತ್ನ ನಿರ್ಮಿಸಿರುವ ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿರುವ ಭಾರಿ ಬಜೆಟ್ ಹಾಗೂ ಕನ್ನಡದ ಮೊಟ್ಟಮೊದಲ ತ್ರೀಡಿ ಚಿತ್ರ ಎಂಬ ಖ್ಯಾತಿಗೆ ಒಳಗಾಗಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿಬಿದ್ದಿವೆ. ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಹೇಳನ ಮಾಡಲಾಗಿದೆ ಎಂದು ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಗಳು ಆರೋಪಿಸಿವೆ.

    ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು 'ಕಠಾರಿವೀರ' ಚಿತ್ರದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದೆ. ದೇವಲೋಕದಲ್ಲಿ ಅರೆ ಬೆತ್ತಲೆ ಚಿತ್ರ ಚಿತ್ರಿಸಿ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ಇಷ್ಟೇ ಅಲ್ಲದೆ ದೇವೇಂದ್ರನನ್ನು 'ಲೋ ಇಂದ್ರ' ಎಂದು ಕರೆಯಲಾಗಿದೆ. ಯಮಧರ್ಮನನ್ನು ಬ್ಲ್ಯಾಕ್‌ಮೇಲ್ ಮಾಡಿ ಅಪಮಾನ ಮಾಡಲಾಗಿದೆ. ಚಿತ್ರದಲ್ಲಿ ಯಾವುದೇ ಸಂದೇಶವಿಲ್ಲ ಎಂದು ಮುತಾಲಿಕ್ ಚಿತ್ರವನ್ನು ಖಂಡಿಸಿದ್ದಾರೆ. ಸೆನ್ಸಾರ್ ಮಂಡಳಿಗೆ ದೂರು ನೀಡುವುದಾಗಿಯೂ ಮುತಾಲಿಕ್ ಗುಡುಗಿದ್ದಾರೆ. (ಒನ್‌ಇಂಡಿಯಾ ಕನ್ನಡ)

    English summary
    The Hindu right wing organizations Sri Ram Sene, Bajarandal and Vishwa Hindu Parishad protest against Upendra and Ramya lead Kannada mythological film Katari Veera Surasundarangi. The organizations alleges that the scenes in the film 'Katari Veera' is disrespectful towards Hindu deities and it has hurt Hindu religious sentiments.
    Saturday, May 12, 2012, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X