ಮೇ 14ರಂದು ಕಠಾರಿವೀರ ವಿರುದ್ಧ ಪ್ರತಿಭಟನೆ

By Rajendra

'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ಶ್ರೀರಾಮಸೇನೆ ಸಂಘಟನೆ ಮೇ 14ರಂದು ಚಿತ್ರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.

ಮೈಸೂರಿನಲ್ಲಿ ಮಾತನಾಡುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಿತ್ರದ ನಿರ್ಮಾಪಕ ಮುನಿರತ್ನ ವಿರುದ್ಧ ಕಾನೂನು ಸಮರ ಸಾರುತ್ತೇವೆ. ಚಿತ್ರವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸುತ್ತೇವೆ. ಈ ಸಂಬಂಧ ಸೆನ್ಸಾರ್‌ ಮಂಡಳಿಗೂ ಪತ್ರ ಬರೆಯುವುದಾಗಿ ಮುತಾಲಿಕ್ ಹೇಳಿದ್ದಾರೆ.

ಚಿತ್ರದಲ್ಲಿ ದೇವತೆಗಳನ್ನು ಬೂಟುಗಾಲಿನಿಂದ ಒದೆಯುವುದು, ಚಿತ್ರಗುಪ್ತರಿಗೆ ಸ್ತ್ರೀಯೊಬ್ಬಳ ಜೊತೆ ಅಕ್ರಮ ಸಂಬಂಧ ಕಲ್ಪಿಸಿರುವುದು, ಮಹಿಳೆಯೊಬ್ಬರಿಗೆ ಚಿತ್ರಗುಪ್ತ ಕಣ್ಣುಹೊಡೆಯುವಂತಹ ದೃಶ್ಯಗಳಿವೆ. ಈ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. (ಒನ್‍ಇಂಡಿಯಾ ಕನ್ನಡ)

More from Filmibeat

English summary
Sri Ram Sene ( Karnataka) calls for protest against Kannada film Katari Veera Surasundarangi on 14th May said the organization chief Pramod Muthalik in Mysore. The organizations alleges that couple of scenes in the film shows disrespect to Hindu deities and it has hurt Hindu religious sentiments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X