ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ
ಈಗಾಗಲೇ ತೆಲುಗು ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ನಟಿ ಶ್ರೀರೆಡ್ಡಿ ಸ್ಟಾರ್ ಕಲಾವಿದರನ್ನ ಬೆಂಬಿಡದೆ ಕಾಡುತ್ತಿದ್ದಾರೆ. ಒಬ್ಬರ ಹಿಂದೆ ಮತ್ತೊಬ್ಬರಂತೆ ಸ್ಟಾರ್ ನಟ-ನಿರ್ದೇಶಕ-ನಿರ್ಮಾಪಕರ ಬಗ್ಗೆ ಗಂಭೀರ ಆರೋಪ ಮಾಡುತ್ತಲೇ.
ಖ್ಯಾತ ನಿರ್ಮಾಪಕ ಸುರೇಶ್ ಬಾಬು, ಅವರ ಮಗ ಅಭಿರಾಮ್ ದಗ್ಗುಬಾಟಿ, ಇದೀಗ ತೆಲುಗು ನಟ ನ್ಯಾಚುರಲ್ ಸ್ಟಾರ್ ನಾನಿ ಅವರ ಬಗ್ಗೆ ಅತಿ ದೊಡ್ಡ ಆರೋಪ ವರಿಸಿದ್ದಾರೆ.
ಕಾಸ್ಟಿಂಗ್ ಕೌಚ್ ಎಂಬ ಕೆಟ್ಟ ಸಂಸ್ಕೃತಿಯಲ್ಲಿ ನಾನಿಯ ಮುಖವಾಡ ಬಯಲು ಮಾಡುತ್ತೇನೆ. ಅವರೊಬ್ಬ ಕಾಮುಕ ಎಂದು ಕಿಡಿಕಾರಿದ್ದಾರೆ. ಇದೀಗ, ಟಾಲಿವುಡ್ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಏನಿದು ನಾನಿಯ ಹೊಸ ಕಥೆ ಎಂದು ತಿಳಿಯಲು ಮುಂದೆ ಓದಿ.....

ನಾನಿ ಬಗ್ಗೆ ಶ್ರೀರೆಡ್ಡಿ ಹೇಳಿದ್ದೇನು.?
ನ್ಯಾಚುರಲ್ ಸ್ಟಾರ್ ನಾನಿ ಒಂದು ಹುಡುಗಿಗೆ ಒಂದು ದಿನ ಪೂರ್ತಿ ನರಕ ತೋರಿಸಿದ್ದಾನೆ. ನಿನಗೂ ಫ್ಯಾಮಿಲಿ ಇದೆ ಎನ್ನೋದನ್ನ ಮರಿಬೇಡ'' ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ನಾನಿ ಒಬ್ಬ ಕಾಮುಕ
ಬಹುಭಾಷೆಯಲ್ಲಿ ತಯಾರಾಗಿರುವ ಅಮೋಲಿ ಕಿರುಚಿತ್ರಕ್ಕೆ ತೆಲುಗಿನಲ್ಲಿ ನಾನಿ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇದನ್ನ ಖಂಡಿಸಿರುವ ಶ್ರೀರೆಡ್ಡಿ ''ನಾನಿ ಅವರಿಂದ ಯಾಕೆ ವಾಯ್ಸ್ ಕೊಡಿಸಿದ್ರಿ, ಅವನೊಬ್ಬ ಕಾಮುಕ ಎಂದು ಕಾಮೆಂಟ್ ಮಾಡಿದ್ದಾರೆ.

ಸುರೇಶ್ ಬಾಬು ಕಂಡ್ರೆ ಆಗಲ್ಲ
ನಿರ್ಮಾಪಕ ಸುರೇಶ್ ಬಾಬು ಹಿಟ್ಲರ್ ರೀತಿ ಮನುಷ್ಯ ಎಂದು ಕಿಡಿಕಾರಿದ್ದಾರೆ. ಕೇವಲ ಸುರೇಶ್ ಬಾಬು ಮಾತ್ರವಲ್ಲ, ನಿರ್ಮಾಪಕ ದಿಲ್ ರಾಜು ಅವರನ್ನ ಕೂಡ ಟಾರ್ಗೆಟ್ ಮಾಡಿರುವ ನಟಿ, ದಿಲ್ ಇಲ್ಲದೇ ಡಲ್ ರಾಜು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿರಾಮ್ ಫೋಟೋ ಲೀಕ್ ಮಾಡಿದ್ರು
ಇನ್ನು ಸುರೇಶ್ ಬಾಬು ಅವರ ಮಗ, ರಾಣಾ ದಗ್ಗುಬಾಟಿ ಅವರ ಸಹೋದರ ಅಭಿರಾಮ್ ಜೊತೆಗಿನ ಖಾಸಗಿ ಫೋಟೋಗಳನ್ನ ಬಹಿರಂಗಪಡಿಸುವ ಮೂಲಕ ಸಿನಿಲೋಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದರು.


Click it and Unblock the Notifications











